Advertisement
ನೂತನ ಜಿಲ್ಲೆ ರಚನೆಗೆ ಛಲ ಮತ್ತು ಪಟ್ಟು ಬಿಡದೆ ಅವಿರತ ಶ್ರಮವಹಿಸಿದ ರೂವಾರಿ ಸಚಿವ ಆನಂದ್ ಸಿಂಗ್ ಅವರ ಮಾತುಗಳಿವು.
Related Articles
Advertisement
ವಿಜಯನಗರ ಜಿಲ್ಲೆ ಆಗಲೇಬೇಕು ಎಂಬ ಬೇಡಿಕೆಗೆ ಪ್ರಮುಖ ಕಾರಣವೇನು?
ಬಳ್ಳಾರಿ ಹನ್ನೊಂದು ತಾಲೂಕು, 31 ಲಕ್ಷದಷ್ಟು ದೊಡ್ಡ ಜನಸಂಖ್ಯೆ ಹೊಂದಿದ್ದ ಜಿಲ್ಲೆ. ಹರಪನಹಳ್ಳಿಯ ಕೊನೆಯ ಭಾಗದ ಗ್ರಾಮ ದಿಂದ ಬಳ್ಳಾರಿ ಜಿಲ್ಲಾ ಕೇಂದ್ರಕ್ಕೆ ಬರಬೇಕಾದರೆ 200 ಕಿ.ಮೀ. ದೂರವಾಗುತ್ತದೆ. ನಮ್ಮ ಭಾಗದ ಎಷ್ಟೋ ಗ್ರಾಮಗಳಿಗೆ ಸರಕಾರದ ಸವಲತ್ತು ಕಲ್ಪಿಸಲು ಜಿಲ್ಲಾಡಳಿತಕ್ಕೂ ಕಷ್ಟವಾಗುತ್ತಿತ್ತು. ಪ್ರತಿ ವಿಚಾರದಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದರು. ಹೀಗಾಗಿ ಹೊಸ ಜಿಲ್ಲೆಯ ಬೇಡಿಕೆ ಕೂಗು ಎದ್ದಿತ್ತು. ಅದು ನ್ಯಾಯಸಮ್ಮತ ಮತ್ತು ಸಹಜವೂ ಆಗಿತ್ತು. ಸಮಸ್ತ ಜನರು, ಸಾಹಿತಿ, ಕಲಾವಿದ, ಹೋರಾಟಗಾರರು, ಸಂಘ-ಸಂಸ್ಥೆಗಳು, ಮಠಾಧೀಶjsಲ್ಲರ ಒಕ್ಕೊರಲ ಆಗ್ರಹವೂ ಹೊಸ ಜಿಲ್ಲೆಯ ಪರವಾಗಿತ್ತು.
ಮುಂದಿನ ದಿನಗಳಲ್ಲಿ ನಿಮ್ಮ ಕನಸಿನ ವಿಜಯನಗರ ಜಿಲ್ಲೆ ಹೇಗಿರಲಿದೆ ?
ನಮ್ಮಲ್ಲಿರುವ ಹಂಪಿ ಸಹಿತ ಐತಿಹಾಸಿಕ ತಾಣ ಗಳು, ಧಾರ್ಮಿಕ ಕೇಂದ್ರಗಳು, ಪ್ರಕೃತಿಯ ಸೊಬಗು ಪ್ರವಾಸೋದ್ಯಮ ವಲಯದ ಬೆಳವಣಿ ಗೆಗೆ ಕಾರಣವಾಗಲಿದೆ. ಜತೆಗೆ ಕೈಗಾರಿಕೆ, ಶೈಕ್ಷಣಿಕ ಸಹಿತ ಎಲ್ಲ ವಲಯಗಳಲ್ಲೂ ಬೆಳವಣಿಗೆ ಕಾಣಲಿವೆ. ಇಡೀ ದೇಶ ಇತ್ತ ದೃಷ್ಟಿ ಹಾಯಿಸುವ ವಾತಾವರಣ ನಿರ್ಮಾಣವಾಗಲಿದೆ. ವಿಶ್ವದಲ್ಲಿ ಅತ್ಯಂತ ಶ್ರೀಮಂತ ಸಾಮ್ರಾಜ್ಯ ಎಂದು ಪ್ರಸಿದ್ಧಿ ಪಡೆದಿದ್ದ ವಿಜಯ ನಗರದ ಗತವೈಭವ ಅಭಿವೃದ್ಧಿಯ ಮೂಲಕ ಮರಳ ಲಿದೆ ಎಂಬ ನಂಬಿಕೆ ಮತ್ತು ವಿಶ್ವಾಸ ನನಗಿದೆ.
