Advertisement

ಶಿಕ್ಷಕರ ನೇಮಕ ತನಿಖೆ ಸ್ವಾಗತಾರ್ಹ; ಆದರೆ ರಾಜಕೀಯ ಕಾರಣ ಸಲ್ಲದು

12:06 AM Sep 08, 2022 | Team Udayavani |

ಹಿಂದಿನ ಸರಕಾರದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಪ್ರಸಕ್ತ ಬಿಜೆಪಿ ಸರಕಾರ ತನಿಖೆ ಮಾಡಲು ಹೊರಟಿ ರುವುದು ಸ್ವಾಗತಾರ್ಹ ಬೆಳವಣಿಗೆಯೇ. ಆದರೆ ಈ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಮಯದ ಬಗ್ಗೆ ಹಲವು ಪ್ರಶ್ನೆಗಳು ಏಳುತ್ತಿವೆ. ಬಿಜೆಪಿ ಸರಕಾರದ ಮೇಲೆ 40 ಪರ್ಸೆಂಟ್‌ ಕಮಿಷನ್‌ ಆರೋಪಗಳು ಬಂದಿರುವ ಬೆನ್ನಲ್ಲೇ ಹಿಂದಿನ ಸರಕಾರದ ಹಗರಣದ ಕುರಿತು ತನಿಖೆ ನಡೆಸಲು ಮುಂದಾಗಿದೆ ಎಂಬ ಅನುಮಾನಗಳು ಏಳುತ್ತವೆ.

Advertisement

ಹಿಂದಿನ ಸರಕಾರಗಳ ಅವಧಿಯಲ್ಲಿ ನಡೆದಿರಬಹುದಾದ ಅಕ್ರಮಗಳ ಬಗ್ಗೆ ತನಿಖೆ ನಡೆಸುವುದು ಹೊಸದೇನಲ್ಲ. ಅದು ಪ್ರಜಾಪ್ರಭುತ್ವದಲ್ಲಿ ಸಹಜ ಕೂಡ. ಆದರೆ ಬಿಜೆಪಿ ಸರಕಾರ ಬಂದು ಮೂರು ವರ್ಷಗಳಾದ ಮೇಲೆ ಮತ್ತು ಚುನಾವಣೆ ಹತ್ತಿರ ಬರುತ್ತಿರುವಾಗ ಈಗ ತನಿಖೆ ನಡೆಸಲು ಹೊರ ಟಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಹಿಂದಿನ ಸರಕಾರದ ಅವಧಿಯಲ್ಲಿ ಶಿಕ್ಷಕರ ನೇಮಕ, ಅರ್ಕಾವತಿ ಬಡಾವಣೆಯ ರಿಡೂ ಹಾಗೂ ಪಾವಗಡ ಸೋಲಾರ್‌ ಘಟಕ ನಿರ್ಮಾಣ ದಲ್ಲಿ ಅವ್ಯವಹಾರ ಆಗಿದ್ದರೆ ಅಕ್ಷಮ್ಯವೇ. ಹಿಂದಿನ ಸರಕಾರದಲ್ಲಿ ಹಗರಣ ನಡೆದಿದ್ದರೆ ಭ್ರಷ್ಟಾಚಾರ ಆಗಿದ್ದರೆ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ತತ್‌ಕ್ಷಣ ತನಿಖೆಗೆ ವಹಿಸಿ ಕ್ರಮ ಕೈಗೊಳ್ಳಬಹುದಿತ್ತು. ಮೂರು ವರ್ಷ ಏಕೆ ಸುಮ್ಮನಿತ್ತು? ಭ್ರಷ್ಟಾಚಾರ ಆಗಿರುವುದು ಗೊತ್ತಿದ್ದರೂ ಸುಮ್ಮನಿದ್ದು ಇದೀಗ ವಿಪಕ್ಷ ಕಾಂಗ್ರೆಸ್‌ ಅಥವಾ ಜೆಡಿಎಸ್‌ ನಾಯಕರು ಆರೋಪ ಮಾಡಿದಾಗ ಹಿಂದಿನ ಸರಕಾರದಲ್ಲೂ ಆಗಿತ್ತು ಎಂದು ಹೇಳಲಾಗುತ್ತಿದೆಯೇ? ಸರಕಾರ ರವು ವಿಪಕ್ಷ ನಾಯಕರ ಆರೋಪಕ್ಕೆ ಬೆದರಿಕೆ ಅಸ್ತ್ರವಾಗಿ ಹಿಂದಿನ ಸರಕಾರದ ನೇಮಕಾತಿ, ಟೆಂಡರ್‌ ಪ್ರಕರಣದ ತನಿಖೆ ಎಂದು ಹೇಳುತ್ತಿದೆಯಾ ಎಂಬ ಅನುಮಾನ ಜನಸಾಮಾನ್ಯರಲ್ಲಿ ಸಹಜವಾಗಿ ಬರುತ್ತದೆ.

