ದಾಂಡೇಲಿ: ಇಡೀ ದೇಶವೆ ಲೋಕಸಭಾ ಚುನಾವಣೆಗೆ ಕಾಯುತ್ತಿದೆ. ಮೂರನೇ ಬಾರಿಗೆ ನರೇಂದ್ರ ಮೋದಿಯವರನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡುವ ಮೂಲಕ ಮೋದಿ ನೇತೃತ್ವದಲ್ಲಿ ಭಾರತ ಸರಕಾರವಲ್ಲ, ಇಡೀ ವಿಶ್ವ ಸರಕಾರ ಮಾಡುವ ಉದ್ದೇಶ ದೇಶವಾಸಿಗಳಾದ್ದು ಮಾತ್ರವಲ್ಲ, ವಿಶ್ವದ ಎಲ್ಲಾ ದೇಶಗಳ ಆಶಯವಾಗಿದೆ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.
ನನ್ನ ಮೇಲೆ ಪ್ರಕರಣವನ್ನು ದಾಖಲಿಸಿ, ನನ್ನನ್ನು ಮತ್ತೇ ಹೋರಾಟದ ಮುನ್ನಲೆಗೆ ಬರುವಂತೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೃತಜ್ಞತೆಗಳು. ಅಯೋಧ್ಯೆಯ ರಾಮ ಮಂದಿರವನ್ನು ಯಾರೋ ಗುತ್ತಿಗೆದಾರರು ಕಟ್ಟಿದ್ದಲ್ಲ ಅದು ಹಿಂದೂ ಸಮಾಜದ ಭಾವನೆಗಳಿಂದ ಹಾಗೂ ಜಾಗೃತ ಹಿಂದೂಸಮಾಜ ಕಟ್ಟಿರುವಂತಹ ದೇವಸ್ಥಾನ. ಮಹಮ್ಮದ್ ಘಜ್ನಿಯಿಂದ ಶುರುವಾದ ದಂಡಯಾತ್ರೆ ಅಂದಿನಿಂದ ಹಿಂದೂ ಧರ್ಮದವರ ಮೇಲೆ ನಡೆದ ಅತ್ಯಾಚಾರ ಅನ್ಯಾಯವನ್ನು ಅನುಭವಿಸಿದ್ದ ಹಿಂದೂ ಸಮಾಜ ಅದನ್ನೆಲ್ಲವನ್ನು ಮೀರಿ ಇಂದು ತಲೆ ಎತ್ತಿ ನಿಂತಿದೆ. ನಮ್ಮ ಹೋರಾಟಕ್ಕೆ ಇಂದು ಜಯವಾಗಿದ್ದು, ಇದು ಮೊದಲ ಜಯ ಎಂದು ಅನಂತಕುಮಾರ್ ಹೆಗಡೆ ಹೇಳಿದರು.
