Advertisement
ತುಳು ಯಕ್ಷಗಾನದ ಟೆಂಟುಮೇಳಗಳಲ್ಲಿ ಕರ್ನಾಟಕ ಮೇಳವನ್ನು ಪ್ರಾತಿನಿಧಿಕ ಮೇಳ ಎಂಬುದಾಗಿ ಕರೆಯಬಹುದು. ಅನೇಕ ವಿದ್ವತ್-ಪ್ರತಿಭಾವಂತರಿದ್ದ ಮೇಳ, ಅನಂತರಾಮ ಬಂಗಾಡಿಯವರು ತುಳುನಾಡಿನ ದೈವಗಳ ಪಾಡನ ಆಧರಿಸಿ ಬ್ರಹ್ಮಬಲಾಂಡಿ, ತುಳುನಾಡ ಬಲಿಯೆಂದ್ರೆ, ಧರ್ಮದೈವ ಕೊಡಮಣಿತ್ತಾಯ, ಕಾನದ ತನಿಯೆ ಮೊದಲಾದ ಪ್ರಸಂಗ ರಚಿಸಿದರು. ಈಗಾಗಲೇ ಪಾಡªನಗಳ ಮೂಲಕ ತಿಳಿದ ಕತೆಯನ್ನು ರಂಗದಲ್ಲಿ ಕಂಡಾಗ ಪ್ರೇಕ್ಷಕರು ರಂಜನೆಯೊಂದಿಗೆ ಭಕ್ತಿಭಾವದಿಂದ ಸ್ವೀಕರಿಸಿದರು. ಪಟ್ಟದ ಪದ್ಮಲೆಯಂತಹ ಪ್ರಸಂಗಗಳು ಮೇಳದ ಗಲ್ಲಾಪಟ್ಟಿಗೆ ತುಂಬಿಸಿತ್ತು. ಅರಸೊತ್ತಿಗೆಯ ಕಥಾ ಚೌಕಟ್ಟಿನಲ್ಲಿಯೇ ಸಾಮಾಜಿಕರ ಬದುಕನ್ನು ಹೆಣೆದು ಕಾಲ್ಪನಿಕ ಪ್ರಸಂಗ ಬರೆಯುವ ಅಪೂರ್ವ ಪ್ರತಿಭೆ ಬಂಗಾಡಿಯವರಿಗೆ ಕರಗತವಾಗಿತ್ತು. ಕಾಡಮಲ್ಲಿಗೆ, ಬೊಳ್ಳಿಗಿಂಡೆ, ಕಚ್ಚಾರ ಮಾಲ್ದಿ, ಶೀಂತ್ರಿದ ಚೆನ್ನಕ್ಕೆ ಮೊದಲಾದ ಪ್ರಸಂಗಗಳು ಬಂಗಾಡಿಯವರ ಮನದಲ್ಲಿ ಮೈದೋರಿದ ಕಲಾಕುಸುಮಗಳು. ಈ ಪ್ರಸಂಗಗಳಿಗೆ ಸೂಕ್ತವಾದ ಕಲಾದಿಗ್ಗಜರೂ ಮೇಳದಲ್ಲಿದ್ದರು. ಬಂಗಾಡಿಯವರ ಪ್ರಸಂಗವನ್ನು ಈ ಮೇರು ಕಲಾವಿದರು ರಸಪಾಕವನ್ನಾಗಿಸಿ ಪ್ರೇಕ್ಷಕರಿಗೆ ಉಣಬಡಿಸಿದರು. ಕಟ್ಟಿದ ಟೆಂಟು ವಾರಗಟ್ಟಲೆ ಬಿಚ್ಚಲಿಲ್ಲ, ದಿನಂಪ್ರತಿಯ ಪ್ರದರ್ಶನಕ್ಕೂ ಟೆಂಟು ತುಂಬಿ ತುಳುಕುತ್ತಿತ್ತು. ಬಂಗಾಡಿಯವರ ಪ್ರಸಂಗಗಳ ಮೂಲಕ ಯಕ್ಷಗಾನದ ರಂಗದಲ್ಲಿ ಬಂಗಾರದ ದಿನಗಳಾಯಿತು. ಹಾಸ್ಯ ರಸಾಯನದೊಂದಿಗೆ ಸಮಾಜದ ವಿಕಾರಗಳನ್ನು ತೆರೆದಿಡುವ ಜೊತೆಗೆ ಆರೋಗ್ಯ ಪೂರ್ಣ ಸಮಾಜದ ಚಿಂತನೆ ಅನಂತರಾಮ ಬಂಗಾಡಿಯವರ ಪ್ರಸಂಗಗಳ ಆಶಯವಾಗಿತ್ತು. ಹಲವು ಪ್ರಸಂಗಗಳ ಧ್ವನಿಸುರುಳಿ ಮಾಡಿ ತುಳು ಯಕ್ಷಗಾನ ಕಂಪು ಮನೆ ಮನೆಗೆ ವಿಸ್ತರಿಸಿದರು. ಆಡುಮಾತಾಗಿದ್ದ ತುಳುವಿಗೆ ಬಂಗಾಡಿಯವರು ರಂಗಮಾನ್ಯತೆ ತಂದುಕೊಟ್ಟರು.
Advertisement
ಮಂಗಳ ಹಾಡಿದ ಪ್ರಸಂಗಕರ್ತ ಅನಂತರಾಮ ಬಂಗಾಡಿ
05:52 PM May 23, 2019 | mahesh |
Advertisement
Udayavani is now on Telegram. Click here to join our channel and stay updated with the latest news.