Advertisement

ಅನಾದಿ ಕಲೆ ಗಿಂಡಿನರ್ತನ

12:47 PM Oct 26, 2018 | Team Udayavani |

ಗಿಂಡಿನರ್ತನ ಒಂದು ವಿಶಿಷ್ಟವಾದ ಅನಾದಿ ಕಲೆ. ದೇವಸ್ಥಾನಗಳಲ್ಲಿ, ಧಾರ್ಮಿಕ ಸಮಾರಂಭಗಳ ಸಂದರ್ಭದಲ್ಲಿ ಇದನ್ನು ಪ್ರದರ್ಶಿಸಲಾಗುತ್ತದೆ.ನರ್ತನಕಾರ ಧೋತಿಯನ್ನು ಕಚ್ಚೆ ಹಾಕಿ ಉಟ್ಟುಕೊಂಡು, ತುಂಬು ತೋಳಿನ ಅಂಗಿ, ಎದೆಗೆ ಬಣ್ಣದ ಶಾಲು, ಸೊಂಟಕ್ಕೆ ವಸ್ತ್ರ, ಹಣೆಗೆ ತಿಲಕ, ಕೊರಳಲ್ಲೊಂದು ಹೂವಿನ ಹಾರ, ಕಾಲ್ಗಳಿಗೆ ಗೆಜ್ಜೆ, ಕೈಗಳಲ್ಲಿ ತಾಳ ಯಾ ಚಿಟಿಕೆ ಹಿಡಿದು ಹಿಮ್ಮೇಳದ ಸಂಗೀತಕ್ಕೆ ಸರಿಯಾಗಿ ಹೆಜ್ಜೆ ಹಾಕತೊಡಗುತ್ತಾನೆ. ಅವನ ತಲೆಯ ಮೇಲೊಂದು ನೀರು ತುಂಬಿದ ಹಿತ್ತಾಳೆಯ ಅಲಂಕೃತ ಗಿಂಡಿ ಇರುತ್ತದೆ. ಅದು ಅಲುಗಾಡದಂತೆ ಹಾಗೂ ಅದರಲ್ಲಿರುವ ನೀರು ಚೆಲ್ಲದಂತೆ ಕುಣಿಯುವುದೇ ಗಿಂಡಿನರ್ತನ. ಜೊತೆಯಲ್ಲಿ ಕೋಲಾಟಗಾರರೂ ಇರುತ್ತಾರೆ. ಹಿನ್ನೆಲೆಯಲ್ಲಿ ಈ ನೃತ್ಯಕ್ಕೆ ಅನುಗುಣವಾದ ಹಾಡುಗಳನ್ನು ಹಾಡುವ ಹಾಡುಗಾರರಿರುತ್ತಾರೆ.

Advertisement

ಭಜನಾ ಸಪ್ತಾಹದ ಸಂದರ್ಭದಲ್ಲಿ ದೇವರ ಮುಂಭಾಗದಲ್ಲಿ ದೊಡ್ಡ ದೀಪ ಬೆಳಗುತ್ತಾ ಇರುವುದರಿಂದ ಗಿಂಡಿ ನರ್ತಕರು ಅದರ ಸುತ್ತ ಕುಣಿಯುತ್ತಾರೆ. ಕುಣಿಸುವವರ ಹಾಡಿಗೆ ತಕ್ಕಂತೆ ನರ್ತನಕಾರ ತಾನೂ ಹಾಡುತ್ತ ವಿವಿಧ ಭಾವಭಂಗಿಗಳಲ್ಲಿ ಕುಣಿಯುತ್ತಾನೆ. ಕೈಯಲ್ಲಿ ಕೋಲನ್ನು ಹಿಡಿದು ಕೋಲಾಟವನ್ನೂ ಪ್ರದರ್ಶಿಸುತ್ತಾನೆ. ನರ್ತನದ ಕೊನೆಯಲ್ಲಿ ಗಿಂಡಿ ಹೊತ್ತುಕೊಂಡೇ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವ ದೃಶ್ಯ ರೋಮಾಂಚನ ಉಂಟುಮಾಡುತ್ತದೆ.

ಇದನ್ನು ಉಳಿಸಿಕೊಳ್ಳಬೇಕೆಂಬ ಸಂಕಲ್ಪ ತೊಟ್ಟು ಗಿಂಡಿನರ್ತನ ಅಭ್ಯಸಿಸಿದವರು ಕುಂದಾಪುರ ನಾಡದ ಸತೀಶ್‌.ಎಮ್‌. ನಾಯಕ್‌. ಹಲವು ಊರುಗಳಲ್ಲಿ ಪ್ರದರ್ಶನಗೊಂಡ ಸತೀಶ್‌ ನಾಯಕರ ಗಿಂಡಿನರ್ತನ ಜನಮನ ಸೂರೆಗೊಂಡಿದೆ.  

Advertisement

Udayavani is now on Telegram. Click here to join our channel and stay updated with the latest news.

Next