Advertisement

ಮತ್ತಿಘಟ್ಟ-ಜಾಜಿಗುಡ್ಡೆ ಪುನಶ್ಚೇತನಕ್ಕೆ ಅನಂತ ಹೆಗಡೆ ಅಶೀಸರ ಒತ್ತಾಯ

06:44 PM Jun 24, 2021 | Team Udayavani |

ಶಿರಸಿ: ಭೂ ಕುಸಿತವಾಗಿರುವ ಮತ್ತಿಘಟ್ಟ ಹಾಗು ಜಾಜಿಗುಡ್ಡೆ ಪ್ರದೇಶದ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಗುರುತಿಸಿ ಆದ್ಯತೆಯ ಮೇಲೆ ಪರಿಹಾರ ಮತ್ತು ಪುನಶ್ಚೇತನಗೊಳಿಸಿ ಕೊಡಬೇಕೆಂದು ಕರ್ನಾಟಕ ಜೀವವೈವಿಧ್ಯತೆ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಒತ್ತಾಯಿಸಿದ್ದಾರೆ.

Advertisement

ಗುರುವಾರ ಸಹಾಯಕ ಆಯುಕ್ತರ ಕಚೇರಿಯಲ್ಲಿ ಭೂ ಕುಸಿತದ ಕುರಿತು ಸಭೆ ನಡೆಸಿ ಮಾತನಾಡಿದರು. ಭೂ ಕುಸಿತಕ್ಕೊಳಗಾಗಿ ಮನೆ ಕಳೆದುಕೊಂಡ ಮತ್ತಿಘಟ್ಟಾ ಹಾಗು ಜಾಜಿಗುಡ್ಡೆ ಕುಟುಂಬದವರಿಗೆ ಪರಿಹಾರದ ಜೊತೆಗೆ ಅವರ ಬೆಟ್ಟದಲ್ಲಿ ಮನೆ ಕಟ್ಟಿಕೊಡಲು ಅನುಕೂಲಮಾಡಿಕೊಡಬೇಕೆಂದು ಹೇಳಿದರು.

ಭೂ ಕುಸಿತಕ್ಕೊಳಗಾಗಿ ಹಾನಿ ಅನುಭವಿಸಿದವರಿಗೆ ಪ್ರಕ್ರತಿ ವಿಕೋಪದಡಿಯಲ್ಕಿ ಪರಹಾರ ನೀಡಲು ಕೇಂದ್ರ ಹಾಗು ರಾಜ್ಯ ಸರಕಾರ ಒಪ್ಪಿರುವುದರಿಂದ ಎಸಿ ಹಾಗು ತಹಶಿಲ್ದಾರರು ಸ್ಥಳಕ್ಕೆ ಬೇಟಿ ನೀಡಿ ಸರಕಾರಕ್ಕೆ ಕೂಡಲೇ ವರದಿ ಸಲ್ಲಿಸಿ ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಅರಣ್ಯ ನಾಶ ಹಾಗು ಅತಿಯಾದ ಮಳೆಯಿಂದಾಗಿ ಭೂ ಕುಸಿತಗಳಾಗುತ್ತಿವೆ. ಇಂತಹ ಪ್ರದೇಶಗಳನ್ನು ಸರಕಾರ ಗುರುತಿಸಿ ತಡೆಗಟ್ಟುವ ಮಾರ್ಗೋಪಾಯಗಳನ್ನು ಕಂಡು ಹಿಡಿಯಬೇಕು.ಮತ್ತು ಅಂತಹ ಪ್ತದೇಶಗಳನ್ನು ಭೂಕುಸಿತವಾಗಬಲ್ಲ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಸಮಗ್ರ ಭೂಕುಸಿತ ನಿಯಂತ್ರಣ ಮಾರ್ಗೊಪಾಯಗಳ ಕಾರ್ಯಯೋಜನೆ ತಯಾರಿಸಬೇಕೆಂದರು.ನಿಖರ ಮಾಹಿತಿಯ ಪ್ರಕಾರವಾಗಿ ಮಲೆನಾಡು ಮತ್ತು ಕರಾವಳಿ ಪ್ತದೇಶದ ಉತ್ತರಕನ್ನಡ ಸೇರಿದಂತೆ ಕೊಡಗು,ದಕ್ಷಿಣ ಕನ್ನಡ, ಹಾಸನ,ಚಿಕ್ಕಮಗಳೂರು, ಉಡುಪಿ ಹಾಗು ಶಿವಮೊಗ್ಗದ ಕಡಿದಾದ ಗುಡ್ಡ,ಕಣಿವೆಗಳಲ್ಲಿ ಭೂಕುಸಿತವಾಗಿದೆ.ಉತ್ತರಕನ್ನಡ ಜಿಲ್ಲೆಯಲ್ಲಿ ಕಾರವಾರ,ಅಂಕೋಲಾ, ಕುಮಟಾ,ಹೊನ್ನಾವರ, ಸಿದ್ದಾಪುರ, ಶಿರಸಿ,ಯಲ್ಲಾಪುರ ಹಾಗು ಜೋಯಿಡಾ ಭವಿಷ್ಯದಲ್ಲಿ ಭೂಕುಸಿತವಾಗಲಿರುವ ಪ್ರದೇಶವೆಂದು ಗುರುತಿಸಲಾಗಿದೆ ಎಂದರು.

ಕರಾವಳಿ ಮತ್ತು ಮಲೆನಾಡಿನ ಎಲ್ಲಾ ತಾಲೂಕುಗಳಲ್ಲಿ ಭೂಕುಸಿತ ಸಾದ್ಯತೆಯಿರುವ ಎಲ್ಲಾ ್ರದೇಶಗಳ ಗ್ರಾಮಮಟ್ಟದ ನಕ್ಷೆ ರಚಿಸಬೇಕು.ಭೂಕುಸಿತವಾಗುವ ಮೊದಲೆ ಶೀಘ್ರ ಮುನ್ಸೂಚನೆ ನೀಡುವ ತಾಂತ್ರಿಕ ವ್ಯವಸ್ಥೆಯನ್ನು ರೂಪಿಸಬೇಕು. ಹಾಗು ಜಿಲ್ಲಾಡಳಿತ ಅವುಗಳ ಸೂಕ್ತ ಸಹಾಯಪಡೆಯುವಂತಹ ಆಡಳಿತಾತ್ಮಕ ನೀತಿ ರೂಪಿಸುವ ಮೂಲಕ ಭವಿಶ್ಯದಲ್ಲಿ ಸಂಭವಿಸುವ ಭೂಕುಸಿತವನ್ನು ತಡೆಗಟ್ಟಬೇಕೆಂದು ಹೇಳಿದರು.

Advertisement

ಜುಲೈ 1 ರಿಂದ 15 ರವರಗೆ ಜೀವವೈವಿಧ್ಯತೆ ಜಾಗ್ರತೆ ಅಭಿಯಾನ ನಡೆಯಲಿದ್ದು ಇದರಲ್ಲಿ ನಗರಸಭೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಭಾಗವಹಿಸಲಿವೆ ಎಂದರು. ಸಭೆಯಲ್ಲಿ ಎಸಿ ಆಕೃತಿ ಬನ್ಸಾಲ್ ಹಾಗು ತಹಶಿಲ್ದಾರ ಎಂ ಆರ್ ಕುಲಕರ್ಣಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next