ಮಹಾಲಿಂಗಪುರ : ಸಮೀಪದ ರನ್ನಬೆಳಗಲಿ ಪಟ್ಟಣದ ಯುವ ಕಾಂಗ್ರೆಸ್ ಮುಖಂಡ ತಮ್ಮ 26ನೇ ವರ್ಷದ ಹುಟ್ಟು ಹಬ್ಬವನ್ನು ಮೂಢನಂಬಿಕೆಯನ್ನು ಹೋಗಲಾಡಿಸಬೇಕು ಎಂಬ ಒಂದು ಸಣ್ಣ ಪ್ರಯತ್ನವಾಗಿ ಸ್ಮಶಾನದಲ್ಲಿ (ರುದ್ರ ಭೂಮಿ) ಸರಳವಾಗಿ ಆಚರಿಸಿಕೊಂಡು ಗಮನ ಸೆಳೆದಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ ಅವರ ಮೂಢನಂಬಿಕೆ ವಿರುದ್ಧ ಹಲವಾರು ಕಾರ್ಯಕ್ರಮಗಳನ್ನು ನೋಡಿ ತಾವು ಸಹ ತಮ್ಮ ಹುಟ್ಟುಹಬ್ಬ ಆಚರಣೆಯ ಮೂಲಕ ಮೂಢನಂಬಿಕೆಗೆ ಕಡಿವಾಣ ಹಾಕಬಹುದೆಂದು ತಿಳಿದು ತಮ್ಮ 26 ನೇ ವರ್ಷದ ಹುಟ್ಟು ಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿಕೊಂಡಿದ್ದೇನೆ ಎನ್ನುತ್ತಾರೆ ಆನಂದ ಪಾಟೀಲ್.
ಇದನ್ನೂ ಓದಿ:ಮಂಗಳೂರು ಪಾಲಿಕೆ ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಆಗಿ ಸುಮಂಗಲಾ ರಾವ್ ಆಯ್ಕೆ
ಸತೀಶ ಜಾರಕಿಹೋಳಿ ಅವರ ಹಾದಿಯಲ್ಲಿ ನಾನು ಸಹಾ ಮೂಢನಂಬಿಕೆ ಹೋಗಲಾಡಿಸಲು ಪ್ರಯತ್ನಿಸುತ್ತೇನೆ. ಮೂಢನಂಬಿಕೆಯಿಂದ ಎಲ್ಲರೂ ಹೊರಬರಬೇಕು ಯಾವುದೇ ಮೇಲು ಕೀಳು ಎಂಬ ಭಾವನೆ ಇಲ್ಲದೆ ನಾವೆಲ್ಲರೂ ಒಂದು ಎನ್ನುವ ಭಾವನೆ ಬರಬೇಕು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಈರಪ್ಪ ಕಿತ್ತೂರ, ಸಂಗಪ್ಪ ಅಮಾತಿ, ಪ್ರವೀಣ ಪಾಟೀಲ, ಮಹಾಲಿಂಗ ಗೋಡಿಗೌಡರ, ಭೀಮನಗೌಡ ಪಾಟೀಲ, ಪ್ರಕಾಶ್ ಪುರಾಣಿಕ, ಮಹಾಲಿಂಗ ಶೀರೊಳ, ದುಡೇಂಶ ಚನಾಳ, ಪ್ರಕಾಶ್ ಕಡಪಟ್ಟಿ, ಉಮೇಶ ದೊಡಮನಿ ಸೇರಿದಂತೆ ಹಲವರು ಇದ್ದರು.