Advertisement

ಹಾಳು ಹಂಪಿಯ ಪುರಾತನ ವೈಭವ 

11:37 AM Apr 22, 2021 | Team Udayavani |

ಇಂದು ಹಾಳು ಹಂಪಿಯ ವೈಭವವನ್ನೇ ವರ್ಣಿಸಲು ಅಸಾಧ್ಯವೆಂದಾದರೆ ಇನ್ನೂ ಅದು ತನ್ನ ವೈಭವದ ಉತ್ತುಂಗದಲ್ಲಿ¨ªಾಗ ಹೇಗಿರಬಹುದು? ಅಂತಹ ಒಂದು ಸಾಮ್ರಾಜ್ಯದ ಬಗ್ಗೆ ತಿಳಿದುಕೊಳ್ಳುವುದೇ ಒಂದು ತೂಕವಾದರೆ ಅದನ್ನು ರೋಚಕವಾಗಿ, ಸ್ವಾರಸ್ಯಕರವಾಗಿ ವಿಶಿಷ್ಟ ರೀತಿಯಲ್ಲಿ ಪ್ರಸ್ತುತಪಡಿಸುವ ತಜ್ಞರ ಬಾಯಿಯಿಂದ ಕೇಳುವ ಅವಕಾಶ ಒದಗಿ ಬಂದರೆ, ಹಬ್ಬವÇÉೆದೆ ಇನ್ನೇನು? ಅಂತಹ ಒಂದು ಸದಾವಕಾಶ ಒದಗಿ ಬಂದದ್ದು ಯುನೈಟೆಡ್‌ ಕಿಂಗ್ಡಮನಲ್ಲಿ ನೆಲೆಸಿರುವ ಕನ್ನಡಿಗರಿಗೆ.

Advertisement

ಕಳೆದ ವಾರ ಇತಿಹಾಸಕಾರರು, ಮೈಸೂರಿನ ಕಥೆಗಳು ಖ್ಯಾತಿಯ ಧರ್ಮೇಂದ್ರ ಕುಮಾರ್‌ ಅವ ರು ಬೆಂಗಳೂರಿನ ಇತಿಹಾಸದ ಬಗ್ಗೆ ಲೀಲಾಜಾಲವಾಗಿ ಸಣ್ಣ ಸಣ್ಣ ಕಥೆಗಳ ಮೂಲಕ ಹಂಚಿಕೊಂಡಿದ್ದರೆ ಅದರ ಮುಂದುವರಿದ ಭಾಗವಾಗಿ ಅವರು ವಿಜಯನಗರ ಸಾಮ್ರಾಜ್ಯದ ಕಿರು ಪರಿಚಯ ಮತ್ತು ಪೂರ್ವಾಪರದ ಬಗ್ಗೆ ತಿಳಿಸಿಕೊಡುವ ಒಂದು ಅದ್ಬುತವಾದ ಪ್ರಯತ್ನವನ್ನು ತಮ್ಮ ಎಂದಿನ ವಿಶಿಷ್ಟವಾದ ಶೈಲಿಯಲ್ಲಿ ಕನ್ನಡಿಗರು ಯುಕೆ ತಂಡ ಆಯೋಜಿಸಿದ್ದ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಎ. 4ರಂದು ಮಾಡಿದರು.

