Advertisement
ಜು. 14ರಂದು ನಿಧನ ಹೊಂದಿದ ಭಾರತ್ ಗ್ರೂಪ್ ಆಫ್ ಕಂಪೆನೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಜಿ. ಪೈ ಅವರಿಗೆ ನಗರದ ಡಾ| ಟಿ.ಎಂ.ಎ. ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ್ ಗ್ರೂಪ್ ಆಫ್ ಕಂಪೆನೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಅನಂತ್ ಜಿ. ಪೈ ಅವರು ಕೇವಲ 46 ವರ್ಷಗಳ ಕಾಲ ಬದುಕಿದ್ದರೂ ಈ ಅಲ್ಪಾವಧಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಸ್ಮರಿಸಿದರು.Related Articles
Advertisement
ಭಾರತ್ ಸಮೂಹ ಸಂಸ್ಥೆಯ ಕಂಪೆನಿಸೆಕ್ರೆಟರಿ ವಾಸುದೇವ ಪೈ ಮಾತನಾಡಿ, ಅನಂತ್ ಜಿ. ಪೈ ಅವರು ಹೊಸ ವ್ಯವಹಾರ ದೃಷ್ಟಿಕೋನಗಳನ್ನು ಪರಿಚಯಿಸಿಸಂಸ್ಥೆಯನ್ನು ಉನ್ನತಿಗೆ ಕೊಂಡೊಯ್ದ್ದಿ ದ್ದರು. ಅವರ ನಿಧನದಿಂದ ತುಂಬ ಲಾರದ ನಷ್ಟವಾಗಿದೆ ಎಂದರು.
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್, ಉದ್ಯಮಿಗಳಾದ ಅಮ್ಮುಂಜೆ ನಾಗೇಂದ್ರ ನಾಯಕ್, ಶ್ಯಾಮ್ ಪಟೇಲ್ (ಶಿಕಾಗೊ), ಬಾಲಕೃಷ್ಣ ಶೆಟ್ಟಿ (ಸಿನೆ ಪೊಲೀಸ್), ಪ್ರಶಾಂತ್ ಶೇಟ್, ಅಜಿತ್ ಪೈ, ಪಿಂಟೂ (ಅಮೆರಿಕ), ಸುರೇಶ್ ಪೈ, ರೂಪೇಶ್ ಪಟೇಲ್, ಮೃನಾಲ್ ಪಟೇಲ್, ಎಂ.ಎನ್. ಪೈ (ಚಿನ್ಮಯ ವಿದ್ಯಾ ಸಂಸ್ಥೆ), ಸಿಂಡಿಕೇಟ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಭಾಸ್ಕರ ಹಂದೆ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಕಾರ್ಕಳ ಶಾರದೋತ್ಸವ ಸಮಿತಿಯ ಮುಕುಂದ ಶೆಣೈ, ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪಾಂಶುಪಾಲ ಮಂಜುನಾಥ ಕೋಟ್ಯಾನ್, ಕಾರ್ಕಳ ಶಾಸ್ತ್ರೀಯ ಸಂಗೀತ ಸಭಾದ ನಿತ್ಯಾನಂದ ಪೈ, ಭಾರತ್ ಸಮೂಹ ಸಂಸ್ಥೆಯ ಡಾ| ದಿನೇಶ್ ಕಿಣಿ ಅವರು ಅನಂತ್ ಜಿ. ಪೈ ಅವರ ವ್ಯಕ್ತಿತ್ವದ ಗುಣಗಾನ ಮಾಡಿ ನುಡಿ ನಮನ ಸಲ್ಲಿಸಿದರು.
