ಬೆಂಗಳೂರು: “ಜೈಲುಗಳಲ್ಲಿ ಕೆಲಸ ಮಾಡುವ ಕೈದಿಗಳಿಗೆ ನೀಡುವ ಕನಿಷ್ಟ ಕೂಲಿ ಹೆಚ್ಚಿಸುವ ಬಗ್ಗೆ ಕಾರಾಗೃಹ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುವುದು” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
68ನೇ ಗಣರಾಜೋತ್ಸವ ಪ್ರಯುಕ್ತ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಸನ್ನಡತೆ ಜೀವಾವ ಬಂಗಳ ಅವಪೂರ್ವ ಬಿಡುಗಡೆ ಹಾಗೂ ರೂಪಾಂತರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, “ಕಾರಗೃಹದಲ್ಲಿ ಕೈದಿಗಳು ವಿವಿಧ ರೀತಿಯ ಕೌಶಲ್ಯ ಅಭಿವೃದ್ ಕಾಯಕದಲ್ಲಿ ತೊಡಗಿದ್ದಾರೆ. ಇದಕ್ಕೆ ದಿನಗೂಲಿ ನೀಡಲಾಗುತ್ತಿದೆ. ಕೈದಿಗಳ ದಿನಗೂಲಿ ಹೆಚ್ಚಳಕ್ಕೆ ಸಂಬಂಸಿದಂತೆ ಕಾರಗೃಹ ಇಲಾಖೆ ಪ್ರಸ್ತಾವನೆ ಸಲ್ಲಿಸಿದರೆ ವೇತನ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.
“ಕಾರಗೃಹ ಎಂಬುದು ಬಂಧೀಖಾನೆ ಅಥವಾ ಸೆರೆಮನೆಯಲ್ಲ. ಬದಲಿಗೆ ಮಾನಸಿಕವಾಗಿ, ಶಾರೀರಿಕವಾಗಿ, ಭೌದ್ಕವಾಗಿ ಬದಲಾವಣೆ ತರುವ ಸ್ಥಳ. ತಪ್ಪು ಮಾಡಿ ಜೈಲಿಗೆ ಬಂದವರಿಗೆ ಅವರ ಮನಃ ಪರಿವರ್ತನೆಯಾಗಲು ಇಲ್ಲಿ ಅವಕಾಶ ಇದೆ. ಸಮಾಜದಲ್ಲಿ ತಪ್ಪು ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಜೈಲುಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಬೇಸರದ ಸಂಗತಿ.
ಜೈಲುಗಳಲ್ಲಿ ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಆತಂಕಕಾರಿ,” ಎಂದು ಕಳವಳ ವ್ಯಕ್ತಪಡಿಸಿದರು. ರಾಜ್ಯದ ವಿವಿಧ ಜೈಲುಗಳಿಂದ 170 ಖೈದಿಗಳ ಬಿಡುಗಡೆಗೆ ಸರ್ಕಾರ ತೀರ್ಮಾನಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಈ ಪೈಕಿ 144 ಕೈದಿಗಳ ಬಿಡುಗಡೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ರಾಜ್ಯ ಕಾರಾಗೃಹ ಇಲಾಖೆಗಳ ಡಿಜಿಪಿ ಎಚ್.ಎಸ್. ಸತ್ಯನಾರಾಯಣರಾವ್ ಮಾತನಾಡಿ, ಕಾನೂನು ಸಲಹೆಗಾರರ ಸಲಹೆ ಪಡೆದು, ಕೂಲಂಕುಶವಾಗಿ ಪರಿಶೀಲಿಸಿ ನಂತರ ಕೈದಿಗಳನ್ನು ಬಿಡು ಗಡೆ ಮಾಡಲಾಗಿದೆ. ಅರ್ಹರನ್ನೇ ಆಯ್ಕೆ ಮಾಡಿದ್ದು, ಸಾಕಷ್ಟು ಮಂದಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ರೂಪಾಂತರ ಕಾರ್ಯಕ್ರಮ ತರಬೇತಿ ಪಡೆದದವರ 231 ಕೈದಿಗಳ ಪೈಕಿ ಒಟ್ಟು 144 ಕೈದಿಗಳು ಬಿಡುಗಡೆಯಾಗಿದ್ದಾರೆಂದರು.
ಜೈಲಲ್ಲಿ ಜತೆಗಿತ್ತು ಬೆಕ್ಕು!
ಪತ್ನಿ ಕೊಲೆ ಪ್ರಕರಣದಲ್ಲಿ 14 ವರ್ಷ ಶಿಕ್ಷೆ ಅನುಭವಿಸಿದ್ದೇನೆ. ಸೆರೆಮನೆಯಲ್ಲಿದ್ದಷ್ಟು ವರ್ಷ ನನ್ನ, ಅಣ್ಣ, ತಮ್ಮ, ಸಂಬಂಕರು ಯಾರೂ ನನ್ನನ್ನು ನೋಡಲು ಬರಲಿಲ್ಲ. ಒಂಟಿಯಾಗಿದ್ದ ನನ್ನ ಜತೆ ಬೆಕ್ಕು ಇತ್ತು. ಅದರೊಂದಿಗೆ ಜೈಲಿನಿಂದ ಹೊರಗೆ ಬರುತ್ತಿದ್ದೇನೆ ಎಂದು ರವಿ ಎಂಬ ಖೈದಿ ತಮ್ಮ ಭಾವುಕರಾಗಿ ನುಡಿದರು.