ಪರ್ಷಿಯನ್‌ ದೇಶದ ಪ್ರವಾಸಿಗನಾದ ಅಬ್ದುಲ್‌ ರಜಾಕ್‌ ವರ್ಣಿಸಿದಂತೆ ವಿಜಯನಗರ ಸಾಮ್ರಾಜ್ಯ ಹೇಗಿತ್ತೆಂದರೆ ಅದು ಬಂಗಾಳದಿಂದ ಶ್ರೀಲಂಕಾದವರೆಗೂ ಮತ್ತು ಮಲಬಾರದಿಂದ ಕಲಬುರ್ಗಿಯವರೆಗೂ ವಿಸ್ತಾರವಾಗಿ ಹಮ್ಮಿಕೊಂಡು, 300ಕ್ಕೂ ಹೆಚ್ಚು ಬಂದರುಗಳನ್ನು ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿತ್ತು. ಇಷ್ಟೊಂದು ದೊಡ್ಡದಾದ ಸಾಮ್ರಾಜ್ಯವನ್ನು ಕಟ್ಟಿ ಸಮರ್ಪಕವಾಗಿ ಅದರ ಆಡಳಿತವನ್ನು ನಡೆಸುವ ಹಿಂದಿರುವ ಆತ್ಮಬಲ, ಧೈರ್ಯ, ಸ್ಥೈರ್ಯ, ಶಕ್ತಿ ಎಲ್ಲವೂ ತನ್ನ ಸೈನ್ಯದೆಂದು ಅದಕ್ಕಾಗಿ ಬರುವ ಆದಾಯದ ಪ್ರತಿಶತ 50ರಷ್ಟು ಅದಕ್ಕಾಗಿ ಮಿಸಲಿಡುವುದಾಗಿ ಸ್ವತಃ ಶ್ರೀ ಕೃಷ್ಣ ದೇವರಾಯ ತನ್ನ ಅಮುಕ್ತ ಮಾಲಿಕೆಯಲ್ಲಿ ಸೊಗಸಾದ ಸಂಸ್ಕೃತದ ಸೈನ್ಯಾದ್ವಿನಾ ನೈವ ರಾಜ್ಯಂ, ನ ಧನಂ ನ ಪರಾಕ್ರಮ: ಶ್ಲೋಕವನ್ನು ಉಲ್ಲೇಖೀಸುವುದರ ಮೂಲಕ ಬರೆದುಕೊಂಡಿರುವುದಾಗಿ ತಿಳಿಸಿದರು.

ಇನ್ನೂಬ್ಬ ವಿದೇಶಿ ಪ್ರವಾಸಿಗನಾದ ಡೊಮಿಂಗೋ ಪಯಸ್‌ ಎನ್ನುವವನು ವಿಜಯನಗರ ಸಾಮ್ರಾಜ್ಯದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಮಹಡಿ ಮನೆಗಳಿದ್ದುದ್ದನ್ನು ಕಂಡಿದ್ದಾಗಿ ಮತ್ತು ಅಲ್ಲಿನ ಸಕಲ ಶ್ರೀಮಂತಿಕೆಯನ್ನು ತನ್ನಿಂದ ವರ್ಣಿಸಲಾಗದೆ ಅರ್ಧಕ್ಕೆ ನಿಲ್ಲಿಸಿದ್ದಾಗಿ ಅವನು ಬರೆದು ಕೊಂಡಿದ್ದು ಅಂತಹ ಒಂದು ಸಾಮ್ರಾಜ್ಯವನ್ನು ಕ್ರಿ.ಶ.1336ರಲ್ಲಿ ಹರಿಹರ ಬುಕ್ಕರಾಯರು ಸ್ಥಾಪಿಸಿದ್ದರು ಎಂದು ತಿಳಿಸಿದರು.
ಎಲ್ಲ ವೈಭವಗಳಿಂದ ಮೆರೆಯು ತ್ತಿ ದ್ದ ವಿಜಯನಗರದ ಸಾಮ್ರಾಜ್ಯಕ್ಕೆ ಕಳಶವಿಟ್ಟಂತೆ ಕ್ರಿ.ಶ. 1513ರಲ್ಲಿ ಒಡಿಶಾ ಪ್ರಾಂತ್ಯ ದ ಗಜಪತಿ ಮಹಾರಾಜನ ಸಂಸ್ಥಾನವನ್ನು ಗೆದ್ದುದ್ದರ ಪ್ರತೀಕವಾಗಿ ಶ್ರೀ ಕೃಷ್ಣ ದೇವರಾಯ ಮಹಾನವಮಿ ದಿಬ್ಬವನ್ನು ಕಟ್ಟಿಸಿದ್ದು, ಅದು ಸುಂದರವಾದ ಮೂರು ಮಹಡಿಯದಾಗಿತ್ತು. ಅದರ ಮೇಲೆ ಕುಳಿತು ವಿಜೃಂಭಣೆಯಿಂದ ನೆರ ವೇ ರಿ ಸು ತ್ತಿದ್ದ ದಸರಾ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಕ್ಷಿಸುತ್ತಿದ್ದರು. ಹಂಪಿಗೆ ಹೋದರೆ ಅದರ ಕುರುಹುಗಳನ್ನು ಕಾಣ ಬ ಹುದು ಎಂದರು.