ಅವರು ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳ ಜೊತೆ ಮಾತನಾಡುತ್ತಾ,ಚ ಹಿಂದೂ ಸಮಾಜ ಜಾತ್ಯಾತಿತತೆಯಿಂದ ಒಡೆದ ತುತ್ತೂರಿಯ ಧ್ವನಿಯಲ್ಲ, ಇದು ಹಿಂದೂ ಸಮಾಜದ ಜಾಗೃತ ರಣಕಹಳೆ. ಮೂರನೆ ಬಾರಿಯು ಮೋದಿ ಸರ್ಕಾರ ಬರುತ್ತದೆ. ಚುನಾವಣೆಯಲ್ಲಿ ಈ ಬಾರಿಯ ಗೆಲುವು ಮುಂದೆ ಯಾರು ಮುರಿಯದಂತಹ ದಾಖಲೆಯ ಗೆಲುವಾಗುತ್ತದೆ. ಬಿಜೆಪಿ ಪಕ್ಷಕ್ಕೆ ಆ ಶಕ್ತಿಯಿದೆ. ಬಿಜೆಪಿ ಗೆಲುವು ನಿಶ್ಚಿತ ಎಂದರು. ಪ್ರಧಾನ ಮಂತ್ರಿ ಕೇವಲ ಭಾರತದ ನಾಯಕರಲ್ಲ ಅವರು ವಿಶ್ವ ನಾಯಕ. ಸಿದ್ದರಾಮಯ್ಯವರು ಹಲವು ಬಾರಿ ಮೋದಿಜಿಯವರನ್ನು ಏಕವಚನದಲ್ಲಿ ಮಾತನಾಡಿದ್ದಾರೆ. ಇದನ್ನೆಲ್ಲ ನಾವು ಸಹಿಸಲ್ಲ. ನೀವು ಏಕವಚನದಲ್ಲಿ ಮಾತನಾಡಿದರೆ, ನಾವು ಏಕ ವಚನದಲ್ಲಿ ಮಾತನಾಡುತ್ತೆವೆ ಎಂದು ಗುಡುಗಿದ ಅವರು ಸಿದ್ದರಾಮಯ್ಯನವರೆ ಮೊದಲು ನಿವು ಸಭ್ಯತೆ ಮತ್ತು ಸಂಸ್ಕೃತಿಯನ್ನು ಕಲಿಯಿರಿ, ದುರಹಂಕಾರ ಬಿಟ್ಟುಬಿಡಿ ಎಂದು ತಿರುಗೇಟು ನೀಡಿದರು. ಶಾಸಕ, ಸಂಸದ ಯಾರು ಆಗಬಹುದು ಆದರೆ ಒಬ್ಬ ನಾಯಕನಾಗಬೇಕಾದರೆ ವಿವಾದವನ್ನು ಸ್ಥಾನ ಮಾಡಬೇಕು. ಎದುರಗಡೆ ಎದೆಕೊಟ್ಟು ನಿಲ್ಲಬೇಕು, ಯಾರು ಎನೇ ಹೇಳಿದರೂ ಅದನ್ನೆದುರಿಸುವ ತಾಕತ್ತು ಬೇಕು. ಜನಗಳು ನೀಡಿದಂತ ಮತಗಳು ನನಗೆ ಆ ತಾಕತ್ತು ಕೊಟ್ಟಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ, ಗೆಲ್ಲಿಸುತ್ತೆವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ, ದಾಂಡೇಲಿ ಮಂಡಳದ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ, ಪಕ್ಷದ ಮಾಜಿ ಅಧ್ಯಕ್ಷರುಗಳಾದ ರೋಶನ್ ನೇತ್ರಾವಳಿ, ಅಶೋಕ್ ಪಾಟೀಲ್, ಸುಧಾಕರ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಕಲಶೆಟ್ಟಿ, ಪಕ್ಷದ ಮುಖಂಡರುಗಳಾದ ಕೃಷ್ಣ ಎಸಳೆ, ಗುರು ಮಠಪತಿ, ಗಿರೀಶ್ ಟೊಸೂರು, ಟಿ.ಎಸ್.ಬಾಲಮಣಿ, ನರೇಂದ್ರ ಚೌವ್ಹಾಣ್, ಶಾರದಾ ಪರಶುರಾಮ, ದಶರಥ ಬಂಡಿವಡ್ಡರ, ರೋಶನಜಿತ್, ಮಹಾದೇವಿ ಭದ್ರಶೆಟ್ಟಿ, ಪದ್ಮಜಾ ಪ್ರವೀಣ್ ಜನ್ನು, ವಿನೋದ್ ಬಾಂದೇಕರ, ಮಿಥುನ ನಾಯಕ, ವಿಜಯ ಕೋಲೆಕರ್ ಹಾಗೂ ಪಕ್ಷದ ಮುಖಂಡರು, ನಗರ ಸಭಾ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ: Ram Temple: ಶ್ರೀರಾಮನ ಟ್ಯಾಟೋ ಬಿಡಿಸುವ ಅಭಿಯಾನಕ್ಕೆ ಚಾಲನೆ