Advertisement

ರಾಮ್‌ ಚರಣ್‌ ತೇಜ ಜೊತೆ ಆನಂದ್‌ ಮಹೇಂದ್ರಾ ʻನಾಟು ನಾಟುʼ ಸ್ಟೆಪ್‌ ಫುಲ್‌ ವೈರಲ್‌

05:29 PM Feb 12, 2023 | Team Udayavani |

ರಾಜಮೌಳಿ ನಿರ್ದೇಶನದ, ರಾಮ್‌ ಚರಣ್‌ ತೇಜ ಮತ್ತು ಜ್ಯೂ.ಎನ್‌ಟಿಆರ್‌ ಅಭಿನಯದ RRR ಸಿನೆಮಾ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದಲ್ಲದೆ, ಅದರ ಜನಪ್ರಿಯ ʻನಾಟು ನಾಟುʼ ಹಾಡು ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ. ಸಿನೆಮಾವಷ್ಟೇ ಅಲ್ಲದೇ ಅದರ ಹಾಡಿನ ಸ್ಟೆಪ್ಸ್‌ ಕೂಡಾ ಭಾರೀ ವೈರಲ್‌ ಆಗಿತ್ತು. ಬಹಳಷ್ಟು ಮಂದಿ ʻನಾಟು ನಾಟುʼ ಹಾಡಿಗೆ ಸ್ಟೆಪ್‌ ಹಾಕುವ ಮೂಲಕ ಸೋಷಿಯಲ್‌ ಮೀಡಿಯಾದಲ್ಲೂ ಧೂಳೆಬ್ಬಿಸಿತ್ತು.

Advertisement

ಇದೀಗ ಈ ಸ್ಟೆಪ್‌ನ ಕ್ರೇಜ಼್ ಮಹೇಂದ್ರಾ ಆಂಡ್‌ ಮಹೇಂದ್ರಾ ಕಂಪನಿ ಅಧ್ಯಕ್ಷ ಆನಂದ್‌ ಮಹೇಂದ್ರಾ ಅವರನ್ನೂ ತಟ್ಟಿದೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ರಾಮ್‌ಚರಣ್‌ ತೇಜ ಅವರನ್ನು ಭೇಟಿ ಮಾಡಿದ್ದ ಆನಂದ್‌ ಮಹೇಂದ್ರಾ ಅವರು ರಾಮ್‌ಚರಣ್‌ ಅವರಿಂದ ಈ ಸ್ಟೆಪ್‌ ಹೇಳಿಸಿಕೊಳ್ಳುತ್ತಿರುವ ವೀಡಿಯೋವೊಂದು ಭಾರೀ ವೈರಲ್‌ ಆಗಿದೆ.

ಈ ವೀಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಖ್ಯಾತ ಉದ್ಯಮಿ ಅದರ ಜೊತೆಯಲ್ಲಿ “ರಾಮ್‌ಚರಣ್‌ ಅವರ ಜೊತೆಗೆ ನಾಟು ನಾಟು ಹಾಡಿನ ಪ್ರಸಿದ್ಧ ಸ್ಟೆಪ್‌ ಗೆ ನಾನೂ ಹೆಜ್ಜೆ ಹಾಕಿದೆ. ಥ್ಯಾಂಕ್‌ ಯೂ ಮತ್ತು ನಿಮ್ಮ ಆಸ್ಕರ್‌ ರೇಸ್‌ಗೆ ಗುಡ್‌ ಲಕ್‌” ಅಂತ ಬರೆದುಕೊಂಡಿದ್ದಾರೆ.

 

Advertisement

Well apart from the race, one real bonus at the #HyderabadEPrix was getting lessons from @AlwaysRamCharan on the basic #NaatuNaatu steps. Thank you and good luck at the Oscars, my friend! pic.twitter.com/YUWTcCvCdw

— anand mahindra (@anandmahindra) February 11, 2023

Advertisement

Udayavani is now on Telegram. Click here to join our channel and stay updated with the latest news.

Next