ಮಹಾನವಮಿ ದಿಬ್ಬದ ಮೇಲೆ ನಿಂತು ನೋಡಿದರೆ ಕಾಣುವ ಮೂವರು ರಾಣಿಯರ ಅರಮನೆಯಲ್ಲಿ ನಾಲ್ಕುವರೆ ಸಾವಿರಕ್ಕಿಂತ ಹೆಚ್ಚು ದೀಪಗಳನ್ನು ಹಚ್ಚಿ ಇಡುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿತ್ತು ಹಾಗೂ ಪ್ರತಿಯೊಂದು ರಾಣಿಯರ ಅರಮನೆಯಲ್ಲಿ ಅಷ್ಟೊಂದು ದೀಪಗಳನ್ನು ದಸರಾ ಸಮಯದಲ್ಲಿ ಹಚ್ಚಿ ಇಡಲಾಗುತ್ತಿತ್ತು ಎಂದರೆ ಅದರ ಶ್ರೀಮಂತಿಕೆಯ ವೈಭವ ಎಷ್ಟಿರಬಹುದು? ಇಡಿ ರಾಣಿವಾಸಕ್ಕೆ 12 ಸಾವಿರಕ್ಕೂ ಹೆಚ್ಚು ಬಲವಾದ ಮಹಿಳಾ ಸೈನಿಕರ ಕಾವಲನ್ನು ಅದು ಹೊಂದಿತ್ತು. ಈ ಮಹಿಳಾ ಸೈನ್ಯವು ಪಾಕಶಾಸ್ತ್ರರಿಂದ ಹಿಡಿದು ಶಸ್ತ್ರಾಸ್ತ್ರಗಳವರೆಗಿನ ಎಲ್ಲ ವಿದ್ಯೆಗಳಲ್ಲಿ ಪರಿಣಿತಿಯನ್ನು ಹೊಂದಿತ್ತು. ಅಷ್ಟೇ ಅಲ್ಲದೆ ಪ್ರತಿಯೊಬ್ಬ ರಾಣಿಯರಿಗೂ 400ಕ್ಕೂ ಹೆಚ್ಚು ಬೆಂಗಾವಲು ಪಡೆಗಳಿದ್ದವು. ರಾಣಿಯರು ಹಾಕಿಕೊಳ್ಳುವ ಆಭರಣಗಳ ವಿಚಾ ರ ವಾ ದರೆ ಅವುಗಳ ಭಾರಕ್ಕೆ ರಾಣಿಯರು ಕುಸಿಯದಂತೆ ನೋಡಿಕೊಳ್ಳಲು ಅವರು ಎರಡು ಬದಿಯಲ್ಲಿ ನಾಲ್ಕು ಜನರಂತೆ ಸಹಾಯಕಿರು ಇರುತ್ತಿದ್ದರು. ಇಂತಹ ಹಲ ವಾರು ವಿಚಾ ರ ಗಳ ಕುರಿತು ಪ್ರವಾಸಿಗರು ಬಣ್ಣಿಸಿದ್ದಾಗಿ ಅವರು ತಿಳಿಸಿದರು.

Advertisement

ಇದು ಕೇವಲ ಅತ್ಯಂತ ಕಿರು ಪರಿಚಯ. ವಿಜಯನಗರ ಸಾಮ್ರಾಜ್ಯದ ಬಗ್ಗೆ ತಕ್ಕ ಮಟ್ಟಿಗೆ ತಿಳಿಸಿಕೊಡಬೇಕಾದರೆ ಕನಿಷ್ಠ 10 ರಿಂದ 12 ಸಂಚಿಕೆಗಳು ಬೇಕಾಗಬಹುದು. ವಿಜಯನಗರದ ಹುಟ್ಟಿನ ಹಿಂದಿರುವ ಮೂಲ, ಬೆಳೆದು ಬಂದ ಬಗೆ, ವೈಭವದಿಂದ ಮೆರೆದ ರೀತಿಯ ಕುರಿತು ಹಂಚಿ ಕೊಂಡ ಎಂದ ಧರ್ಮೇಂದ್ರ ಕುಮಾರ್‌, ಕೇವಲ ಅರ್ಧ ಮುಕ್ಕಾಲು ಗಂಟೆಯಲ್ಲಿ ತಿಳಿದುಕೊಳ್ಳುತ್ತೇವೆ ಎನ್ನುವುದು ಅಸಮಂಜಸ ಎಂದು ಅಭಿಪ್ರಾಯಪಟ್ಟರು.

