Advertisement

ಮುಖ್ಯಮಂತ್ರಿಗಳಲ್ಲಿ ಪ್ರಮುಖ ಖಾತೆಗೆ ಮನವಿ : ಆನಂದ ಸಿಂಗ್

08:19 PM Aug 06, 2021 | Team Udayavani |

ಹೊಸಪೇಟೆ : ಪ್ರಮುಖ ಖಾತೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿರುವೆ ಎಂದು ಸಚಿವ ಆನಂದ ಸಿಂಗ್ ಹೇಳಿದರು.

Advertisement

ಇತ್ತೀಚಿಗೆ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಯಾವುದೇ ಒಂದು ಖಾತೆ ನೀಡಿ ಎಂದು ಕೇಳಿಲ್ಲ, ಪ್ರಮುಖ ಖಾತೆಯನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ. ಕೇಳಿದ ಖಾತೆ ನೀಡಿದರೆ, ರಾಜ್ಯದ ಅಭಿವೃದ್ಧಿ ಮಾಡಲು ಸಾಧ್ಯವಾಗಲಿದೆ. ಇತಂಹದ್ದೇ ಖಾತೆ ಎಂದು ಬಹಿರಂಗ ಪಡಿಸುವುದಿಲ್ಲ ಎಂದರು.

ಮನಸ್ಸು ಒಪ್ಪುತ್ತಿಲ್ಲ:
ಬಿ.ಎಸ್.ಯಡಿಯೂರಪ್ಪನವರ ಮಾಜಿ ಮುಖ್ಯಮಂತ್ರಿ ಎಂದು ಕರೆಯಲು ನನಗೆ ಮನಸ್ಸು ಒಪ್ಪುತ್ತಿಲ್ಲ, ಅವರು ಹಿರಿಯರು, ಮುತ್ಸದಿ ನಾಯಕರು ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳಸಿದವರು. ಸರ್ಕಾರಕ್ಕೆ ಅವರ ಮಾರ್ಗದರ್ಶನ ಇದ್ದೆ ಇರುತ್ತದೆ. ಅಂದ ಮಾತ್ರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪನವರ ಕೈಗೊಂಬೆ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂದರು.

ಇದನ್ನೂ ಓದಿ :“ಜಿಲ್ಲೆಗೆ ಇನ್ನೂ ಹೆಚ್ಚಿನ ಸಚಿವ ಸ್ಥಾನ ಸಿಗಬೇಕಿತ್ತು”: ಸತೀಶ ಜಾರಕಿಹೊಳಿ

Advertisement

ರಾಜುಗೌಡರಿಗೆ ಸಚಿವ ಸ್ಥಾನ:
ಕಲ್ಯಾಣ ಕರ್ನಟಕದ ಸುರಪುರ ಶಾಸಕ ರಾಜುಗೌಡ ಅವರೊಬ್ಬ ವಾಲ್ಮೀಕಿ ನಾಯಕ ಸಮಾಜದ ಪ್ರಭಾವಿ ನಾಯಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವುದು ಔಚಿತಪೂರ್ಣ. ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇನೆ. ಇದಕ್ಕೆ ಯಡಿಯೂರಪ್ಪ ನವರು ಸಮ್ಮತಿ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳು ಕೂಡ ರಾಜುಗೌಡರಿಗೆ ಸಚಿವ ಸ್ಥಾನ ನೀಡುವ ಕುರಿತು ಭರಸವೆ ನೀಡಿದ್ದಾರೆ ಎಂದರು.

ಆಡಳಿತ ಯಂತ್ರಕ್ಕೆ ವೇಗ
ವಿಜಯನಗರ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ ಹಾಗೂ ವರಿಷ್ಠಾಧಿಕಾರಿ, ಜಿಪಂ ಸಿಇಓ ಸೇರಿದಂತೆ ಇತರೆ ಅಧಿಕಾರಿಗಳ ನಿಯೋಜನೆಗೊಳ್ಳಲಿದ್ದಾರೆ. ಹಣಕಾಸು ಇಲಾಖೆ ಸಮ್ಮತಿ ಸೂಚಿಸಿದ್ದು, ಆಡಳಿತ ಯಂತ್ರ ವೇಗ ಪಡೆಯಲಿದೆ ಎಂದರು.

ಗಣೇಶ ಚತುರ್ಥಿಯಂದು ನೂತನ ಜಿಲ್ಲೆ ಉದ್ಧಾಟನೆ:
ಗಣೇಶ ಚತುರ್ಥಿಯಂದು ನೂತನ ವಿಜಯನಗರ ಜಿಲ್ಲೆ ಉದ್ಘಾಟನೆಗೆ ಅದ್ಧೂರಿ ಸಮಾರಂಭ ನಡೆಸಲು ಚಿಂತನೆ ನಡೆದಿದೆ. ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಆಹ್ವಾನಿಸಲಾಗುವುದು. ಸಮಾರಂಭಕ್ಕೆ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಆದರೆ, ಕೊರನಾ ಮೂರನೇ ಅಲೆ ಭೀತಿ ಕಾಡುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮಕ್ಕೆ ದಿನಾಂಕ ನಿಗಧಿ ಪಡಿಸಲಾಗುವುದು. ಒಂದೊಮ್ಮೆ ಕೊರೊನಾ ಅಡ್ಡಿಯಾದರೆ, ಸರಳವಾಗಿ ಆದರೂ ಉದ್ಧಾಟನೆ ಸಮಾರಂಭ ಮಾಡಲಾಗುವುದು ಎಂದರು.

ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವ ವಿ.ಎಸ್.ಶ್ರೀನಿವಾಸ ಪ್ರಸಾದ್ ಅವರು ಹಿರಿಯರು, ಅನುಭವಿಗಳು. ಚುನಾವಣೆ ರಾಜಕೀಯದಿಂದ ದೂರ ಉಳದಿರಬಹುದು ಆದರೆ ಪಕ್ಷ ಸಂಘಟನೆಗೆ ಅವರ ಸಲಹೆ-ಸೂಚನೆ ಅಗತ್ಯವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next