Advertisement

ಆನಂದಪುರ: ಮೊಹರಂ ಆಚರಣೆ

09:28 AM Sep 22, 2018 | |

ಆನಂದಪುರ: ಸಮೀಪದ ಆಚಾಪುರ ಗ್ರಾಪಂ ವ್ಯಾಪ್ತಿಯ ಇಸ್ಲಾಂಪುರ, ಮುರುಘಾಮಠ, ಆಚಾಪುರಗಳಲ್ಲಿ ಮೊಹರಂ
ಆಚರಿಸಲಾಯಿತು. ತ್ಯಾಗ- ಬಲಿದಾನದ ಸಂಕೇತವಾದ ಈ ಹಬ್ಬವನ್ನು ಏಳು ದಿನಗಳಿಂದ ಆಚರಿಸಲಾಯಿತು. ಇದರಲ್ಲಿ 6ನೇ ದಿನ ರಾತ್ರಿ ಕೆಂಡ ಹಾಯುವ ಮೂಲಕ ಕತ್ತಲ ರಾತ್ರಿಯನ್ನು ಆಚರಿಸುತ್ತಾರೆ. ಕೆಂಡ ಹಾಯ್ದ ನಂತರ ಸಾಮೂಹಿಕ ಅನ್ನ ಸಂರ್ತಪಣೆ ನಡೆಯುತ್ತದೆ. ಎಲ್ಲಾ ಭಕ್ತರು ಭಾಗವಹಿಸುತ್ತಾರೆ.

Advertisement

ಈ ಕತ್ತಲ ರಾತ್ರಿಯ ಪೂಜೆಯಲ್ಲಿ ಹಿಂದೆ ದೇವರಿಗೆ ಹರಕೆ ಮಾಡಿಕೊಂಡವರು ಹರಕೆಯನ್ನು ತೀರಿಸುತ್ತಾರೆ. ಹಿಂದೂ ಮತ್ತು ಮುಸ್ಲಿಮರು ಒಂದಾಗಿ ಸಂಭ್ರಮದಿಂದ ಆಚರಿಸುವಂತಹ ಹಬ್ಬವಾಗಿದ್ದು ಇದರಿಂದ ಹಿಂದೂ ಮತ್ತು
ಮುಸ್ಲಿಮರಲ್ಲಿ ಐಕ್ಯತೆಯ ಭಾವನೆ ಮೂಡಲಿದೆ ಎಂದು ಸಮಿತಿಯ ಅಧ್ಯಕ್ಷ ಅಬ್ಬಲ್‌ ಖನ್ನಿ ಹೇಳಿದರು. ಶುಕ್ರವಾರ ಬೆಳಗ್ಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೊಹರಂ ಉತ್ಸವ ಸಾಗಿದ್ದು ದೇವರಿಗೆ ಭಕ್ತರು ಸಕ್ಕರೆ, ಊದಿನಬತ್ತಿ ನೀಡಿ ಪೂಜೆ ಸಲ್ಲಿಸಿದರು. ಇಸ್ಲಾಂಪುರದ ಹಬ್ಬದ ಸಮಿತಿಯ ಕಾರ್ಯದರ್ಶಿ ನಬಿ, ಸದಸ್ಯರಾದ ಶಾಂತಕುಮಾರ್‌, ಗೌಸ್‌ ಬಷೀರ್‌, ಯೂಸೂಬ್‌, ಮಹಮದ್‌ ಗೌಸ್‌, ಮಹಮದ್‌ ಆಲಿ, ಅಸ್ಲಾಂ, ತಾಪಂ ಸದಸ್ಯೆ ಆನಂದಿ ಲಿಂಗರಾಜ್‌, ಆಚಾಪುರ ಗ್ರಾಪಂ ಉಪಾಧ್ಯಕ್ಷೆ ಮೇನಕಾ, ಸದಸ್ಯರಾದ ಸುರೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next