ಹಾವೇರಿ: ಕೊರೊನಾ ಎರಡನೇ ಅಲೆಯ ತೀವ್ರತೆಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು,ಸೋಂಕಿನ ಪ್ರಮಾಣ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆಅಷ್ಟಾಗಿ ಕಂಡು ಬಾರದಿದ್ದರೂ ಸಾವಿನ ಪ್ರಮಾಣತೀವ್ರಗತಿಯಲ್ಲಿ ಹೆಚ್ಚುತ್ತಿರುವುದು ಜನರಲ್ಲಿ ತಳಮಳಶುರುವಾಗಿದೆ.
ಕೇವಲ 12 ದಿನದಲ್ಲಿ ಮೂರು ಸಾವಿರಕ್ಕೂ ಹೆಚ್ಚುಪ್ರಕರಣಗಳು ಪತ್ತೆಯಾಗಿದ್ದರೆ, ಬರೋಬ್ಬರಿ 74 ಜನಕೊರೊನಾಕ್ಕೆ ಬಲಿಯಾಗಿರುವುದು ಜನರಲ್ಲಿ ಆತಂಕಸೃಷ್ಟಿಸಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಕೊರೊನಾನಿಯಂತ್ರಣದಲ್ಲಿತ್ತು. ಲಾಕ್‌ಡೌನ್ ಸಡಿಲಿಕೆಯಾದಬಳಿಕ ಕಾಣಿಸಿಕೊಂಡಿದ್ದ ಸೋಂಕು ಇಷ್ಟೊಂದುತೀವ್ರವಾಗಿ ಹರಡಿರಲಿಲ್ಲ.
ಆದರೆ, ಎರಡನೇಅಲೆ ತೀವ್ರವಾಗಿ ಹರಡುತ್ತಿದ್ದು, ಜನರಲ್ಲಿ ಭೀತಿಹುಟ್ಟಿಸಿದೆ.1832 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಮೇ1ರಿಂದ 12ರವರೆಗೆ ಬರೋಬ್ಬರಿ 3,089ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. 1728ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದಬಿಡುಗಡೆಯಾದರೆ,74 ಜನ ಬಲಿಯಾಗಿದ್ದಾರೆ.
ಸದ್ಯ 1832 ಸಕ್ರಿಯ ಸೋಂಕಿತರಿದ್ದಾರೆ. 1027ಸೋಂಕಿತರು ಹೋಂ ಐಸೋಲೇಷನ್‌ನಲ್ಲಿದ್ದಾರೆ.805 ಸೋಂಕಿತರು ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆ,ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಕೊರೊನಾ ಎರಡನೇ ಅಲೆಆರಂಭವಾದಾಗ ಏ. 23ರಂದು 74 ಪ್ರಕರಣಗಳುಪತ್ತೆಯಾಗಿದ್ದವು. ಅಲ್ಲಿಂದ ನಿತ್ಯವೂ ನೂರರಆಸುಪಾಸಿನಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ.ಸಾವಿನ ಪ್ರಮಾಣ ಶೇ.1.9: ಜಿಲ್ಲೆಯಲ್ಲಿ ಕಳೆದಒಂದು ವಾರದಿಂದ ಕೊರೊನಾ ಸೋಂಕಿನಿಂದಮೃತಪಟ್ಟವರ ಸಂಖ್ಯೆ ಹೆಚ್ಚುತ್ತಿದೆ.
ಸದ್ಯ ಜಿಲ್ಲೆಯಲ್ಲಿಪಾಸಿಟಿವಿಟಿ ದರ ಶೇ.16.8ರಷ್ಟಿದ್ದು, ಸಾವಿನಪ್ರಮಾಣ ಶೇ.1.9ರಷ್ಟಿದೆ. ಇತರೆ ಜಿಲ್ಲೆಗಳಿಗೆಹೋಲಿಸಿದರೆ ಪಾಸಿಟಿವ್ ಪ್ರಕರಣಗಳ ಸಂಖ್ಯೆಕಡಿಮೆ ಇದ್ದು, ಪಾಸಿಟಿವಿಟಿ ದರದಲ್ಲಿ ಜಿಲ್ಲೆ 25ನೇಸ್ಥಾನದಲ್ಲಿದ್ದರೆ, ಸಾವಿನ ದರದಲ್ಲಿ 2ನೇ ಸ್ಥಾನದಲ್ಲಿದೆ.ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದ್ದ ಹಿನ್ನೆಲೆನಿತ್ಯ 7-8 ಜನರು ಮೃತಪಟ್ಟರೂ ಸಾವಿನ ದರದಲ್ಲಿಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಅಗ್ರಸ್ಥಾನದಲ್ಲಿಕಂಡು ಬರುತ್ತಿದೆ ಎಂದು ಆರೋಗ್ಯ ಇಲಾಖೆಅ ಧಿಕಾರಿಗಳು ಹೇಳುತ್ತಿದ್ದಾರೆ.
ವೀರೇಶ ಮಡ್ಲೂರ