Advertisement

ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಕೊರತೆ ಇತ್ತು, ಹಾಗಾಗಿ ರಾಜಿನಾಮೆ ನೀಡಿದೆವು

03:39 PM Nov 15, 2019 | Team Udayavani |

ಬಳ್ಳಾರಿ: ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ಯೋಜನೆ ಮಾಡಬೇಕಿತ್ತು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಈಡೇರಿಸಲಿಲ್ಲ ಎಂದು ಅನರ್ಹ ಶಾಸಕ, ವಿಜಯ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಹೇಳಿದರು.

Advertisement

ಜಿಲ್ಲೆಯ ಹೊಸಪೇಟೆಯಲ್ಲಿ ಶುಕ್ರವಾರ ನಡೆಸಿದ ಕಾರ್ಯಕರ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ವಿಜಯನಗರ ಕ್ಷೇತ್ರದಲ್ಲಿ ಸಾಕಷ್ಟು ಯೋಜನೆಗಳು ಮಾಡುವುದಿತ್ತು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಬೇಡಿಕೆ ಈಡೇರಿಸಲಿಲ್ಲ. ರಾಜ್ಯಾದ್ಯಂತ ಅನುದಾನ ಸಿಗಲಿಲ್ಲ. ಕೇವಲ ಸರ್ಕಾರ ಉಳಿಸೋದು ಬೀಳಿವುದೇ ಕೆಲಸವಾಯ್ತು.  ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಕೊರತೆ ಇತ್ತು. ಹಾಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದೆ. ಅದನ್ನು ವೈರಲ್ ಮಾಡಿದರು.  ಆ ಮಾತಿಗೆ ಬದ್ಧನಾಗಿದ್ದೇನೆ. ಬೇರೆ ಯುವಕರಿಗೆ ಅವಕಾಶ ಕೊಡಬೇಕು ಎನ್ನುವದಾಗಿದೆ. ಯಡಿಯೂರಪ್ಪ ನಮ್ಮ ಕ್ಷೇತ್ರಕ್ಕೆ  ಅನುದಾನ ನೀಡಿದ್ದಾರೆ.   ರಾಜೀನಾಮೆ ಕೊಡುವ ಮುನ್ನ ಸಾಕಷ್ಟು ನಾಯಕರಿಗೆ ನಮ್ಮ ನೋವನ್ನು ಹೇಳಿಕೊಂಡಿದ್ದೇವೆ. ಜನರಿಗೆ ಕೊಟ್ಟ ಮಾತು ಪೂರೈಸಲು ಆಗದ ಕಾರಣ ರಾಜೀನಾಮೆ ನೀಡಿದ್ದೇನೆ ಹೊರತು ನಾಟಕ ಮಾಡಿ ರಾಜೀನಾಮೆ ನೀಡಿಲ್ಲ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಯಾರಿಗೂ ನೋವಾಗುವಂತೆ ನಡೆದುಕೊಂಡಿಲ್ಲ ಎಂದ ಆನಂದ ಸಿಂಗ್, ವಿಜಯನಗರ ಜಿಲ್ಲೆಯಾಗೋದು ಏಕಪಕ್ಷೀಯ ನಿರ್ಧಾರವಲ್ಲ. ಹಲವು ಹೋರಾಟದ ಫಲ. ಕೆಲ ವಿಚಾರದಲ್ಲಿ ಸ್ವಲ್ಪ ಸ್ವಾರ್ಥ ಇದೆ.‌ ಕ್ಷೇತ್ರದ ವಿಚಾರದಲ್ಲಿ ನಾನು ಸ್ಚಾರ್ಥಿ. ಜನರಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ.  ಸಚಿವ ಸಂಪುಟದಲ್ಲಿ  ಜಿಲ್ಲೆಯ ವಿಷಯ ಬಂದಿತ್ತು. ಕೆಲವರ ಭಿನ್ನಾಭಿಪ್ರಾಯದಿಂದ ಮುಂದೂಡಲಾಯಿತು ಎಂದರು.

Advertisement

ಶ್ರೀರಾಮುಲು ಅವರಿಗೆ ಉಸ್ತುವಾರಿ ನೀಡಿರದ ವಿಚಾರದಲ್ಲಿ ಮಾತನಾಡಿದ ಅವರು,  ಶ್ರೀರಾಮುಲು ನನಗಿಂತ ಹಿರಿಯರು. ನಿತ್ಯ ಶ್ರೀರಾಮುಲು ಜೊತೆಗೆ ಸಂಪರ್ಕದಲ್ಲಿ ಇದ್ದೇನೆ. ಆದರೆ ರಾಜಕೀಯ ಬಗ್ಗೆ ಮಾತನಾಡಿಲ್ಲ. ರಾಮುಲು ಜೊತೆಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಶ್ರೀರಾಮುಲುಗೆ ಉಸ್ತುವಾರಿ ನೀಡ್ತಾರೆ. ಈ ಬಗ್ಗೆ ಯಡಿಯೂರಪ್ಪ ಜೊತೆಗೆ ಮಾತನಾಡಿದ್ದೇನೆ. ಜಿಲ್ಲೆ ಆಗುವ ವಿಚಾರದಲ್ಲಿ ಸೋಮಶೇಖರ್ ರೆಡ್ಡಿ ಕರುಣಾಕರ ರೆಡ್ಡಿ ಮಾತ್ರ ವಿರೋಧಿಸಿದ್ದರು. ಜಿಲ್ಲೆಯ ವಿಚಾರದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ವ್ಯಕ್ತವಾಯಿತು. ಜಿಲ್ಲೆಯ ನಿಯೋಗ ತೆಗೆದುಕೊಂಡು ಹೋಗುವಾಗ ಎಲ್ಲರ ಜೊತೆಗೆ ಮಾತನಾಡಿದ್ದೇನೆ ಎಂದು ವಿವರಿಸಿದರು.

ಪ್ರಜಾಪ್ರಭುತ್ವದಲ್ಲಿ ಎಲ್ಲದಕ್ಕೂ ಅವಕಾಶವಿದೆ. ಎರಡು ಬಾರಿ ಬಿಜೆಪಿಯಿಂದ ಜಯಗಳಿಸಿದ್ದೆ. ಬೇರೆ ಕಾರಣದಿಂದ ಮಾತೃಪಕ್ಷ ಬಿಟ್ಟು ಹೋಗಿದ್ದೆ. ಆಸೆ ಆಕಾಂಕ್ಷೆ, ಅಧಿಕಾರ ಮಂತ್ರಿ ಸ್ಥಾನಕ್ಕೆ ಸಾರ್ವಜನಿಕ ಜೀವನಕ್ಕೆ ಬಂದವನಲ್ಲ. ಅಭಿವೃದ್ಧಿಯ ಕನಸಿಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದೇನೆ. ನನ್ನ ಮೇಲೂ ಸಾಕಷ್ಟು ಆರೋಪವಿದೆ. ರಾಜಕೀಯ ಜೀವನದಲ್ಲಿ ಆರೋಪ, ಅಸೂಯೆತನ ಸಹಜ. ಚುನಾವಣೆಯಲ್ಲಿ ಸೋಲಿಸೋದು ಗೆಲ್ಲಿಸೋದು ಮತದಾರರಿಗೆ ಬಿಟ್ಟಿದೆ ಹೊರತು ನಾಯಕರಿಂದ ಸೋಲಿಸುವುದು ಅಸಾಧ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next