Advertisement

ಕಾಲುವೆಯಲ್ಲಿ ಹರಿದು ಬಂದ ಅಪರಿಚಿತ ಶವ

10:12 AM Nov 01, 2019 | Team Udayavani |

ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕು ವ್ಯಾಪ್ತಿಯ ಕಾಡಂಗೇರಾ ಬಳಿ ಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಹರಿದು ಬಂದ ಘಟನೆ ಗುರುವಾರ ವರದಿಯಾಗಿದೆ.

Advertisement

ಜಿಲ್ಲೆಯ ಕೃಷ್ಣಾ ಭಾಗ್ಯ ಜಲ ನಿಗಮದ ಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ತೇಲಿ ಬಂದಿದೆ. ಶವವನ್ನು ನೋಡಿದ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ವಡಗೇರಾ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

ಶವದ ವೈದ್ಯಕೀಯ ಪರೀಕ್ಷೆ ನಡೆಯುತ್ತಿದ್ದು ಅಂದಾಜು 30 ರಿಂದ 35 ವರ್ಷದ ಮಹಿಳೆ ಶವ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next