ಅಕ್ರಮದ ಕಾರಣ ಮುಂದಿರಿಸಿಕೊಂಡು ತನಿಖೆ ನಡೆದಲ್ಲಿ ಅದು ಸ್ವಾಗತಾರ್ಹವೇ. ಆದರೆ ಅದು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಕಾರಣದ ಗುದ್ದಾಟ ಆಗದಿರಲಿ. ಏಕೆಂದರೆ ಮತ್ತೆ ಮುಂದೆ ಬರುವ ಸರಕಾರವೂ ಇದೇ ಹಾದಿ ಹಿಡಿದರೆ ಸಾರ್ವಜನಿಕರಿಗೆ ಯಾವ ಪಕ್ಷ, ನಾಯಕರ ಮೇಲೂ ನಂಬಿಕೆ ಇಲ್ಲದಂತಾಗುತ್ತದೆ. ಅವರ ಕಾಲದಲ್ಲೂ ಆಗಿತ್ತು ಎಂದು ಈಗಿನದ್ದು ಸಮರ್ಥನೆ ಮಾಡಿಕೊಳ್ಳುವುದೇ ಅರ್ಥಹೀನ. ಹಾಗಾದರೆ ಅವರಿಗೂ ನಮಗೂ ವ್ಯತ್ಯಾಸ ಏನೂ ಇಲ್ಲ ಎಂಬ ಸಂದೇಶ ರವಾನಿಸಿದಂತಾಗುತ್ತದೆ.

ರಾಜಕೀಯ ಕೆಸರೆರೆಚಾಟದ ಭರದಲ್ಲಿ ಪರಸ್ಪರ ಆರೋಪ- ಪ್ರತ್ಯಾ ರೋಪ, ತನಿಖೆ, ಬೆದರಿಕೆಯಂತಹ ವಿಚಾರಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಈಗಾಗಲೇ ಈ ಹಿಂದೆ ವಿದ್ಯುತ್‌ ಖರೀದಿ ವಿಚಾರದ ತನಿಖೆಗೆ ಸದನ ಸಮಿತಿ ರಚಿಸಲಾಗಿತ್ತು, ನೈಸ್‌ ಸಂಸ್ಥೆಯ ವಿಚಾರವಾಗಿ ಸದನ ಸಮಿತಿ ರಚಿಸಲಾಗಿತ್ತು. ತಿಂಗಳುಗಟ್ಟಲೆ ಸಮಿತಿಗಳು ಸಭೆ ನಡೆಸಿ ಸ್ಥಳ ಪರಿಶೀಲನೆ ಮಾಡಿ ಕೆಜಿಗಟ್ಟಲೆ ದಾಖಲೆ ಸಮೇತ ಪುಸ್ತಕ ಮುದ್ರಿಸಿ ಸದನದ ಮುಂದಿ ಟ್ಟರೂ ಇದುವರೆಗೂ ಕ್ರಮ ಆಗಿಲ್ಲ. ಇವರಷ್ಟೇ ಅಲ್ಲ ಇಂತಹ ಸಾಕಷ್ಟು ಪ್ರಕರಣಗಳ ತನಿಖೆಗಳೂ ತಾರ್ಕಿಕ ಅಂತ್ಯ ಕಂಡಿಲ್ಲ. ಸದನ ಸಮಿತಿಯ ಖರ್ಚು, ವೆಚ್ಚ, ಭತ್ತೆ, ತನಿಖೆಯ ಅನಂತರ ಪುಸ್ತಕ ಮುದ್ರಣ ಹೊರೆ ಯಾಗಿದ್ದು ಬಿಟ್ಟರೆ ಉಳಿದಂತೆ ಯಾವುದೇ ಪ್ರಯೋಜನವಾಗಿಲ್ಲ.

Advertisement

ಹಾಗೆಂದು ತನಿಖೆ ಮಾಡಬಾರದೆಂಬ ವಾದವಲ್ಲ. ತನಿಖೆ ಸಮಗ್ರ ರೂಪದಲ್ಲಿ ಇರಲಿ, ಕಾಲಮಿತಿಯೊಳಗೆ ಇರಲಿ ಹಾಗೂ ತನಿಖಾ ವರದಿಯನ್ನು ಅನು ಷ್ಠಾನಗೊಳಿಸುವ ಬದ್ಧತೆಯನ್ನು ಸರಕಾರ ಪ್ರದರ್ಶಿಸಲಿ. ಹೀಗಾಗಿ ರಾಜ ಕೀಯ ಕಾರಣ, ದ್ವೇಷಕ್ಕೆ ತನಿಖೆಗೆ ವಹಿಸುವುದು ಬಿಟ್ಟು, ನಿಜಕ್ಕೂ ಭ್ರಷ್ಟಾ ಚಾರ, ಅಕ್ರಮ ಆಗಿದ್ದರೆ ಯಾವೆಲ್ಲ ಇಲಾಖೆಗಳಲ್ಲಿ ನಡೆದಿದೆಯೋ ಆ ಕುರಿತು ನಿಷ್ಪಕ್ಷಪಾತ ತನಿಖೆ ಕಾಲಮಿತಿಯಲ್ಲಿ ನಡೆಸಿ ಕ್ರಮಕೈಗೊಂಡರೆ ಸರಕಾರದ ವಿಶ್ವಾಸಾರ್ಹತೆ ಹೆಚ್ಚುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next