ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡಿ, ಕ್ಷಮೆ ಕೇಳಿದ್ದ ಸುದ್ದಿ ವಾಹಿನಿಯ ನಿರೂಪಕ ರೋಹಿತ್ ರಂಜನ್ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ಮಾಡಲಿದೆ.
ತಪ್ಪಾದ ವಿಚಾರದಲ್ಲಿ ನಿರೂಪಕ ಕ್ಷಮೆ ಕೇಳಿದ್ದರೂ ಈಗಾಗಲೇ ಒಮ್ಮೆ ಬಂಧಿಸ ಲಾಗಿದೆ. ಬೇರೆ ಬೇರೆ ರಾಜ್ಯಗಳ ಪೊಲೀಸ ರು ರೋಹಿತ್ ಬಂಧನಕ್ಕೆ ಯತ್ನಿಸುತ್ತಿರುವ ಹಿನ್ನೆಲೆ ತುರ್ತಾಗಿ ವಿಚಾರಣೆ ಮಾಡ ಬೇಕೆಂದು ನ್ಯಾಯಾಲಯದಲ್ಲಿ ಅವರ ಪರ ವಕೀಲರು ಕೇಳಿಕೊಂಡಿದ್ದಾರೆ. ಇದಕ್ಕೆ ನ್ಯಾಯಪೀಠ ಸಮ್ಮತಿಸಿದೆ.
ಇದೇ ವೇಳೆ, ರೋಹಿತ್ ಮತ್ತವರ ಸುದ್ದಿವಾಹಿನಿ ವಿರುದ್ಧ ಕಾಂಗ್ರೆಸ್ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡ ಗಳ ಪ್ರಾಧಿಕಾರಕ್ಕೆ ದೂರು ನೀಡಿದೆ.
ಮತ್ತೆ ಬಂಧನಕ್ಕೆ ಯತ್ನ: ಮಂಗಳವಾರ ರೋಹಿತ್ ಅವರನ್ನು ಬಂಧಿಸುವಲ್ಲಿ ವಿಫಲವಾಗಿದ್ದ ಛತ್ತೀಸ್‌ಗಢ ಪೊಲೀಸರು ಬುಧವಾರ ಮತ್ತೆ ಅವರ ಬಂಧನಕ್ಕೆ ಮುಂದಾಗಿದ್ದಾರೆ. ಬೆಳಗ್ಗೆ 9 ಗಂಟೆ ರಾಯು³ರ ಪೊಲೀಸರು ರೋಹಿತ್ ಮನೆಗೆ ತೆರಳಿದ್ದರು. ಆದರೆ ರೋಹಿತ್ ತಲೆಮರೆಸಿಕೊಂಡಿದ್ದಾರೆ
ಎಂದು ಪೊಲೀಸರು ದೂರಿದ್ದಾರೆ.
ಮಂಗಳವಾರ ಜಾರ್ಖಂಡ್ ಪೊಲೀಸರ ಜತೆ ಉ.ಪ್ರ.ದ ಪೊಲೀಸರೂ ರೋಹಿತ್ ಮನೆಗೆ ತೆರಳಿ, ಅವರನ್ನು ಬಂಧಿಸಿದ್ದರು. ಅದೇ ದಿನ ಸಂಜೆಯೇ ಅವರಿಗೆ ಜಾಮೀನು ನೀಡಿ, ಮನೆಗೆ ವಾಪಸು ಕಳುಹಿಸಲಾಗಿತ್ತು. ಈ ವಿಚಾರವನ್ನು ನೋಯ್ಡಾದ ಪೊಲೀಸರು ತಮಗೆ ತಿಳಿಸಿಲ್ಲ ಎಂದೂ ರಾಯು³ರ ಪೊಲೀಸರು ಆರೋಪಿಸಿದ್ದಾರೆ.