Advertisement

ನೆರೆ ಸಂತ್ರಸ್ತರಿಗಾಗಿ 160 ಕಿ.ಮೀ ಪಾದಯಾತ್ರೆ ಹೊರಟ ಕೈ ಶಾಸಕ

08:42 AM Sep 22, 2019 | Team Udayavani |

ಜಮಖಂಡಿ: ಪ್ರವಾಹ ಸಂತ್ರಸ್ತರಿಗೆ ಯೋಗ್ಯ ಪರಿಹಾರ, ಪುನರ್ವಸತಿ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಿವ್ಯ ನಿರ್ಲಕ್ಷ್ಯ ವಹಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿರುವ, ಜಮಖಂಡಿಯ ಕಾಂಗ್ರೆಸ್ ಶಾಸಕ ಆನಂದ ಸಿದ್ದು ನ್ಯಾಮಗೌಡ, 160ಕ್ಕೂ ಕಿ.ಮೀ ಪಾದಯಾತ್ರೆ ಆರಂಭಿಸಿದ್ದಾರೆ.

Advertisement

ಜಮಖಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಸಮರ್ಪಕ ರೀತಿಯಲ್ಲಿ ಕ್ರಷ್ಣಾನದಿ ತೀರದ ಪ್ರವಾಹ ಪೀಡತ ಜನರಿಗೆ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತರುವ ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪಾದಯಾತ್ರೆಯೂದ್ದಕ್ಕೂ ಎರಡು ಸರ್ಕಾರಗಳ ವಿರುದ್ದ ಘೋಷಣೆ ಕೂಗುತ್ತ, ಜಮಖಂಡಿಯಿಂದ ಬೆಳಗಾವಿವರೆಗೆ ಅಪಾರ ಕಾರ್ಯಕರ್ತರೊಂದಿಗೆ ಶನಿವಾರ ಪಾದಯಾತ್ರೆ ಆರಂಭಿಸಿದರು.

ತಾಲೂಕಿನ ಕಪಡಟ್ಟಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಹೊರಟರು. ಶನಿವಾರ ಆರಂಭಗೊಂಡಿರುವ ಪಾದಯಾತ್ರೆ ನಾಲ್ಕು ದಿನದಲ್ಲಿ ತಲುಪಲಿದೆ. ತಾಲುಕಿನ ಸಾವಿರಾರು ಜನರು ಭಾಗವಹಿಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ರಾಜ್ಯದ ಕಾಂಗ್ರೆಸ್ ನಾಯಕರಿಂದ ಬ್ರಹತ್ ಪ್ರತಿಭಟನೆ ನಡೆಯಲಿದ್ದು, ಈ ಪಾದಯಾತ್ರೆ ಸೆ.24ರಂದು ಪ್ರತಿಭಟನೆಯಲ್ಲಿ ಕೂಡಿಕೊಳ್ಳಲಿದೆ.

ಮುಖಂಡರಾದ ಶ್ರೀಶೈಲ ದಳವಾಯಿ. ವರ್ಧಮಾನ ನ್ಯಾಮಗೌಡ ಸಹಿತ ಹಲವರು ಪಾದಯಾತ್ರೆಯಲ್ಲಿ ಹೊರಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next