Advertisement
ಸಿದ್ದಾಪುರ: ಸ್ವಾವಲಂಬನೆ ಬದುಕಿನ ಉದ್ದೇಶದಿಂದ ಆರಂಭಗೊಂಡ ಸಿದ್ದಾಪುರ ಹಾಲು ಉತ್ಪಾದಕರ ಸಹಕಾರಿ ಸಂಘ ಸಮಾಜಮುಖೀ ಧೋರಣೆಯನ್ನು ಹೊಂದಿದ್ದು, ಹೈನುಗಾರರ ಪಾಲಿಗೆ ಆಶಾಕಿರಣವಾಗಿದೆ.ಈ ಸಂಘಕ್ಕೆ 45 ವರ್ಷಗಳ ಇತಿಹಾಸವಿದ್ದು, ಜಿಲ್ಲೆಯ ಪ್ರಮುಖ ಸಂಘವಾಗಿಯೂ ಗುರುತಿಸಿಕೊಂಡಿದೆ.
ಸಿದ್ದಾಪುರ, ಜನ್ಸಾಲೆ, ಹೆನ್ನಾಬೈಲು ವ್ಯಾಪ್ತಿಯ ಗ್ರಾಮಸ್ಥರು ಮನೆಯಲ್ಲಿರುವ ಅಲ್ಪ ಪ್ರಮಾಣದ ಹಾಲನ್ನು ಹೊಟೇಲುಗಳಿಗೆ ಕೊಟ್ಟು ಆದಾಯಗಳಿಸುತ್ತಿದ್ದರು. ಇದನ್ನು ಊರ ಮುತ್ಸದ್ದಿಗಳು ಗಮನಿಸಿ ಹೈನುಗಾರರಿಗೆ ನಿಶ್ಚಿತ ಆದಾಯ, ಬದುಕಿನ ಭದ್ರತೆಗಾಗಿ ಸಂಘ ನಿರ್ಮಾಣಕ್ಕೆ ಯೋಜಿಸಿದರು.
Related Articles
Advertisement
ಶೀತಲೀಕರಣ ಘಟಕಸಂಘ ತನ್ನ ಬಳಿ ಶೀತಲೀಕರಣ ಘಟಕವನ್ನೂ ಹೊಂದಿದ್ದು ಇರಿಗೆ, ಕಲ್ಸಂಕ, ಹಳ್ಳಿಹೊಳೆ, ಕಮಲಶಿಲೆ, ಯಡಮೊಗೆ, ಕೆರೆಕಟ್ಟೆ, ಹಂಚಿಕಟ್ಟೆ ಹಾಗೂ ಸಿದ್ದಾಪುರ ಸೇರಿದಂತೆ 8 ಸಂಘಗಳಿಂದ ಹಾಲು ಬಂದು ಶೇಖರಣೆಗೊಳ್ಳುತ್ತದೆ. ಸಂಘದ ವ್ಯಾಪ್ತಿಯ 40 ಸಂಘಗಳಿಗೆ ಸಂಬಂಧಿಸಿದಂತೆ ಪಶು ವೈದ್ಯಕೀಯ ಶಿಬಿರ ಕಚೇರಿ ಹೊಂದಿದೆ. ಪ್ರತಿ ತಿಂಗಳಿಗೆ ಸರಾಸರಿ 250 ಕೃತಕ ಗರ್ಭಧಾರಣೆ ನಡೆಯುತ್ತಿದೆ. 1600 ಲೀ. ಹಾಲು ಸಂಗ್ರಹ
ಸಂಘ ಆರಂಭವಾದ ಕಾಲದಲ್ಲಿ ಕೆನರಾ ಮಿಲ್ಕ್ ಯೂನಿಯನ್‌ಗೆ ಹಾಲು ಸರಬರಾಜು ಮಾಡುತ್ತಿದ್ದು ಉತ್ತಮ ಬೆಳೆವಣಿಗೆ ಕಂಡಿತ್ತು. ಬಳಿಕ ಒಕ್ಕೂಟ ಸ್ಥಾಪನೆಯಾದ ಬಳಿಕ ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುತ್ತಿದೆ. ಆರಂಭದ ದಿನಗಳಲ್ಲಿ ಸಂಘದಲ್ಲಿ ದಿನಕ್ಕೆ 70 ಲೀ. ಹಾಲು ಸಂಗ್ರಹವಾಗುತ್ತಿತ್ತು. ಈಗ 1600 ಲೀ. ಹಾಲು ಸಂಗ್ರಹವಾಗುತ್ತಿದೆ. ಪ್ರಸ್ತುತ 433 ಸದಸ್ಯರನ್ನು ಹೊಂದಿದ್ದು, 260 ಸದಸ್ಯರು ಸಂಘಕ್ಕೆ ಹಾಲು ನೀಡುತ್ತಿದ್ದಾರೆ. ಆಜ್ರಿ ಮೂರುಕೈಯಲ್ಲಿ ತನ್ನ ಶಾಖೆಯನ್ನೂ ಹೊಂದಿದೆ. ಪ್ರಸ್ತುತ 5 ಸಾವಿರ ಲೀ. ಸಾಮಥ್ಯದ ಬಿ.ಎಂ.ಸಿ ಕೇಂದ್ರ ಆರಂಭಿಸಿದೆ. ಮುಂದೆ 8 ಸಾವಿರ ಸಾಮಥ್ಯದ ಬಿ.ಎಂ.ಸಿ ಕೇಂದ್ರ ಸ್ಥಾಪಿಸುವ ಗುರಿ ಹೊಂದಿದ್ದೇವೆ. ಇದರ ಬಗ್ಗೆ ಈಗಾಗಲೇ ಒಕ್ಕೂಟಕ್ಕೆ ಪ್ರಾಸ್ತವನೆ ಕೂಡ ಸಲ್ಲಿಸಲಾಗಿದೆ.
– ಡಿ. ಗೋಪಾಲಕೃಷ್ಣ ಕಾಮತ್ ಅಧ್ಯಕ್ಷರು, ಸಿದ್ದಾಪುರ ಹಾ.ಉ.ಸ.ಸಂಘ