Advertisement

ಏಶ್ಯಾಡ್‌ ಚೆಸ್‌: ಭಾರತ ತಂಡಕ್ಕೆ ಆನಂದ್‌ ಮೆಂಟರ್‌

10:56 PM Jan 29, 2022 | Team Udayavani |

ಹೊಸದಿಲ್ಲಿ: ಏಶ್ಯನ್‌ ಗೇಮ್ಸ್‌ಗೆ 12 ವರ್ಷಗಳ ಬಳಿಕ ಚೆಸ್‌ ಪ್ರವೇಶವಾಗುತ್ತಿದೆ. ಭಾರತ ಈ ಕೂಟದಲ್ಲಿ ಬಹಳಷ್ಟು ಪದಕ ಗೆಲ್ಲುವ ನಿರೀಕ್ಷೆ ಇದೆ. ಹೀಗಾಗಿ ಅಖೀಲ ಭಾರತ ಚೆಸ್‌ ಫೆಡರೇಶನ್‌ (ಎಐಸಿಎಫ್) 5 ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಅವರನ್ನು ತಂಡದ ಮೆಂಟರ್‌ ಆಗಿ ನೇಮಿಸಿದೆ.

Advertisement

ಚೀನದ ಹಾಂಗ್‌ಝೂನಲ್ಲಿ ಸೆ. 10ರಿಂದ 12ರ ತನಕ ಏಶ್ಯಾಡ್‌ ಪಂದ್ಯಾವಳಿ ನಡೆಯಲಿದೆ.

“ಭಾರತ ಈ ಕೂಟದಲ್ಲಿ 4 ಚಿನ್ನದ ಪದಕಗಳ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ನಾವು ವಿಶ್ವನಾಥನ್‌ ಆನಂದ್‌ ಮಾರ್ಗದರ್ಶನ ಪಡೆಯಲಿದ್ದು, ಅವರು ತಂಡದ ಮೆಂಟರ್‌ ಆಗಿರಲಿದ್ದಾರೆ. ಮುಂದಿನ ಗುರುವಾರದಿಂದಲೇ ಆನಂದ್‌ ಅವರ ಕ್ಲಾಸ್‌ ಆರಂಭವಾಗಲಿದೆ. ರ್‍ಯಾಂಕಿಂಗ್‌ ಆಧಾರದ ಮೇಲೆ ಸಂಭಾವ್ಯ ತಂಡವನ್ನು ಆರಿಸಲಾಗಿದೆ’ ಎಂದು ಎಐಸಿಎಫ್ ತಿಳಿಸಿದೆ.

ಇದನ್ನೂ ಓದಿ:ಪ್ರೊ ಕಬಡ್ಡಿ: ಮರಳಿ ಅಗ್ರಸ್ಥಾನ ಅಲಂಕರಿಸಿದ ದಬಾಂಗ್‌ ದಿಲ್ಲಿ

ಸಂಭಾವ್ಯ ಆಟಗಾರರು
ಪುರುಷರ ವಿಭಾಗದ ಚೆಸ್‌ಪಟುಗಳೆಂದರೆ ವಿದಿತ್‌ ಗುಜರಾತಿ, ಪಿ. ಹರಿಕೃಷ್ಣ, ನಿಹಾಲ್‌ ಸರಿನ್‌, ಎಸ್‌.ಎಲ್‌. ನಾರಾಯಣನ್‌, ಕೆ. ಶಶಿಕಿರಣ್‌, ಬಿ. ಅಧಿಬನ್‌, ಕೆ. ಮುರಳಿ, ಅರ್ಜುನ್‌ ಇರಿಗೇಸಿ, ಅಭಿಜಿತ್‌ ಗುಪ್ತಾ ಮತ್ತು ಸೂರ್ಯಶೇಖರ್‌ ಗಂಗೂಲಿ. ವನಿತಾ ವಿಭಾಗದಿಂದ ಕೊನೇರು ಹಂಪಿ, ದ್ರೋಣವಲ್ಲಿ ಹರಿಕಾ, ವೈಶಾಲಿ ಆರ್‌., ತನಿಯಾ ಸಚೆªàವ್‌, ಭಕ್ತಿ ಕುಲಕರ್ಣಿ, ವಂತಿಕಾ ಅಗರ್ವಾಲ್‌, ಮೇರಿ ಆ್ಯನ್‌ ಗೋಮ್ಸ್‌, ಸೌಮ್ಯ ಸ್ವಾಮಿನಾಥನ್‌, ಎಹ್ಸಾ ಕರವಾಡೆ ಅವರನ್ನು ಆರಿಸಲಾಗಿದೆ.

Advertisement

ಎಪ್ರಿಲ್‌ನಲ್ಲಿ ಇಲ್ಲಿನ ಆಟಗಾರರ ಸಂಖ್ಯೆಯನ್ನು 5ಕ್ಕೆ ಇಳಿಸಲಾಗುವುದು. ಅಭಿಜಿತ್‌ ಕುಂಟೆ, ದಿಬ್ಯೇಂದು ಬರುವಾ, ದಿನೇಶ್‌ ಶರ್ಮ ಅವರು ಆಯ್ಕೆ ಸಮಿತಿಯಲ್ಲಿರುತ್ತಾರೆ.

2010ರ ಗ್ವಾಂಗ್‌ಝೂ ಗೇಮ್‌ನಲ್ಲಿ ಕೊನೆಯ ಸಲ ಚೆಸ್‌ ಸ್ಪರ್ಧೆ ಅಳವಡಿಸಲಾಗಿತ್ತು. ಭಾರತ ಇಲ್ಲಿ ಕೇವಲ 2 ಕಂಚಿನ ಪದಕ ಜಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next