Advertisement

ಆನ್‌ ಲೈನ್‌ ಬೇಕರಿ

04:47 AM Jun 22, 2020 | Lakshmi GovindaRaj |

ಓವೆನ್‌ ಫ್ರೆಶ್‌ ಎಂಬ ಜಾಹೀರಾತು ಪದವನ್ನು ಕೇಳಿರಬಹುದು. ಯಾವುದೇ ಖಾದ್ಯವನ್ನು ಬಿಸಿಯಾಗಿದ್ದಾಗಲೇ ತಿಂದರೆ ಚೆನ್ನ ಎನ್ನುವುದನ್ನು ಇಂಗ್ಲಿಷ್‌ನಲ್ಲಿ ಸೂಚಿಸುವ ಪದ ಅದು. ಆನ್‌ಲೈನಿನಲ್ಲಿ ಖಾದ್ಯ ಆರ್ಡರ್‌ ಮಾಡಿ ಫ್ರೆಶ್‌ ಆಗಿ ಸವಿಯುವ ಈ ಕಾಲದಲ್ಲಿ, ಆನ್‌ಲೈನ್‌ ಬೇಕರಿಯನ್ನು ಪ್ರಾರಂಭಿಸುವುದು ಒಂದೊಳ್ಳೆಯ ಬಿಝಿನೆಸ್‌ ಐಡಿಯಾ. ಮನೆಯಲ್ಲೇ ಆಯ್ದ ಬೇಕರಿ ಖಾದ್ಯಗಳನ್ನು ತಯಾರಿಸಿ ಮಾರಬಹುದು.

Advertisement

ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮುಂತಾದ ಸಾಮಾಜಿಕ  ಜಾಲತಾಣಗಳಲ್ಲಿ ಮಾರ್ಕೆಟ್‌ ಮಾಡಿಕೊಂಡು ಗ್ರಾಹಕರನ್ನು ಸಂಪಾದಿಸಬಹುದು. ಫೋನ್‌ ಆರ್ಡರ್‌ ಗಳನ್ನು ಪಡೆದುಕೊಳ್ಳುವುದರಿಂದಲೂ ವ್ಯಾಪಾರ ಹೆಚ್ಚಿಸಿಕೊಳ್ಳಬಹುದು. ಖಾದ್ಯ ಇಷ್ಟವಾದಲ್ಲಿ ಪರಿಚಿತರಿಗೂ ತಿಳಿಸಿ ಎಂಬ ಒಂದು  ಮಾತನ್ನೂ ಸೇರಿಸುವುದರಿಂದ, ಈ ಉತ್ಪನ್ನಗಳನ್ನು ಮಾರ್ಕೆಟಿಂಗ್‌ ಮಾಡಬಹುದು. ಬಾಯಿಂದ ಬಾಯಿಗೆ ಹರಡುವ ಮೂಲಕ ಪಡೆಯುವ ಪ್ರಚಾರವೇ ಈಗ ಅತ್ಯಂತ ಪರಿಣಾಮಕಾರಿಯಾದ ಮಾರ್ಕೆಟಿಂಗ್‌ ತಂತ್ರ.

Advertisement

Udayavani is now on Telegram. Click here to join our channel and stay updated with the latest news.

Next