Advertisement
ಹಳಿಯಾಳ, ಜೋಯಿಡಾ ಭಾಗದಿಂದ ಬುಧವಾರ ಸಂಸದರ ಮನೆ ಶಿರಸಿಯ ಶಿವೋಹಂಗೆ ಆಗಮಿಸಿದ್ದ ಅನಂತಕುಮಾರ ಹೆಗಡೆ ಅಭಿಮಾನಿಗಳು, ಕಾರ್ಯಕರ್ತರು ಬರಲಿರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಆಗ್ರಹಿಸಿದ್ದಾರೆ ಎಂದು ಸಭೆಯಲ್ಲಿ ಹೇಳಿದರು.
Related Articles
Advertisement
ಬೇಡ ಎಂದೇ ಪಕ್ಷ, ಉಳಿದ ಚುನಾವಣೆ ಬಿಟ್ಟು ಹೋಗಿದ್ದೆ. ನಂದೂ ತಪ್ಪಿದೆ. ಪಕ್ಷದ ಚುನಾವಣೆಗೂ ಹೋಗಿಲ್ಲ. ಮನದಲ್ಲಿ ಆಸೆ ಇದ್ದಿದ್ದರೆ ಹೋಕ್ತಿದ್ದೆ. ಬೇಡ ಅಂತನೇ ನಾನೇ ಅಂತರ ಕಾಯ್ದುಕೊಂಡಿದೆ. ಪ್ರಚಾರಕ್ಕೆ ಬಂದರೆ ಸುನೀಲ ಗೆಲ್ತಿದ್ದರು. ನಿಂತಕೊಳ್ಳಿ ಅಂದವನೂ ನಾನೇ. ನಂತರ ಎಲ್ಲೂ ಹೋಗಿಲ್ಲ. ಎರಡು ವರ್ಷ ಆರೋಗ್ಯ ಹಾಳಾಗಿತ್ತು. ಒಂದ್ ವರ್ಷದಿಂದ ತೊಂದರೆ ಇಲ್ಲ ಎಂದರು. ಮಾಜಿ ಶಾಸಕ ಸುನೀಲ ಹೆಗಡೆ, ಬಹಳಷ್ಟು ಹಿಂದುತ್ವಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಪೊಲೀಸ್ ಸ್ಟೇಶನ್ ಗೆ ಕೂಡ ಹೋಗಿ ಹೋರಾಟ ಮಾಡಿದವರು. ನೇರವಾಗಿ ರಾಜಕಾರಣದಿಂದ ಬಂದವರಲ್ಲ. ಬಿಜೆಪಿ ಗಟ್ಟಿಯಾಗಿ ಜಿಲ್ಲೆಯಲ್ಲಿ ನೆಲೆ ನಿಲ್ಲಲು ಅನಂತಕುಮಾರ ಅವರು ಕಾರಣ. ಅನಂತಕುಮಾರ ಹೆಗಡೆ ಅವರು ಮರಳಿ ಬಂದು ನಮ್ಮ ತಂಡ ಗೆಲ್ಲಿಸಬೇಕು. ಅನಂತಕುಮಾರ ಹೆಗಡೆ ಅವರು ಎಂದರೆ ಕಥೆಯಲ್ಲ, ದಂತಕಥೆ. ವ್ಯಕ್ತಿಯಲ್ಲ, ಶಕ್ತಿ. ಇವತ್ತಿನ ರಾಜಕಾರಣದಿಂದ ಕ್ಷಣಿಕಕ್ಕೆ ಮಹತ್ವ ನೀಡುತ್ತಾರೆ. ರೇಶನ್ ಕಾರ್ಡ, ಮನೆ ಮಾತ್ರ ಅಭಿವೃದ್ದಿಯಲ್ಲ. ಸನಾತನ ಸಂಸ್ಕೃತಿಗಳ ಉಳಿವೂ ಮಹತ್ವದ್ದು ಎಂದರು. ಅನಂತಕುಮಾರ ಹೆಗಡೆ ಅವರು ಯೋಜನೆಗಳ ಅನುಷ್ಠಾನಗಳನ್ನು ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಮನೆ ಸದಸ್ಯರಾಗಿ ಮಾರ್ಗದರ್ಶನ ಮಾಡಬೇಕು ಎಂದರು. ಹಳಿಯಾಳದ ಅನಿಲ್ ಮುತ್ನಾಳ, ಹಿಂದುತ್ವ, ಹಿಂದು ಬಗ್ಗೆ ಹೋರಾಟ ಮಾಡುತ್ತಿರುವ ಸಂಸದ ಅನಂತಕುಮಾರ ಹೆಗಡೆ ಅವರು ಈ ಬಾರಿಯೂ ಸ್ಪರ್ಧಿಸಬೇಕು. ಅವರು ಸ್ಪರ್ಧಿಸಿದರೆ ನಾವು ಕೆಲಸ ಮಾಡುತ್ತೇವೆ ಎಂದರು. ಮಂಗೇಶ ದೇಶಪಾಂಡೆ, ಅನಂತಕುಮಾರ ಹೆಗಡೆ ಅವರು ಹಿಂದುತ್ವಕ್ಕೆ ಕೈಗೊಂಡ ಹೋರಾಟವೇ ಅವರನ್ನು ಇಡೀ ರಾಜ್ಯದಲ್ಲಿ ಜನ ನೆನಪಿಟ್ಟಿದ್ದಾರೆ. ಅನಂತಕುಮಾರ ಅವರು ರಾಜಕೀಯ ಶಕ್ತಿಯಾಗಿ ಇರಬೇಕು ಎಂದರು. ಪ್ರಮುಖರಾದ ಗಣಪತಿ ಮಾಂಜ್ರೇಕರ್, ಶಿವಾಜಿ ನರಸಾನಿ, ಅನಿಲ್ ಮುತ್ನಾಳ, ಕೃಷ್ಣ ಎಸಳೆ, ಚಂದ್ರು ಎಸಳೆ ಇತರರು ಇದ್ದರು. ಧರ್ಮದ ಕೆಲಸಕ್ಕೆ ಮುಲಾಜಿಲ್ಲ: ಅನಂತ್
ರಾಜಕಾರಣ ಬಂದಾಗ ಮಾತ್ರ ತಲೆ ಬೇನೆ ಆಗುತ್ತದೆ. ಆದರೆ, ಧರ್ಮದ ಕೆಲಸಕ್ಕೆ ಯಾವುದೇ ಮಲಾಜಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ನಮ್ಮ ಬಹುಕಾಲದ ಕನಸಿನಂತೆ ರಾಮ ಮಂದಿರ ಆಗಿದೆ. ಮುಂದೆ ಕಾಶೀ, ಮಥುರಾ ಕೂಡ ಆಗಬೇಕು. ಮಂದಿರಗಳು ಮಂದಿರವಾಗಿಯೇ ಉಳಿಯಬೇಕು ಎಂದ ಅವರು, ಬಿಜೆಪಿ ಗೆಲ್ಲಿಸಲು ಒಟ್ಟಾಗಿ ಕೆಲಸ ಮಾಡೋಣ. ಮುಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವೇ ಬರಲು ಈಗಿನಿಂದಲೇ ಕೆಲಸ ಮಾಡೋಣ ಎಂದರು. ನಮ್ಮ ಪಕ್ಷದಲ್ಲೇ ಮೊದಲು ಮಾಡ್ತೇನೆ ಹೇಳಿ ನಂತರ ಮಾಡಬೇಡಿ ಎನ್ನುವವರನ್ನೂ ಕಂಡಿದ್ದೇವೆ. ಅಂಥವರಲ್ಲ ಇವರು. ನಿಷ್ಠುರರವಾದಿ. ಚುನಾವಣೆ ನಿಲ್ಲಲ್ಲ ಅಂತ ಮಾತ್ರ ಹೇಳಬೇಡಿ. ನಾನು ಬೇರೆ ಪಕ್ಷದಲ್ಲಿ ಇದ್ದಾಗ ಸಂಸತ್ತಿಗೆ ಮಾತ್ರ ಅನಂತ ಅವರಿಗೇ ಮತ ಹಾಕ್ತೇವೆ ಅಂತ ತಾಯಿ, ಪತ್ನಿ ಹೇಳುತ್ತಿದ್ದರು.
– ಸುನೀಲ್ ಹೆಗಡೆ, ಮಾಜಿ ಶಾಸಕ ಇದನ್ನೂ ಓದಿ: Gangavathi: ಸುಟ್ಟು ಭಸ್ಮವಾದ ಗೆಸ್ಟ್ ಹೌಸ್; ಕಿಡಿಗೇಡಿಗಳ ಕೃತ್ಯವೆಂದ ಕೆಆರ್‌ಪಿಪಿ ಮುಖಂಡರು