Advertisement

ಆರೋಗ್ಯ ವೃದ್ಧಿಗಿರುವ ಪ್ರಮುಖ ಯೋಗ ಮುದ್ರೆ

10:31 PM Jan 27, 2020 | Sriram |

ಯೋಗ ಮುದ್ರಾಗಳಿಂದಲೂ ಆರೋಗ್ಯ ವೃದ್ಧಿಸಲಿದ್ದು, ಪ್ರತಿಯೊಂದು ಯೋಗ ಮುದ್ರೆಗೂ ವಿಶೇಷ ಪ್ರಾಮುಖ್ಯ ಇದೆ. ಈ ಹಿನ್ನೆಲೆ ಪ್ರಮುಖ ಯೋಗ ಮುದ್ರೆಗಳು ಮತ್ತು ಅದರಿಂದ ದೇಹಕ್ಕಾಗುವ ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ನೀಡಲಾಗಿವೆ. ಇಂತಹ ಹಲವು ಮುದ್ರಾಗಳು ಮತ್ತು ಅವುಗಳ ಲಾಭವನ್ನು ಅರಿತುಕೊಳ್ಳುವ ಅಂಕಣ ಇದು.

Advertisement

ಪ್ರಾಣ ಮುದ್ರೆ
ಈ ಮುದ್ರಾವು ಜೀವನಕ್ಕೆ ಸಂಬಂಧಿಸಿದ್ದು, ದಿನದ ಯಾವುದೇ ಸಮಯದಲ್ಲೂ ಮಾಡಬಹುದು. ಈ ಯೋಗ ಮುದ್ರಾವು ರೋಗನಿರೋಧಕ ಶಕ್ತಿಯನ್ನು ಸುಧಾರಿಸಿ, ದೃಷ್ಠಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಆಯಾಸವನ್ನು ಹೋಗಲಾಡಿಸಿ ಹೆಚ್ಚು ಉಲ್ಲಾಸದಿಂದ ಇರಲು ನೆರವಾಗುತ್ತದೆ.

ಲಿಂಗ ಮುದ್ರೆ
ಈ ಮುದ್ರೆಯು ಪುರುಷನ ಜನನಾಂಗದ ಸಂಕೇತವಾಗಿದೆ ಮತ್ತು ಇದರಿಂದಾಗಿ ಇದು ದೇಹದಲ್ಲಿ ಉಷ್ಣವನ್ನು ಉಂಟುಮಾಡುತ್ತದೆ. ಇದು ಕಾಮಾಸಕ್ತಿಯನ್ನು ಉತ್ತೇಜಿಸುವುದು ಮಾತ್ರವಲ್ಲದೆ ಶೀತಕ್ಕೆ ಸಂಬಂಧಪಟ್ಟ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ.

ಅಪಾನ ಮುದ್ರೆ
ಇದು ಬಹುಉಪಯೋಗಿ ಮುದ್ರಾವಾಗಿದ್ದು, ಪ್ರತಿಯೊಬ್ಬರಿಗೂ ನೆರವಾಗುತ್ತದೆ. ಅಪಾನ ಮುದ್ರವು ವಿಷಕಾರಿ ನೀರಿನಿಂದ ನಿಮ್ಮ ದೇಹವನ್ನು ಶುಚಿಗೊಳಿಸುತ್ತದೆ. ಮೂತ್ರದ ಸಮಸ್ಯೆ ನಿವಾರಿಸಲು ಮತ್ತು ಕರುಳಿನ ಚಲನೆಗಳನ್ನು ನಿಯಮಿತವಾಗಿಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next