Advertisement

ಮತದಾನ ಜಾಗೃತಿಗೆ ಖಾದಿ ಮೊರೆ

10:15 AM Apr 10, 2019 | Team Udayavani |

ರಾಯಚೂರು: ಜನರಿಗೆ ಕಡ್ಡಾಯ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಲು ನಾನಾ ಕಾರ್ಯಕ್ರಮ ಹಮ್ಮಿಕೊಂಡಿರುವ ಜಿಲ್ಲಾ ಸ್ವೀಪ್‌ ಸಮಿತಿ ಈ ಬಾರಿ ಖಾದಿ ಮೊರೆ ಹೋಗಿದೆ. ಖಾದಿ ಗ್ರಾಮೋದ್ಯೋಗದಿಂದ 5 ಸಾವಿರ ಕೈ ಚೀಲಗಳನ್ನು ಖರೀದಿಸಿ ಅದರ ಮೇಲೆ ಕಡ್ಡಾಯ ಮತದಾನದ ಮಹತ್ವ ಮುದ್ರಿಸಿ ವಿತರಿಸುವ ಯೋಜನೆ ರೂಪಿಸಿದೆ. ಈಗಾಗಲೇ ಚೀಲಗಳನ್ನು ಖರೀದಿಸಿದ್ದು, ಅದರ ಮೇಲೆ ಮತದಾನ ಜಾಗೃತಿ ಸಂದೇಶ ಮುದ್ರಣ ಕಾರ್ಯ ನಡೆದಿದೆ. ಏ.13ರೊಳಗಾಗಿ ಜಿಲ್ಲೆಯ ಎಲ್ಲೆಡೆ ಹಂಚಿಕೆ ಮಾಡುವ ಉದ್ದೇಶವಿದೆ.

Advertisement

ಈ ಚೀಲಗಳನ್ನು ಬಳಸುವುದರಿಂದ ಪ್ಲಾಸ್ಟಿಕ್‌
ಬಳಕೆಗೆ ಕಡಿವಾಣ ಹಾಕಿದಂತಾಗಲಿದೆ. ಈ ಕಾರಣಕ್ಕೆ ಚೀಲದ ಒಂದು ಕಡೆ ಕಡ್ಡಾಯ ಮತದಾನದ ಜಾಗೃತಿ ಮತ್ತೂಂದೆಡೆ
ಪರಿಸರ ಜಾಗೃತಿ ಮೂಡಿಸುವ ಸಂದೇಶ ಮುದ್ರಿಸಲಾಗುತ್ತಿದೆ ಎನ್ನುತ್ತಾರೆ ಅಧಿ ಕಾರಿಗಳು. ಪ್ರತಿ ತಾಲೂಕಿಗೆ ಒಂದು ಸಾವಿರದಂತೆ ಐದು ಸಾವಿರ ಚೀಲಗಳನ್ನು ವಿತರಿಸಲಾಗುತ್ತಿದೆ. ಎಲ್ಲ ತಾಲೂಕುಗಳಲ್ಲಿ ನಡೆಯುವ ಸಂತೆಗಳಲ್ಲಿ ಈ ಚೀಲಗಳನ್ನು
ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈಗ ಎಲ್ಲ
ಕಡೆ ಪ್ಲಾಸ್ಟಿಕ್‌ ನಿಷೇಧದ ಧ್ವನಿ ಹೆಚ್ಚಾಗಿದ್ದು, ಬಟ್ಟೆ, ಪೇಪರ್‌ ಚೀಲಗಳು ಲಗ್ಗೆ ಇಡುತ್ತಿವೆ. ಇಂಥ ಹೊತ್ತಲ್ಲಿ ಈ ಖಾದಿ ಚೀಲಗಳು
ಜನರನ್ನು ಆಕರ್ಷಿಸಲಿದೆ ಎಂಬುದು ಅ ಧಿಕಾರಿಗಳ ವಿವರಣೆ. ಈ ಮೂಲಕ ಜಿಲ್ಲಾ ಸ್ವೀಪ್‌ ಸಮಿತಿ ಖಾದಿ ಗ್ರಾಮದ್ಯೋಗಕ್ಕೆ ಉತ್ತೇಜನ,
ಮತದಾನ ಜಾಗೃತಿ ಹಾಗೂ ಪರಿಸರ ಕಾಳಜಿ ತೋರುವ ಜಾಣ್ಮೆ
ನಡೆ ತೋರಿದೆ.

