Advertisement
-ಇದು ಗವಿಪುರಂ ಗುಟ್ಟಹಳ್ಳಿಯ “ಅದಮ್ಯ ಚೇತನ’ ಕಚೇರಿ ಕಟ್ಟಡದಲ್ಲಿ ಸೋಮವಾರ ಬೆಳಗ್ಗೆ ಕಂಡು ಬಂದ ದೃಶ್ಯ. ಕೇಂದ್ರ ಸಚಿವ ಅನಂತಕುಮಾರ್ ಅವರು, ತಾಯಿ ಗಿರಿಜಾ ಶಾಸಿ ಅವರ ಸ್ಮರಣಾರ್ಥ ಸ್ಥಾಪಿಸಿದ ಅದಮ್ಯ ಚೇತನ ಸಂಸ್ಥೆಯ ಬೆಂಗಳೂರು ಶಾಖೆಯಲ್ಲಿ, ಅನಂತಕುಮಾರ್ ಅವರ ಸಾವು, ಅನ್ನದಾಸೋಹಕ್ಕೆ ಅಡ್ಡಿಯಾಗಲೇ ಇಲ್ಲ. ಅವರ ನಿಧನದ ಸಣ್ಣ ಸುಳಿವು ಕೂಡ ಅಲ್ಲಿ ಸುಳಿಯಲಿಲ್ಲ.
Related Articles
Advertisement
ಹಸಿವಿನಿಂದ ಬಳಲುತ್ತಿರುವ ಬಡ ಮಕ್ಕಳಿಗೆ ಅನ್ನ ನೀಡಬೇಕು. ಅವರು ಯಾವತ್ತೂ ಹಸಿವಿನಿಂದ ಬಳಲ ಬಾರದು ಎಂಬ ಉದ್ದೇಶದಿಂದ ಅನಂತಕುಮಾರ್, ಅದಮ್ಯ ಚೇತನ ಸಂಸ್ಥೆಯನ್ನು ಸ್ಥಾಪಿಸಿದರು. ಈಗ ಅವರಿಲ್ಲದಿದ್ದರೂ, ಅವರು ಹೇಳಿಕೊಟ್ಟ ಮಾರ್ಗದರ್ಶನದಲ್ಲೇ ತೇಜಸ್ವಿನಿ ಅನಂತಕುಮಾರ್ ಅವರು ಸಂಸ್ಥೆಯನ್ನು ಮನ್ನಡೆಸಿಕೊಂಡು ಹೋಗಲಿದ್ದಾರೆ. ಅವರಿಗೆ ನಾವು ಸಾಥ್ ನೀಡುತ್ತೇವೆ ಎಂದು ಅದಮ್ಯ ಚೇತನದ ಮೇಲ್ವಿಚಾರಕಿ ಲಕ್ಷಿ$¾à ಹೇಳಿದರು.
“ಹಸಿರು ಭಾನುವಾರ’ಕ್ಕೆ ಮುನ್ನುಡಿ: ಪರಿಸರದ ಬಗ್ಗೆ ಕಾಳಜಿ ಹೊಂದಿದ್ದ ಅನಂತಕುಮಾರ್, ಇಡೀ ಬೆಂಗಳೂರನ್ನು ಹಸಿರುಕರಣ ಮಾಡುವ ಕನಸು ಕಂಡಿದ್ದರು. ಈ ಹಿನ್ನೆಲೆಯಲ್ಲಿಯೇ ಪ್ರತಿ ಭಾನುವಾರ “ಹಸಿರು ಭಾನುವಾರ’ ಎಂಬ ಕಾರ್ಯಕ್ರಮವನ್ನು ಅದಮ್ಯ ಚೇತನ ಟ್ರಸ್ಟ್ ಮೂಲಕ ರೂಪಿಸಿ, ನಗರದ ಹಲವು ಭಾಗಗಳಲ್ಲಿ ಸಸಿನೆಟ್ಟಿದ್ದರು. ಇದಕ್ಕೆ “ಸಸ್ಯಾಗ್ರಹ’ ಎಂದು ಹೆಸರಿಟ್ಟಿದ್ದರು.
ಪ್ರತಿ ಭಾನುವಾರ ವಿವಿಧ ಜಾತಿಯ ಎರಡು ಸಸಿ ನೆಟ್ಟು ನೀರೆರೆಯುತ್ತಿದ್ದ ಅವರು, ಒಂದು ಕೋಟಿ ಸಸಿಗಳನ್ನು ನೆಡುವ ಪಣ ತೊಟ್ಟಿದ್ದರು. ವರು ಆರಂಭಿಸಿರುವ “ಸಸ್ಯಾಗ್ರಹ’ ಯಶಸ್ಸಿನ ಪಥದಲ್ಲಿ ಸಾಗಿದ್ದು, 150ನೇ ಹಸಿರು ಭಾನುವಾರವನ್ನು ಪೂರೈಸಿದೆ.
ಅದಮ್ಯ ಚೇತನ ಸಂಸ್ಥೆಯ ಮೂಲಕ ಅನಂತಕುಮಾರ್ ಉತ್ತಮ ಕಾರ್ಯಗಳನ್ನು ಮಾಡಿ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕಾರ್ಯಗತಗೊಂಡಿರುವ “ಹಸಿರು ಭಾನುವಾರ’ ಇಡೀ ಬೆಂಗಳೂರಿಗರು ಹೆಮ್ಮಪಡುವಂತಹ ಕಾರ್ಯಕ್ರಮ.-ದೊಡ್ಡರಂಗೇಗೌಡ, ಕವಿ * ದೇವೇಶ ಸೂರಗುಪ್ಪ