Advertisement

ಪ್ರತಿನಿತ್ಯ ಒಂದು ಗಂಟೆ ದೇಶಸೇವೆಗೆ ಮೀಸಲಿಡಿ

02:27 PM Feb 13, 2017 | Team Udayavani |

ಧಾರವಾಡ: ನಮ್ಮ ಹಿಂದು ಸಮಾಜ ಅನೇಕ ಜಾತಿಗಳ ಆಗಾರ. ಇಂಥ ಸಮಾಜವನ್ನು ಜಾತಿಗಳ ಆಧಾರದಿಂದ ಒಡೆಯುವುದು ತಕ್ಷಣ ನಿಲ್ಲಬೇಕು ಎಂದು ಉತ್ತರ ಪ್ರಾಂತ ಸಹಪ್ರಚಾರಕ ಸುಧಾಕರ ಹೇಳಿದರು. 

Advertisement

ನಗರದ ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯದಲ್ಲಿ ರವಿವಾರ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹಾಸಾಂಘಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಜಾತಿಗಳೇ ಹಿಂದುತ್ವಕ್ಕೆ ತೊಡಕಾಗಿವೆ. ಎಲ್ಲರೂ ಸಹೋದರಂತೆ ಬಾಳಬೇಕು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೊದಲು ಅಭಿವ್ಯಕ್ತಿ ಗುಣ ಅಳವಡಿಸಿಕೊಂಡು ಒಡೆದಾಳುವ ನೀತಿಯ ವಿರುದ್ಧ ಕಿಡಿ ಕಾರಬೇಕು ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಪ್ರತಿನಿತ್ಯ ಒಂದು ಘಂಟೆ ಅವಧಿಧಿ ದೇಶಸೇವೆಗೆ ಮುಡುಪಾಗಿ ಇಡಬೇಕು. 

ಭಾರತ ಪುನಃ ವಿಶ್ವ ಗುರು ಆಗಲು ಸಮೃದ್ಧ ಭಾರತ ನಿರ್ಮಾಣದ ಅಗತ್ಯವಿದೆ. ಇಂಥ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಸಂಘದ ಕಾರ್ಯಕರ್ತರ ಮೇಲಿದೆ ಎಂದರು. ಮಕ್ಕಳಿಗೆ ಉತ್ತಮ ಸದ್ಗುಣ ತಿಳಿಸಿಕೊಡಬೇಕು. ದೇಶದೊಳಗೆ ಮಾದಕ ವಸ್ತುಗಳ ಸಾಗಾಣಿಕೆ ಮೂಲಕ ಭಾರತ ಶಕ್ತಿ ಕುಂದಿಸುವ ಹುನ್ನಾರು ನಡೆಯುತ್ತಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಸಂಸ್ಕಾರ ಈ ಕುಲಗೆಟ್ಟ ಸಮಾಜಕ್ಕೆ ಸಿಗಬೇಕಿದೆ. ದೈವತ್ವ, ಧರ್ಮ, ಧಾರ್ಮಿಕತೆ, ಎಲ್ಲರಲ್ಲಿ ಹಿಂದುತ್ವ ಬಿತ್ತುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು. ಗಡಿಗಳಲ್ಲಿ ಅಕ್ರಮ ಚಟುವಟಿಕೆ ಸದ್ದಿಲ್ಲದೆ ನಡೆಯುತ್ತಿವೆ.

Advertisement

ಬಾಂಗ್ಲಾದ ನುಸುಳುಕೋರರ ದೇಶದೊಳಗೆ ನುಗ್ಗಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿ ಮಾಧಕ ವಸ್ತುಗಳ ಸಾಗಾಣಿಕೆ, ಯುವಶಕ್ತಿ ದುರ್ಬಲಗೊಳಿಸುವ ದುಷ್ಕೃತ್ಯ ಅಡಗಿದೆ. ಹೀಗಾಗಿ ಸರ್ಕಾರದ ಜತೆಗೆ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಸಹ ದೇಶದ ರಕ್ಷಣೆಗೆ ಮುಂದಾಗಬೇಕು ಎಂದರು. 

ಭಾರತವನ್ನು ಪುನಃ ಪರಮ ವೈಭವಕ್ಕೆ ಒಯ್ಯಬೇಕಿದೆ. ಭಾರತ ಜಗತ್ತಿಗೆ ಮತ್ತೂಮ್ಮೆ ವಿಶ್ವಗುರು ಆಗುವಂತ ಕಾಲ ಬಂದೊಂದಿಗೆ. ಹೀಗಾಗಿ ಎಲ್ಲರೂ ಒಗ್ಗೂಡಿಕೊಂಡು ಕೆಲಸ ಮಾಡಬೇಕು. ಸಂಸ್ಕೃತಿ- ಸಂಸ್ಕಾರ, ಯೋಗ, ಶಿಕ್ಷಣ, ಜೀವನ ಮೌಲ್ಯಗಳು, ಸದ್ಗುಣಗಳು, ಆದರ್ಶ ವ್ಯಕ್ತಿತ್ವ ಇತ್ಯಾದಿಗಳ ಮೂಲಕ ಸಮೃದ್ಧ ಭಾರತದ ನಿರ್ಮಿಸಬೇಕು ಎಂದರು. 

ಉತ್ತರ ಪ್ರಾಂತ ಸಹಕಾರ್ಯವಾಹ ಶ್ರೀಧರ ನಾಡಿಗೇರ ಸೇರಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರಾರು ಕಾರ್ಯಕರ್ತರು ಹಾಗೂ ಮಕ್ಕಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next