ಹೊಸ ಜಿಲ್ಲೆ ಅಸ್ತಿತ್ವಕ್ಕೆ ಬರುತ್ತಿದ್ದು, ಮೂಲಸೌಕರ್ಯ ಕೊರತೆ ನೀಗುವುದೇ?
ಖಂಡಿತ. ಇದಕ್ಕೆ ಹೆಚ್ಚು ದಿನ ಬೇಕಾಗಿಲ್ಲ. ಈಗಾ ಗಲೇ ಜಿಲ್ಲಾ ಆಡಳಿತಾತ್ಮಕ ಬ್ಲಾಕ್ ನವೀಕರಣ ಆಗುತ್ತಿದೆ. ಒಂದೇ ಕ್ಯಾಂಪಸ್ ಅಡಿಯಲ್ಲಿ ಎಲ್ಲ ಕಚೇರಿಗಳೂ ಹೊಸಪೇಟೆ ನಗರದ ಹೃದಯ ಭಾಗದಲ್ಲಿ, 83 ಎಕರೆ ಪ್ರದೇಶ ದಲ್ಲಿ ನಿರ್ಮಾಣಗೊಳ್ಳಲಿವೆ. ಜಿಲ್ಲಾಸ್ಪತ್ರೆಗೆ 120 ಕೋ. ರೂ. ಬಿಡುಗಡೆಯಾಗಿದೆ.
ಹೊಸ ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಿಮ್ಮ ಕನಸು?
ಸಾಕಷ್ಟು ಕನಸು ಮತ್ತು ಆಲೋಚನೆ ಇದೆ. ನನ್ನ ಜಿಲ್ಲೆಗೆ ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜು ಬರಬೇಕು. ಕಾನೂನು ಕಾಲೇಜು ಬರಬೇಕು. ಜಿಲ್ಲೆಯ ಅಸ್ತಿತ್ವದೊಂದಿಗೆ ಅಭಿವೃದ್ಧಿಯ ಪರ್ವ ಆರಂಭವಾಗಲಿದೆ. ಜಿಲ್ಲೆಯ ಯುವಕ- ಯುವತಿ ಯರಿಗೆ ಉದ್ಯೋಗ ಸಿಗಬೇಕು, ಅವರು ಭವಿಷ್ಯ ಕಂಡುಕೊಳ್ಳಬೇಕು.
ಅಭಿವೃದ್ಧಿಯ ನೀಲನಕ್ಷೆ ಸಿದ್ಧವಾಗಿದೆಯೇ?
ನಮ್ಮ ಜಿಲ್ಲೆ ಮುಂದಿನ 5ರಿಂದ 10 ವರ್ಷಗಳಲ್ಲಿ ಮಾದರಿ ಜಿಲ್ಲೆಯಾಗಿ ಹೇಗೆ ಸಮಗ್ರವಾಗಿ ಅಭಿವೃದ್ಧಿ ಗೊಳ್ಳಬೇಕೆಂಬ ಬಗ್ಗೆ ನೀಲನಕ್ಷೆ ಸಿದ್ಧಪಡಿಸಿದ್ದೇವೆ.
ನೂತನ ಜಿಲ್ಲೆ ಘೋಷಣೆ ವಿಳಂಬವಾಯಿತೇ?