ಕನ್ನಡ ಬಳಗ ಯುಕೆಯ ಹಿರಿಯರಾದ ರಾಮ ಮೂರ್ತಿ ಅವರು, ತಾವು ಬರೆದ ಒಂದು ಲೇಖನವನ್ನು ಉÇÉೇಖೀಸಿ ಕೇಳಿದ ಪ್ರಶ್ನೆಗೆ ಉತ್ತ ರಿ ಸಿದ ಧರ್ಮೇಂದ್ರ ಕುಮಾರ್‌, ವಿಜಯ ನಗರ ಸಾಮ್ರಾ ಜ್ಯ ಮೊಘಲರ ದಾಳಿಗಳನ್ನು ತಡೆದು ದಕ್ಷಿಣ ಭಾರತವನ್ನು ರಕ್ಷಿಸಿದ ಪ್ರಮುಖ ಸಾಮ್ರಾಜ್ಯ ಎನ್ನು ವು ದ ರಲ್ಲಿ ಎರಡು ಮಾತಿಲ್ಲ. ಅಂತಹ ಸಾಮ್ರಾಜ್ಯ ಇಂದು ಹಾಳು ಹಂಪಿಯಾಗಲು ಪ್ರಮುಖ ಕಾರಣ ಬಹುಮನಿ ಸುಲ್ತಾನರೇ ಹೊರತು ಯಾವ ಒಳಜಗಳಗಳೂ ಅಲ್ಲ. ಶೈವ ಮತ್ತು ವೈಷ್ಣವ ಪಂತದ ನಡುವೆ ಒಳಜಗಳವಿತ್ತು. ಆದರೆ ಅದು ಎಲ್ಲ ಕಾಲ ದಲ್ಲೂ ಇತ್ತು. ಆದರೆ ಅದು ಹಂಪಿ ಹಾಳಾ ಗಲು ಕಾರ ಣ ವಲ್ಲ ಎಂದು ಪ್ರತಿ ಪಾ ದಿ ಸಿ ದರು.

ರಕ್ಕಸಗಿ ತಂಗಡಗಿ ಯುದ್ಧದಲ್ಲಿ ಅಳಿಯ ರಾಮರಾಯ ಸೋತ ಸುದ್ದಿಯನ್ನು ಕೇಳಿ ಸುಮಾರು 1,600 ಆನೆಗಳ ಮೇಲೆ ಸಂಪತ್ತನ್ನು ತಿರುಪತಿಗೆ ಸಾಗಿಸಲಾಯಿತು. ದಾರಿಯಲ್ಲಿ ಪೆನಕೊಂಡಕ್ಕು ಒಂದಿಷ್ಟು ಬಂದು ಸೇರಿತು. ಹೀಗಾಗಿ ಹಂಪಿಯಲ್ಲಿ ಸುಲ್ತಾನರಿಗೆ ಅವರ ಅಪೇಕ್ಷೆಗೆ ತಕ್ಕಷ್ಟು ಸಂಪತ್ತು ದೊರೆಯದ ಕಾರಣ ದೇವಾಲಯಗಳನ್ನು ಒಡೆಯುವ ಪ್ರಯತ್ನ ಮಾಡಿ ವಿಫ‌ಲವಾದಾಗ ಅಲ್ಲಿ ಬೆಂಕಿ ಇಟ್ಟರು. ಆ ಬೆಂಕಿ 6 ತಿಂಗಳುಗಳ ಕಾಲ ಹೊತ್ತಿ ಉರಿದ ಪರಿ ಣಾಮ ದೇವಾಲಯದ ಕಲ್ಲುಗಳು ಕಪ್ಪು ಬಣ್ಣಕ್ಕೆ ತಿರುಗಿತ್ತು ಎಂಬು ದನ್ನು ವಿವರಿಸಿದರು.
ಕೊನೆಯಲ್ಲಿ ಕನ್ನಡಿಗರು ಯುಕೆ ತಂಡದ ಕಾರ್ಯಕಾರಿ ಸಮಿತಿ ಸದಸ್ಯರಾದ ರಶ್ಮಿ ಮಚಾನಿ ಅವ ರ ವಂದನಾ ರ್ಪ ಣೆ ಯೊಂದಿಗೆ ಸಂವಾದ ಮುಕ್ತಾಯವಾಯಿತು.
– ಗೋವರ್ಧನ ಗಿರಿ ಜೋಷಿ, ಲಂಡನ್‌

Advertisement

Udayavani is now on Telegram. Click here to join our channel and stay updated with the latest news.

Next