ರಶೀದಿ ಮೇಲೆ ಸೀಲ್‌!: ಅದರ ಜತೆಗೆ ಈಗಾಗಲೇ ಕಡ್ಡಾಯ ಮತದಾನ ಮಹತ್ವ ಸಾರುವ ಮೊಹರು (ಸೀಲ್‌) ತಯಾರಿಸಿ ಲೀಡ್‌ ಬ್ಯಾಂಕ್‌ ಗಳಿಗೆ, ಪ್ರಮುಖ ಶಾಪಿಂಗ್‌ ಮಾಲ್‌ಗ‌ಳಿಗೆ ಸ್ವೀಪ್‌ ಸಮಿತಿ ವಿತರಿಸಿದೆ. 160ಕ್ಕೂ ಅಧಿಕ ಬ್ಯಾಂಕ್‌ಗಳಿದ್ದು, ಆಯಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರಿಗೆ ಬೇಡಿಕೆಯನುಸಾರ ಮೊಹರುಗಳನ್ನು ಸರಬರಾಜು ಮಾಡಲಾಗಿದೆ. ಸ್ಲಿಪ್‌ಗ್ಳ ಮೇಲೆ ಬ್ಯಾಂಕ್‌ ಸೀಲ್‌ ಜತೆಗೆ ಕಡ್ಡಾಯ ಮತದಾನದ ಮೊಹರು ಕೂಡ ಹಾಕಿ ಗ್ರಾಹಕರಿಗೆ
ನೀಡಲಾಗುತ್ತಿದೆ. ಅದರ ಜತೆಗೆ ಶಾಪಿಂಗ್‌ ಮಾಲ್‌ಗ‌ಳಿಗೂ ಮೊಹರು ನೀಡಲಾಗಿದೆ. ದೊಡ್ಡ ದೊಡ್ಡ ಮಾಲ್‌ಗ‌ಳಲ್ಲಿ ನಿತ್ಯ ನೂರಾರು ಜನ ಆಗಮಿಸುತ್ತಾರೆ. ಅವರಿಗೆ ನೀಡುವ ರಶೀದಿ ಹಿಂಭಾಗವೇ ಸೀಲ್‌
ಹಾಕಿ ನೀಡಲಾಗುತ್ತಿದೆ. ಕೆಲವರಾದರೂ ಈ ಸಂದೇಶ ಓದುವ ಸಾಧ್ಯತೆಗಳಿದ್ದು, ಪರಿವರ್ತನೆ ಹೊಂದುವ ಸಾಧ್ಯತೆ ಇದೆ ಎನ್ನುವುದು ಸ್ವೀಪ್‌ ಸಮಿತಿ ಅಧಿಕಾರಿಗಳ ಅಭಿಪ್ರಾಯ.

ಈ ಬಾರಿ ಮತದಾನ ಜಾಗೃತಿಗೆ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೊಸ ಪ್ರಯೋಗಗಳನ್ನು ಮಾಡಲಾಗಿದೆ. ಖಾದಿ ಚೀಲಗಳನ್ನು ಖರೀದಿಸಿ ಅದರ ಮೇಲೆ ಮತದಾನ ಮಹತ್ವ ಸಾರುವ ಉದ್ದೇಶ ಹೊಂದಿದ್ದೇವೆ. ಶೀಘ್ರದಲ್ಲೇ ಅದು ಜಾರಿಗೆ ಬರಲಿದೆ. ಪರಿಸರ ರಕ್ಷಣೆ, ಮತದಾನ ಜಾಗೃತಿ ಮತ್ತು ಖಾದಿಗೆ ಉತ್ತೇಜನ ನೀಡುವ ಉದ್ದೇಶವಿದು. ಅದರ ಜತೆಗೆ ಜಿಲ್ಲೆಯ ಎಲ್ಲ ಬ್ಯಾಂಕ್‌, ಕೆಲ ಶಾಪಿಂಗ್‌ ಮಾಲ್‌ ಗಳಿಗೆ ಕಡ್ಡಾಯ ಮತದಾನ ಜಾಗೃತಿ ಸಾರುವ ಮೊಹರು ವಿತರಿಸಲಾಗಿದೆ. ಮತದಾನ ಪ್ರಮಾಣ
ಹೆಚ್ಚಿಸಬೇಕು ಎನ್ನುವುದಷ್ಟೇ ನಮ್ಮ ಉದ್ದೇಶ.
.ಜಯಲಕ್ಷ್ಮೀ ,
ಸಹಾಯಕ ಕಾರ್ಯದರ್ಶಿ,
ಜಿಪಂ ರಾಯಚೂರು

„ಸಿದ್ಧಯ್ಯಸ್ವಾಮಿ ಕುಕನೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next