ಹೊಸಪೇಟೆ: ನಗರದ ತುಂಗಭದ್ರಾ ಸೀrಲ್ ತಯಾರಿಕಾ ಘಟಕದ 40 ಎಕರೆ ಪ್ರದೇಶಕ್ಕೆ ಸರ್ಕಾರ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ. ಈ ಆವರಣದಲ್ಲಿ ಹಂಪಿ ವಿಜಯನಗರ ಕಲಾ ಶಿಲ್ಪ ಮಾದರಿಯಲ್ಲಿ ಸೌಧ ನಿರ್ಮಾಣ ಮಾಡಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಹಜ್ ಮತ್ತು ವಕ್ಫ್ ಸಚಿವ ಆನಂದ ಸಿಂಗ್ ಹೇಳಿದರು.
ಟಿ.ಬಿ. ಡ್ಯಾಂ ರಸ್ತೆಯಲ್ಲಿರುವ ಟಿಎಸ್‌ಪಿ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ವಿಜಯನಗರ ಜಿಲ್ಲೆ ಆಸ್ತಿತ್ವಕ್ಕೆ ಸರ್ಕಾರ ಅಂತಿಮ ಆದೇಶದ ಹಿನ್ನೆಲೆಯಲ್ಲಿ 40 ಎಕರೆಯ ಭೂಮಿಯು ಕರ್ನಾಟಕ ಗೃಹ ಮಂಡಳಿ ಜಿಲ್ಲಾಡಳಿತಕ್ಕೆ ವರ್ಗಾವಣೆ ಮಾಡಲಾಗಿದೆ. ಶೀಘ್ರದಲ್ಲಿ ಸರ್ಕಾರ ವಿಶೇಷ ಅ ಧಿಕಾರಿಗಳನ್ನು ನೇಮಕ ಮಾಡಲಿದೆ ಎಂದರು.
ಜಿಲ್ಲಾ ಧಿಕಾರಿ, ಎಸ್ಪಿ, ಜಿ.ಪಂ ಸಿಇಒ ತಿಂಗಳೊಳಗೆ ನೇಮಕೊಳ್ಳಲಿದ್ದಾರೆ. ಟಿಎಸ್‌ಪಿ ಆವರಣ ಒಟ್ಟು 83 ಎಕರೆ ಪ್ರದೇಶದಲ್ಲಿ ಜಿಲ್ಲಾಡಳಿತ ಭವನ, ಮೆಡಿಕಲ್ ಕಾಲೇಜ್, ಎಸ್ಪಿ ಕಚೇರಿಗಳನ್ನು ನಿರ್ಮಾಣಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಪ್ರಸ್ತುತ ಇರುವ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಜಿಲ್ಲಾಡಳಿತ ಕಚೇರಿ ಆರಂಭಿಸಲಾಗುವುದು ಎಂದರು.
ಇದನ್ನೂ ಓದಿ:ಅಂತಾರಾಜ್ಯ ಮೊಬೈಲ್ ಕಳರ ಬಂಧನ
ಹೊಸಪೇಟೆ ಕಾರ್ಪೊರೇಷನ್ ಆಗುವ ಎಲ್ಲ ಅರ್ಹತೆ ಮತ್ತು ಮಾನದಂಡಗಳನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಬಿಜೆಪಿ ವಿಜಯನಗರ ಜಿಲ್ಲೆಯ ಸಹ ಪ್ರಭಾರಿ ಕೆ. ನೇಮಿರಾಜ್ ನಾಯ್ಕ, ತಾಲೂಕು ಮಂಡಲ ಅಧ್ಯಕ್ಷ ಬಸವರಾಜ್ ನಲತ್ವಾಡ್, ಅಯ್ಯಳಿ ತಿಮ್ಮಪ್ಪ, ಬಿಜೆಪಿಯ ಬಳ್ಳಾರಿ ಜಿಲ್ಲಾ ಉಪಧ್ಯಾಕ್ಷ ಅನಂತ ಪದ್ಮನಾಭ, ಬಿಜೆಪಿ ಮುಖಂಡರಾದ, ಧಮೇಂದ್ರ ಸಿಂಗ್, ಜೀವರತ್ನಂ, ರಾಘವೇಂದ್ರ, ಕಟಿಗೆ ರಾಮಕೃಷ್ಣ ಹಾಗೂ ಶ್ರೀನಿವಾಸ ಇನ್ನಿತರರಿದ್ದರು.