Advertisement

ನಿರ್ವಹಣೆಯಿಲ್ಲದ ಬಡಗಬೆಟ್ಟು ಮಕ್ಕಳ ಪಾರ್ಕ್‌

11:42 PM Jan 23, 2020 | Sriram |

ಉಡುಪಿ: ಬಡಗುಬೆಟ್ಟು ವ್ಯಾಪ್ತಿಯ ಮಕ್ಕಳ ಪಾರ್ಕ್‌ ಸಂಪೂರ್ಣ ಹಾನಿಗೊಳಗಾಗಿದ್ದು ಬಳಕೆಗೆ ಅಲಭ್ಯವಾಗಿದೆ. ಈ ಹಿಂದೆ ದಿನನಿತ್ಯ ಮಕ್ಕಳು ಈ ಪಾರ್ಕ್‌ಗೆ ಆಟವಾಡಲು ಬರುತ್ತಿದ್ದರು. ಆದರೆ ಪಾರ್ಕ್‌ನಲ್ಲಿ ಯಾವುದೇ ಪರಿಕರಗಳು ಸುಸ್ಥಿತಿಯಲ್ಲಿಲ್ಲದ ಕಾರಣ ಮಕ್ಕಳು ನಿರಾಸೆಗೊಂಡಿದ್ದಾರೆ.

Advertisement

ಕೊರಂಗ್ರಪಾಡಿ- ಮಿಷನ್‌ಕಾಂಪೌಂಡ್‌ ರಸ್ತೆಯ ಸಿಎಸ್‌ಎ ಕ್ರೈಸ್ತಜ್ಯೋತಿ ಚರ್ಚ್‌ನ ಸ್ವಲ್ಪ ಮುಂದೆ ಅಶ್ವತ್ಥ ಕಟ್ಟೆಯ ಬಳಿ ಈ ಪಾರ್ಕ್‌ ಇದೆ. ಸುಮಾರು ವರ್ಷಗಳಿಂದ ನಿರ್ವಹಣೆ ಇಲ್ಲದಂತಾದ ಈ ಪಾರ್ಕ್‌ನಲ್ಲಿ ಮಕ್ಕಳ ಆಟಿಕೆ ಸಾಮಗ್ರಿಗಳು ಪಾಳುಬೀಳುತ್ತಿದೆ. ಈಗ ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಪಾರ್ಕ್‌ಗೆ ಪೆಟ್ಟುಬಿದ್ದಂತಾಗಿದೆ.

ಮರುನಿರ್ಮಾಣದ ನಿರೀಕ್ಷೆ
ಈ ಹಿಂದೆ ಪಾರ್ಕ್‌ನಲ್ಲಿ ಜಾರುಬಂಡಿ, ಲೆಗ್‌ ಪ್ರಸ್‌, ಉಯ್ನಾಲೆ ಸೇರಿದಂತೆ ಹತ್ತು ಹಲವು ಆಟದ ಪರಿಕರಗಳು ಲಭ್ಯವಿದ್ದವು. ಬಳಿಕ ನಿರ್ವಹಣೆ ಕೊರತೆಯಿಂದ ಹಾಳಾಗಿವೆ. ಪಾರ್ಕ್‌ ಆರಂಭವಾಗಿ ಹಲವಾರು ವರ್ಷಗಳು ಕಳೆದರೂ ಒಂದು ಬಾರಿ ಕೂಡ ಇದರ ನಿರ್ವಹಣೆಗೆ ಮಾತ್ರ ಯಾರೂ ಕೂಡ ಮನಸ್ಸು ಮಾಡಿಲ್ಲ. ಈಗ ಪಾರ್ಕ್‌ ಮುಂಭಾಗದ ಪ್ರವೇಶ ಗೇಟ್‌ ಸೇರಿದಂತೆ ಆವರಣ ಗೋಡೆ ಇಲ್ಲದ ಸ್ಥಿತಿ ಇದೆ. ಆಟದ ಸಲಕರಣೆಗಳನ್ನು ಕಿತ್ತು ತೆಗೆದಂತೆ ಪಾರ್ಕ್‌ನ ಆವರಣದಲ್ಲಿ ಇಡಲಾಗಿದೆ.

ಶ್ವಾನಗಳ ಬಿಡಾರ
ರಸ್ತೆ ಕಾಮಗಾರಿ ಸಮಯದಲ್ಲಿ ಕಬ್ಬಿಣದ ರಾಡ್‌ ಸಹಿತ ಕೆಲವು ಸಲಕರಣೆಗಳನ್ನು ಈ ಪಾರ್ಕ್‌ನಲ್ಲಿ ಬಿಡಲಾಗಿದೆ. ಪಾಳುಬಿದ್ದ ಸ್ಥಿತಿಗೆ ತಲುಪಿದ್ದು ಬೀದಿ ನಾಯಿಗಳ ಗುಂಪು ಇಲ್ಲಿ ಬಿಡಾರ ಮಾಡಿಕೊಂಡಿದೆ. ಇದರಿಂದ ಸಾರ್ವಜನಿಕರೂ ಇತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ.

ಈ ಪಾರ್ಕ್‌ ನವೀಕರಣ ಮಾಡುವ ಬಗ್ಗೆ ಚಿಂತನೆಯಿದೆ. ರಸ್ತೆ ಕಾಮಗಾರಿ ಮುಗಿದ ತತ್‌ಕ್ಷಣ ಚರಂಡಿ ಕಾರ್ಯ ಪ್ರಾರಂಭವಾಗುತ್ತದೆ. ಇವೆಲ್ಲ ಕೆಲಸಗಳು ಮುಗಿದ ಬಳಿಕವೇ ನವೀಕರಣಕ್ಕೆ ಸಾಧ್ಯ. ಇದಕ್ಕೆ ನಗರಸಭೆಯ ಅನುದಾನವನ್ನು ನಿರೀಕ್ಷಿಸಲಾಗುತ್ತಿದೆ.
-ವಿಜಯ ಪೂಜಾರಿ, ಸದಸ್ಯರು, 22ನೇ ಬಡಗುಬೆಟ್ಟು ವಾರ್ಡ್‌

Advertisement

ಶೀಘ್ರ ಪರಿಶೀಲನೆ
ಪಾರ್ಕ್‌ನ ದುಃಸ್ಥಿತಿ ಬಗ್ಗೆ ಶೀಘ್ರ ಪರಿಶೀಲನೆ ನಡೆಸಲಾಗುವುದು. ಮುಂದಿನ ಬಜೆಟ್‌ನಲ್ಲಿ ಪಾರ್ಕ್‌ಗಳಿಗೆ ಅನುದಾನ ಹಂಚಿಕೆ ಕಾರ್ಯ ನಡೆಸಲಾಗುವುದು. ಈ ಮೂಲಕ ಪಾರ್ಕ್‌ನ ಅಭಿವೃದ್ಧಿಗೆ ಶ್ರಮಿಸಲಾಗುವುದು.
-ಆನಂದ್‌ ಸಿ. ಕಲ್ಲೋಳಿಕರ್‌, ಪೌರಾಯುಕ್ತರು, ಉಡುಪಿ ನಗರ ಸಭೆ

-ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next