ರಾಜಕೀಯ ಬೆಳವಣಿಗೆಗಳಿಂದ ವಿಳಂಬ ಆಗಿದೆ. ಆದರೂ “ದೇರ್ ಹೈ ಅಂಧೇರ್ ನಹೀ’ ಎಂಬಂತೆ ವಿಳಂಬವಾದರೂ ಕತ್ತಲು ಇಲ್ಲ. ನಮ್ಮ ಹಾದಿ ಸ್ಪಷ್ಟ ಮತ್ತು ಬೆಳಕಿನೆಡೆಗೆ ಸಾಗುವಂತಿದೆ. ಹೀಗಾಗಿ ಈಗ ಹೊಸ ಶಕೆ ಆರಂಭವಾಗಿದೆ.
ಒಂದು ಹಂತದಲ್ಲಿ ನೀವು ಸಚಿವ ಸ್ಥಾನ ಬೇಡ, ಜಿಲ್ಲೆ ಕೊಡಿ ಎಂದು ಹೇಳಿದ್ದಿರಲ್ಲ?
ಹೌದು. ಖಂಡಿತವಾಗಿಯೂ ನನಗೆ ಸಚಿವ ಸ್ಥಾನ ಕ್ಕಿಂತ ಹೊಸ ಜಿಲ್ಲೆಯಾಗುವುದೇ ಮುಖ್ಯವಾಗಿತ್ತು. ನಾನು ರಾಜ್ಯಕ್ಕೆ ಸಚಿವನಾದರೂ ಕ್ಷೇತ್ರಕ್ಕೆ ಶಾಸಕ, ಜನರಿಗೆ ಸೇವಕ. ಅವರ ಅಭಿಲಾಷೆ, ಬೇಡಿಕೆ, ಕನಸು ಈಡೇರಿಸುವುದು ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ. ಹೀಗಾಗಿಯೇ ಹಾಗೆ ಹೇಳಿದ್ದೆ. ಆದರೆ ಯಡಿಯೂರಪ್ಪ ಅವರು ಜಿಲ್ಲೆಯನ್ನೂ ಕೊಟ್ಟರು, ಸಚಿವ ಸ್ಥಾನವನ್ನೂ ನೀಡಿದರು. ಅಷ್ಟೇ ಅಲ್ಲ, 250 ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆಯನ್ನೂ ಕೊಟ್ಟಿದ್ದಾರೆ. ಹೊಸ ಕಟ್ಟಡಗಳಿಗೆ 51 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.
ನೀಲನಕ್ಷೆಯ “ನ್ಯೂ ವಿಜಯನಗರ’ : ನೂತನ ಜಿಲ್ಲೆ ವಿಜಯನಗರದ ಅಭಿವೃದ್ಧಿಯ ಬಗ್ಗೆ “ನ್ಯೂ ವಿಜಯನಗರ’ ಎಂಬ ಶೀರ್ಷಿಕೆಯಡಿ ಒಂದು ಪುಸ್ತಕ ಹೊರತರಲಾಗಿದ್ದು, ಅದರಲ್ಲಿ ಜಿಲ್ಲೆಯ ಸಮಗ್ರ ಚಿತ್ರಣ ಮತ್ತು ಭವಿಷ್ಯದ ಯೋಜನೆಗಳ ಮಾಹಿತಿ ಇದೆ. ಜನಸಂಖ್ಯೆ, ಭೌಗೋಳಿಕ ವಿಸ್ತೀರ್ಣ ಸೇರಿದಂತೆ ಸಾಕಷ್ಟು ಉಪಯುಕ್ತ ಮಾಹಿತಿ ಇದ್ದು, ವಿಜಯನಗರ ಜಿಲ್ಲೆಯ ವಿಶೇಷಗಳ ಸಮಗ್ರ ದರ್ಶನವಾಗಲಿದೆ. ವಿಜಯನಗರ ಜಿಲ್ಲೆಗಾಗಿ ಹೋರಾಟ ಮಾಡಿದ, ಮನವಿ ಮಾಡಿದ ಪ್ರತಿಯೊಂದು ಸಂಘ-ಸಂಸ್ಥೆ, ವ್ಯಕ್ತಿ-ನಾಯಕರು, ಮಠಾಧೀಶರ ನಿಯೋಗಗಳ ಚಿತ್ರಗಳನ್ನೂ ಆ ಪುಸ್ತಕ ಒಳಗೊಂಡಿದೆ.