ನುಡಿ ನಮನದ ಬಳಿಕ ಅನಂತ್ ಜಿ. ಪೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಪ್ರಾರಂಭದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಿ ಅನಂತ್ ಜಿ. ಪೈ ಅವರ ಆತ್ಮಕ್ಕೆ ಚಿರಶಾಂತಿ ಕೋರಲಾ ಯಿತು. ಭಾರತ್ ಸಮೂಹ ಸಂಸ್ಥೆಯ ನಿರ್ದೇಶಕರಾದ ಆನಂದ್ ಜಿ. ಪೈ, ಸುಬ್ರಾಯ ಎಂ. ಪೈ, ನಾಗೇಂದ್ರ ಡಿ. ಪೈ, ಸುಧೀರ್ ಎಂ. ಪೈ, ವೆಂಕಟೇಶ್ ಎಂ. ಪೈ ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಪೈ, ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಸಂಧ್ಯಾ ಎಸ್. ಪೈ, ವನಿತಾ ಜಿ. ಪೈ, ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತ ಅಧಿಕಾರಿ ಡಾ| ಎಚ್. ಶಾಂತಾರಾಮ, ಸಂಸದ ನಳಿನ್ ಕುಮಾರ್ ಕಟೀಲು, ಉಜ್ವಲ್ ಡೆವಲಪರ್ನ ಪುರುಷೋತ್ತಮ ಶೆಟ್ಟಿ, ಮಾಜಿ ಸಚಿವರಾದ ರಮಾನಾಥ ರೈ, ಕೆ. ಅಮರನಾಥ ಶೆಟ್ಟಿ, ಶಕುಂತಳಾ ಶೆಟ್ಟಿ ಮೊದಲಾದವರು ಶ್ರದ್ಧಾಂಜಲಿ ಸಲ್ಲಿಸಿದರು. ಅನಂತ್ ಜಿ. ಪೈ ಅವರ ಪುತ್ರಿ ಅನ್ವಿತಾ, ತಂದೆಯ ಗುಣ ವಿಶೇಷಗಳನ್ನು ವಿವರಿಸಿದರು. ಶಿಕ್ಷಣ ಎಂಬುದು ಜಗತ್ತನ್ನು ಬದಲಾಯಿ ಸುವ ಶಕ್ತಿಯಿರುವ ಅಸ್ತ್ರ ಎಂದು ಹೇಳಿ ತನಗೆ ಶಿಕ್ಷಣ ಪಡೆಯುವಂತೆ ಪ್ರೇರೇಪಿ ಸಿದ್ದರು. ಕೌಟುಂಬಿಕ ಸಂಬಂಧಗಳನ್ನು ಕಲಿಸಿದ್ದರು ಎಂದು ಸ್ಮರಿಸಿದರು.
ಲೆಕ್ಕ ಪರಿಶೋಧಕ ಶಿವಾನಂದ ಪೈ ಸ್ವಾಗತಿಸಿ, ಪ್ರಸ್ತಾವನೆಗೈದು ದಿ| ಅನಂತ್ ಜಿ. ಪೈ ಅವರನ್ನು ಪರಿಚ ಯಿಸಿದರು. ಬಿ. ಗಣಪತಿ ಪೈ ಅವರ ಉತ್ತರಾಧಿಕಾರಿಯಾಗಿದ್ದ ಅನಂತ್ ಜಿ. ಪೈ ಅವರು ಅಪ್ಪಟ ಮಾನವ ಪ್ರೇಮಿ ಯಾಗಿದ್ದರು. ಅವರ ಅಗಲಿಕೆಯಿಂದ ನಾವು ಮಾಣಿಕ್ಯವೊಂದನ್ನು ಕಳೆದು ಕೊಂಡಿದ್ದೇವೆ ಎಂದರು.
ಬಹುಮುಖ ಪ್ರತಿಭೆಮಣಿಪಾಲ್ ಟೆಕ್ನಾಲಜೀಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಪೈ ಮಾತನಾಡಿ, 26 ವರ್ಷಗಳ ಹಿಂದೆ ತಾನು ಅನಂತ್ ಜಿ. ಪೈ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದು, ಆ ಬಳಿಕ ನಾವಿಬ್ಬರೂ ವ್ಯವಹಾರಕ್ಕೆ ಸಂಬಂಧಿಸಿ ಹಲವು ಬಾರಿ ಭೇಟಿಯಾಗಿ ಚರ್ಚಿಸಿದ್ದೇವೆ. ಅನಂತ್ ಅವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಅವರೊಬ್ಬ ಉತ್ತ್ತಮ ಸ್ನೇಹಿತರಾಗಿದ್ದರು. ಅವರ ಅಗಲಿಕೆ ಅಪಾರ ನೋವು ತಂದಿದೆ ಎಂದರು.