ನಟ ಶ್ರೀನಿ ಅಭಿನಯದ “ಓಲ್ಡ್ ಮಾಂಕ್’ ಚಿತ್ರ ಫೆ. 11ಕ್ಕೆ ತೆರೆಗೆ ಬರುತ್ತಿದೆ. ಸದ್ಯ ಭರ್ಜರಿಯಾಗಿ ಚಿತ್ರದ ಪ್ರಮೋಶನ್ ಕಾರ್ಯ ದಲ್ಲಿ ಬಿಝಿಯಾಗಿ ರುವ ಚಿತ್ರತಂಡ, ಇದೀಗ ಇಂಡಿಯಾದ ಮೊದಲ ಅನಾಗ್ಲಿಫ್ ತ್ರಿಡಿ ಪೋಸ್ಟರ್ ಸ್ಟಾಂಡಿ ಮೂಲಕ “ಓಲ್ಡ್ ಮಾಂಕ ಸಿನಿಮಾದ ಕಂಟೆಂಟ್ ಅನ್ನು ಸಿನಿಪ್ರಿಯರಿಗೆ ತಲುಪಿಸುವ ಕೆಲಸಕ್ಕೆ ಮುಂದಾಗಿದೆ.
ಈಗಾಗಲೇ ರಾಜ್ಯದಾದ್ಯಂತ ಸುಮಾರು 60ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ “ಓಲ್ಡ್ ಮಾಂಕ್’ನ ಅನಾಗ್ಲಿಫ್ ತ್ರಿಡಿ ಪೋಸ್ಟರ್ ಸ್ಟಾಂಡಿಗಳನ್ನು ಅಳವಡಿಸಲಾಗಿದ್ದು, ಈ ಅನಾಗ್ಲಿಫ್ ತ್ರಿಡಿ ಪೋಸ್ಟರ್ ಸ್ಟಾಂಡಿಗಳು ಸಿನಿಪ್ರಿಯರನ್ನು ಸೆಳೆಯುತ್ತಿವೆ.
ಇದನ್ನೂ ಓದಿ:ಹೊಸ ವರ್ಷದ ಹೊಸ ವರ್ಷದ ಸಂಭ್ರಮಕ್ಕೆ ತಾರೆಯರು ರೆಡಿ
ಇನ್ನು ಭಾರತೀಯ ಚಿತ್ರರಂಗದಲ್ಲಿಯೇ ಅನಾಗ್ಲಿಫ್ ತ್ರಿಡಿ ಪೋಸ್ಟರ್ ಸ್ಟಾಂಡಿಗಳನ್ನು ಸಿನಿಮಾಗಳ ಪ್ರಮೋಶನ್ಸ್‌ಗೆ ಮೊದಲು ಬಳಸುತ್ತಿರುವ ಮೊದಲ ಚಿತ್ರ “ಓಲ್ಡ್ ಮಾಂಕ್’ ಎನ್ನಲಾಗುತ್ತಿದ್ದು, ಈ ಬಗ್ಗೆ ಮಾತನಾಡುವ ಚಿತ್ರದ ನಾಯಕ ನಟ ಕಂ ನಿರ್ದೇಶಕ ಶ್ರೀನಿ, “ನಮಗೆ ತಿಳಿದಿರುವಂತೆ, ಈಗಾಗಲೇ ಹಲವು ಸಿನಿಮಾಗಳ ಪ್ರಮೋಶನ್ಸ್‌ನಲ್ಲಿ ತ್ರಿಡಿ ಪೋಸ್ಟರ್ ಸ್ಟಾಂಡಿಗಳನ್ನು ಬಳಸಲಾಗಿದೆ. ಆದ್ರೆ, ಅನಾಗ್ಲಿಫ್ ತ್ರಿಡಿ ಪೋಸ್ಟರ್ ಸ್ಟಾಂಡಿಗಳು ಸಿನಿಮಾದ ಪ್ರಮೋಶನ್ಸ್‌ನಲ್ಲಿ ಬಳಸುತ್ತಿರುವುದು ನಮ್ಮ ಸಿನಿಮಾದಲ್ಲೇ ಮೊದಲು. ಈ ಅನಾಗ್ಲಿಫ್ ತ್ರಿಡಿ ಪೋಸ್ಟರ್ ಸ್ಟಾಂಡಿಯಲ್ಲಿ ಎರಡು ಬೇರೆ ಬೇರೆ ಆ್ಯಂಗಲ್‌ಗಳಲ್ಲಿ ಪೋಸ್ಟರ್ ನೋಡಿದಾಗ ಸಿನಿಮಾದಲ್ಲಿ ಬರುವ ಎರಡು ಕ್ಯಾರೆಕ್ಟರ್‌ಗಳು ಕಾಣುತ್ತವೆ. “ಓಲ್ಡ್ ಮಾಂಕ್’ ಕಥೆ ಎರಡು ಪಾತ್ರಗಳ ಸುತ್ತ ನಡೆಯುವುದರಿಂದ, ಸಿನಿಮಾದ ಎರಡೂ ಕ್ಯಾರೆಕ್ಟರ್‌ಗಳಾದ ನಾರದ ಮತ್ತು ಇಂದಿನ ಯಂಗ್ ಬಾಯ್ ಇಬ್ಬರೂ ಬೇರೆ ಬೇರೆ ಆ್ಯಂಗಲ್‌ನಲ್ಲಿ ಬೇರೆ ಬೇರೆ ಗೆಟಪ್‌ನಲ್ಲಿ ಕಾಣುವಂತೆ ಈ ಪೋಸ್ಟರ್ ಸ್ಟಾಂಡಿಯನ್ನು ಡಿಸೈನ್ ಮಾಡಲಾಗಿದೆ. ಈಗಾಗಲೇ ರಾಜ್ಯದ ಎಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲೂ ಈ ಅನಾಗ್ಲಿಫ್ ತ್ರಿಡಿ ಪೋಸ್ಟರ್ ಸ್ಟಾಂಡಿಗಳನ್ನು ಇಡಲಾಗಿದ್ದು, ಆಡಿಯನ್ಸ್ ತುಂಬ ಕುತೂಹಲದಿಂದ ಬಂದು ಈ ಸ್ಟಾಂಡಿಗಳನ್ನು ನೋಡುತ್ತಿದ್ದಾರೆ’ ಎನ್ನುತ್ತಾರೆ.