ಬಿಎಸ್‌ವೈ, ಸೋಮಣ್ಣ ಅವರನ್ನು ಮರೆಯುವಂತಿಲ್ಲ :
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಈ ಭಾಗದವರು ಎಂದೂ ಮರೆಯು ವುದಿಲ್ಲ. ಜಿಲ್ಲೆಯ ಜನತೆಗೆ ಅವರು ಕೊಟ್ಟ ಮಾತು ತಪ್ಪಲಿಲ್ಲ ಎಂದು ಹೇಳಿರುವ ಆನಂದ್ ಸಿಂಗ್, ಮುಖ್ಯಮಂತ್ರಿಯಾಗಿ ಅವರು ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ನಿರ್ಧಾರ ಕೈಗೊಂಡರು. ಅದೇ ರೀತಿ ವಸತಿ ಸಚಿವ ಸೋಮಣ್ಣ ಅವರನ್ನೂ ನಾನು ಮರೆಯುವುದಿಲ್ಲ. ಹೊಸಪೇಟೆ ನಗರದ ಹೃದಯಭಾಗದಲ್ಲಿ ಇರುವ ಸ್ಥಳ ಮಂಜೂರು ಮಾಡಿಸಿದರು. ಹೌಸಿಂಗ್ ಬೋರ್ಡ್‌ಗೆ ಸೇರಿದ 83 ಎಕರೆ ಜಮೀನು ನೀಡಿದ್ದಾರೆ. ನಾನು ಮನವಿ ಮಾಡಿದಾಗ, “ಹೊಸ ಜಿಲ್ಲೆಗಾಗಿ ನೀನು ಹೋರಾಟ ಮಾಡಿದ್ದೀಯಾ’ ಎಂದು ಪ್ರೋತ್ಸಾಹದ ಮಾತನ್ನಾಡಿ ಜಾಗ ಸಿಗುವಂತೆ ಮಾಡಿದರು. ಇಡೀ ಜಿಲ್ಲೆಯ ಪ್ರತಿಯೊಂದು ಇಲಾಖೆಯ ಕಚೇರಿಗಳು ಒಂದೇ ಕಡೆ ಬರಲಿವೆ ಎಂದು ಆನಂದ ಸಿಂಗ್ ಹೇಳಿದರು.
ಕೃತಜ್ಞತೆಯಿಂದ ಸ್ಮರಣೆ :
ಎರಡು ದಶಕಗಳಿಂದ ನೂತನ ಜಿಲ್ಲೆಗಾಗಿ ಶ್ರಮಿಸಿದ ಪ್ರತಿಯೊಬ್ಬರನ್ನೂ ಸ್ಮರಿಸುವ ಆನಂದ್ ಸಿಂಗ್ ಅವರು, ಎಂ.ಪಿ. ಪ್ರಕಾಶ್ ಕಾಲದ ಹೋರಾಟದ ಬಗ್ಗೆಯೂ ಪ್ರಸ್ತಾವಿಸಿದರು. ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಸಂಸ್ಥಾಪಕರಾದ ಉಳ್ಳೇಶ್ವರ ಸಹಿತ ಹಲವಾರು ನಾಯಕರು, ಉಜ್ಜಯಿನಿ, ಸಂಗನಬಸವ, ಕೊಟ್ಟೂರು ಪೀಠ, ಗುರು ಒಪ್ಪತ್ತೇಶ್ವರ, ಹಾಲಸ್ವಾಮಿ, ಮಾತಂಗ ಮಹರ್ಷಿ, ಗುರುಪಾದದೇವರ ಮಠದ ಶ್ರೀಗಳು ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಶ್ರಮಿಸಿದ್ದಾರೆ ಎಂದು ಕೃತಜ್ಞತೆಯಿಂದ ಹೇಳಿದ್ದಾರೆ.
-ಎಸ್. ಲಕ್ಷ್ಮೀನಾರಾಯಣ