ವೃದ್ಧರನ್ನು ಅವರವರ ಕುಟುಂಬಕ್ಕೆ ಸೇರಿಸುವಲ್ಲಿ ಪಂಡಿತ್ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಗಜಾನನ ಭಟ್ ಹಾಗೂ ಸಹಾಯ ಟ್ರಸ್ಟ್ ಅಧ್ಯಕ್ಷ ಸತೀಶ ರಾಮಾ ಶೆಟ್ಟಿ ಮುತುವರ್ಜಿಯೊಂದಿಗೆ ಮಾನವೀಯ ಪ್ರಯತ್ನ ಮಾಡಿದ್ದಾರೆ.
Advertisement
ಈ ಕುರಿತು ಡಾ| ಗಜಾನನ ಭಟ್ ಸಹಾಯ ಟ್ರಸ್ಟ್ ಅಧ್ಯಕರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ಮಾಡಿ ಇಂತಹ ವೃದ್ಧರನ್ನು ಶೀಘ್ರವಾಗಿ ಅವರವರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕೆಂದು ತಿಳಿಸಿದಾಗ ಸಹಾಯ ಸಂಸ್ಥೆ ಅಧ್ಯಕ್ಷ ಸತೀಶ ರಾಮಾ ಶೆಟ್ಟಿ ಸಹಾಯ ಟ್ರಸ್ಟ್‌ನ ಸಿಬ್ಬಂದಿಯೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಗಮನಿಸಿದ್ದಾರೆ. ವೈದ್ಯ ಡಾ| ಚೇತನ್, ಡಾ| ನೇತ್ರಾವತಿ ಹಾಗೂ ವೈದ್ಯಾಧಿ ಕಾರಿಗಳಾದ ಡಾ| ಗಜಾನನ ಭಟ್ ಬಳಿ ಚರ್ಚಿಸಿದ್ದಾರೆ. ನಂತರ ಸ್ಥಳಕ್ಕೆ ಟೌನ್ ಸ್ಟೇಶನ್ ಎಎಸ್‌ಐ ರಾಜೇಶ ನಾಯ್ಕ ಹಾಗೂ ಮಹಿಳಾ ಪೊಲೀಸ್ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡೆದು ಆಸ್ಪತ್ರೆ ಸಿಬ್ಬಂದಿ ನೆರವಿನೊಂದಿಗೆ ವೃದ್ಧೆ ಕವಿತಾಳನ್ನು ಗುರುವಾರ ಅವರ ಮನೆಗೆ ಸೇರಿಸಿದ್ದಾರೆ. ಶಿರಸಿ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಹಲವು ವರ್ಷಗಳಿಂದಲೂ ಅನೇಕ ವೃದ್ಧರು ಕುಟುಂಬಗಳಿದ್ದರೂ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿ ಕಾಯಂ ನೆಲೆಸಿದ್ದಾರೆ. ಸ್ವಂತ ಮನೆಯಿದ್ದರೂ ಮನೆಗೆ ಹೋಗಲು ನಿರಾಕರಿಸುವ ಇಂತಹ ಅನೇಕ ವೃದ್ಧರು ಪಂಡಿತ ಸಾರ್ವಜನಿಕ ಆಸ್ಪತೆಯಲ್ಲೇ ಕೊನೆಯುಸಿರೆಳೆದ ಘಟನೆಗಳು ಈವರೆಗೆ ಬಹಳಷ್ಟು ನಡೆದಿದೆ.