Advertisement

IAF ಕಾರ್ಗಿಲ್‌ನಲ್ಲಿ ರಾತ್ರಿ ವೇಳೆ ಯಶಸ್ವಿಯಾಗಿ ಲ್ಯಾಂಡಿಂಗ್‌ ಆದ IAF ನ ಸರಕು ವಿಮಾನ

11:23 PM Jan 07, 2024 | Team Udayavani |

ನವದೆಹಲಿ: ಪಾಕಿಸ್ತಾನದೊಂದಿಗಿನ ನಿಯಂತ್ರಣ ರೇಖೆ(ಎಲ್‌ಒಸಿ) ಸಮೀಪ ಅತಿ ಎತ್ತರದ ಕಾರ್ಗಿಲ್‌ನ ಇಳಿದಾಣದಲ್ಲಿ ಇದೇ ಮೊದಲ ಬಾರಿಗೆ ರಾತ್ರಿ ವೇಳೆ ಭಾರತೀಯ ವಾಯು ಪಡೆಗೆ(ಐಎಎಫ್) ಸೇರಿದ ಸಿ-130ಜೆ ಸೂಪರ್‌ ಹರ್ಕ್ನೂಲಸ್‌ ಸಾರಿಗೆ ವಿಮಾನವು ಯಶಸ್ವಿಯಾಗಿ ಲ್ಯಾಂಡಿಂಗ್‌ ಮಾಡಿತು.

Advertisement

ಸಮುದ್ರದಿಂದ ಸುಮಾರು 10,500 ಅಡಿ ಎತ್ತರದಲ್ಲಿ ಕಾರ್ಗಿಲ್‌ ಇಳಿದಾಣವಿದೆ.

“ಅತಿ ಎತ್ತರದ ಕಾರ್ಗಿಲ್‌ನ ಇಳಿದಾಣದಲ್ಲಿ ಎಲೈಟ್‌ ಗರುಡ ಕಮಾಂಡೊಗಳು ಇದ್ದ ಸಿ-130ಜೆ ಸೂಪರ್‌ ಹರ್ಕ್ನೂಲಸ್‌ ಸಾರಿಗೆ ವಿಮಾನವು ಪರಿಕ್ಷಾರ್ಥವಾಗಿ ರಾತ್ರಿ ಹೊತ್ತು ಯಶಸ್ವಿಯಾಗಿ ಲ್ಯಾಂಡ್‌ ಆಯಿತು. ಇದು ಆಯಕಟ್ಟಿನ ನಿರ್ಣಾಯಕ ವಲಯದಲ್ಲಿ ಐಎಎಫ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ತೋರಿಸಿದೆ’ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯ ಅಗತ್ಯತೆಗಳಿಗೆ ತಕ್ಕಂತೆ ಸುಧಾರಿತ ಲ್ಯಾಂಡಿಂಗ್‌ ಗ್ರೌಂಡ್ಸ್‌ (ಎಎಲ್‌ಜಿ) ಸೇರಿದಂತೆ ವಾಸ್ತವಿಕ ನಿಯಂತ್ರಣ ರೇಖೆಯ(ಎಲ್‌ಎಸಿ) ಉದ್ದಕ್ಕೂ ಬಹುತೇಕ ಎಲ್ಲಾ ವಾಯುನೆಲೆಗಳಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸುವತ್ತ ರಕ್ಷಣಾ ಸಚಿವಾಲಯ ಗಮನಹರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next