ಬೆಂಗಳೂರು; ಅನಂತ್ ಕುಮಾರ್ ಅವರನ್ನು ನೆನೆದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಭಾವುಕರಾದರು, ದಿವಂಗತ ಅನಂತ್ ಕುಮಾರ್ ಅವರ 60 ನೇ ಜನ್ಮ ದಿನಾಚರಣೆ ಹಿನ್ನೆಲೆ ಜಯನಗರದ ಎನ್ ಎಮ್ ಕೆ ಆರ್ ವಿ ಕಾಲೇಜಿನಲ್ಲಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅನಂತ್ ಕುಮಾರ್ ಅವರನ್ನು ನೆನೆದು ಗದ್ಗದಿತರಾದರು.
ಕಣ್ಣೀರು ಒರೆಸಿಕೊಂಡು ಭಾಷಣ ಮಾಡಿದ ಮುಖ್ಯಮಂತ್ರಿ ಪಕ್ಷ ಕಟ್ಟಿದ ಧೀಮಂತ ಅವರು ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಅನಂತ್ ಕುಮಾರ್ ಪಾತ್ರ ಹಿರಿದು. ಅನಂತ್ ಕುಮಾರ್ ಇನ್ನೂ ಬಹಳ ವರ್ಷ ಬದುಕಬೇಕಿತ್ತು ಕೇಂದ್ರದಲ್ಲಿ ಬಹಳ ವರ್ಷ ಸಚಿವರಾಗಿ ಇದ್ದವರು. ನನಗೆ ಐದು ನಿಮಿಷದಲ್ಲಿ ಅದ್ಭುತವಾಗಿ ಭಾಷಣ ತಯಾರಿಸಿಕೊಡ್ತಿದ್ರು ಅನಂತ್‌ಕುಮಾರ್ ನೆನಪಿನ ಶಕ್ತಿಗೆ ಸರಿ ಸಾಟಿ ಇಲ್ಲ ಬೆಂಗಳೂರಿನ ಅಭಿವೃದ್ಧಿಯ ಕನಸು ಕಂಡವರು, ಸಾಕಾರ ಮಾಡಿದವರು.
ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ಅವರು ಬಿಜೆಪಿ ಪಕ್ಷ ಕಟ್ಟಿದ ಜೋಡೆತ್ತುಗಳು ನಾನು ಅಚಾನಕ್ಕಾಗಿ ರಾಜ್ಯದ ಸಿಎಂ ಆದಾಗ ಅನಂತ್ ಕುಮಾರ್ ಮನೆಗೆ ಧಾವಿಸಿದೆ ಆಗ ಅನಂತ್ ಕುಮಾರ್ ನನಗೆ ಸ್ಥಿತಪ್ರಜ್ಞೆ ಕಾಪಾಡಿಕೊಳ್ಳುವಂತೆ ಸಲಹೆ ಕೊಟ್ಟಿದ್ದರು ಎಂದು ಡಿ ವಿ ಸದಾನಂದ ಗೌಡ ಹೇಳಿದರು.
ಬೆಂಗಳೂರಿನಲ್ಲಿ ಸಿಪೆಟ್ ಸಂಸ್ಥೆ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಾಣವಾಗ್ತಿದೆ ಅದಕ್ಕೆ ದಿವಂಗತ ಅನಂತ್ ಕುಮಾರ್ ಹೆಸರಿಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದರು.
ಅನಂತ ಕುಮಾರ್ ಪ್ರತಿಷ್ಠಾನಕ್ಕೆ ರಾಷ್ಟ್ರೀಯ ಬಿಜೆಪಿ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಚಾಲನೆ ನೀಡಿದರು.
ಬಿಜೆಪಿ ರಾಜ್ಯ ಉಸ್ತುವಾರಿ ಪಿ ಮುರಳೀಧರ ರಾವ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಜಗದೀಶ್ ಶೆಟ್ಟರ್, ಸಚಿವ ವಿ ಸೋಮಣ್ಣ, ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಉಪಸ್ಥಿತರಿದ್ದರು.