Advertisement

ಪೊಲೀಸರು ಕರ್ತವ್ಯ ನಿಲ್ಲಿಸಿದರೆ ಅರಾಜಕತೆ

12:39 PM Oct 22, 2021 | Team Udayavani |

ಮೈಸೂರು: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಎಂದು ಮೈಸೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಂ.ಎಲ್ ರಘುನಾಥ್‌ ಹೇಳಿದರು. ಜಿಲ್ಲಾ ಪೊಲೀಸ್‌ ಕಚೇರಿ ಪಕ್ಕದಲ್ಲಿರುವ ಪೊಲೀಸ್‌ ಹುತಾತ್ಮರ ಸ್ಮಾರಕ ಉದ್ಯಾನವನದಲ್ಲಿ ಪೊಲೀಸ್‌ ಮಹಾನಿರೀಕ್ಷಕರು ದಕ್ಷಿಣ ವಲಯ, ಮೈಸೂರು ನಗರ, ಮೈಸೂರು ಜಿಲ್ಲೆ, ಕರ್ನಾಟಕ ಪೊಲೀಸ್‌ ಅಕಾಡೆಮಿ, ಕೆಎಸ್‌ ಆರ್‌ಪಿ ಮತ್ತು ಕೆಎಆರ್‌ಪಿ ಘಟಕಗಳಿಂದ ನಡೆದ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದರು.‌

Advertisement

ದೇಶದ ಹೊರಗಿನ ಶತ್ರುಗಳ ಜತೆ ಸೈನಿಕರು ಹೋರಾಡಿದರೆ, ದೇಶದೊಳಗಿನ ಶತ್ರುಗಳ ಜತೆ ಪೊಲೀಸರು ನಿರಂತರವಾಗಿ ಹೋರಾಟ ನಡೆಸುತ್ತಾರೆ. ಒಂದು ದಿನ ಪೊಲೀಸ್‌ ವರ್ಗ ಏನಾದರೂ ಕರ್ತವ್ಯ ನಿಲ್ಲಿಸಿದರೆ ದೇಶದಲ್ಲಿ ಏನು ಅರಾಜಕತೆ ಉಂಟಾಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ.

ಅಂತಹ ಸಮಯದಲ್ಲಿ ದಿನದ 24 ಗಂಟೆಯೂ ಸ್ವಾರ್ಥ ಮನೋಭಾವವಿಲ್ಲದೆ ದೇಶಕ್ಕಾಗಿ ಸೇವೆ ಸಲ್ಲಿಸುವ ವರ್ಗವಿದೆ ಎಂದರೆ ಅದು ಪೊಲೀಸ್‌ ವರ್ಗ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹುತಾತ್ಮರಿಗೆ ನಮನ: ಅ. 21 ಪೊಲೀಸರ ಹುತಾತ್ಮ ದಿನಾಚರಣೆ ಮಾಡುವುದು ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದಂತಹ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಹುತಾತ್ಮರಾದವರೆಲ್ಲರಿಗೆ ನಮನ ಸಲ್ಲಿಸುವುದಾಗಿದೆ. ಭಾರತದಲ್ಲಿ ಒಟ್ಟು 6 ದಿನಗಳನ್ನು ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ. ಮಹಾತ್ಮ ಗಾಂಧೀಜಿ, ಭಗತ್‌ ಸಿಂಗ್‌, ಝಾನ್ಸಿರಾಣಿ ಲಕ್ಷ್ಮಿಬಾಯಿ, ಲಾಲಾ ಲಜಪತರಾಯ್‌ ಹುತಾತ್ಮರಾದ ದಿನವನ್ನು ಆಚರಿಸುತ್ತಿದ್ದೇವೆ.

ಇಂದು ವಿಶೇಷವಾಗಿ ಹುತಾತ್ಮರ ದಿನಾಚರಣೆ ಅಂದರೆ ಪೊಲೀಸ್‌ ಇಲಾಖೆಯಲ್ಲಿ ಇಲಾಖೆಗಾಗಿ ದೇಶಕ್ಕಾಗಿ ಸೇವೆ ಮಾಡಿ ತಮ್ಮ ತನು ಮನ ಧನ ಮತ್ತು ಪ್ರಾಣಗಳನ್ನು ಅರ್ಪಿಸತಕ್ಕಂತಹ ಪೊಲೀಸ್‌ ಸಿಬ್ಬಂದಿ ತ್ಯಾಗವನ್ನು ಸ್ಮರಿಸಲು ಹುತಾತ್ಮರ ದಿನ ಆಚರಿಸುತ್ತಿದ್ದೇವೆ ಎಂದು ಹೇಳಿದರು.

Advertisement

ಕರ್ನಾಟಕ ಪೊಲೀಸ್‌ ಅಕಾಡೆಮಿಯ ನಿರ್ದೇಶಕ ವಿಫ‌ುಲ್‌ ಕುಮಾರ್‌, ದಕ್ಷಿಣ ವಲಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಮಧುಕರ್‌ ಪವಾರ್‌, ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಎಸ್ಪಿ ಆರ್‌.ಚೇತನ್‌, ಕೆಪಿಎ ಉಪನಿರ್ದೇಶಕಿ ಡಾ.ಸುಮನ್‌ ಡಿ.ಪನ್ನೇಕರ್‌, ಪಿಟಿಎಸ್‌ ಪ್ರಾಂಶುಪಾಲೆ ಧರಣಿದೇವಿ ಮಾಲಗತ್ತಿ, ಎಸಿಬಿ ಎಸ್ಪಿ ಅರುಣಾಂಗುÒ ಗಿರಿ, ಡಿಸಿಪಿಗಳಾದ ಪ್ರದೀಪ್‌ ಗುಂಟಿ, ಗೀತ ಪ್ರಸನ್ನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next