Advertisement
ಆನೇಕಲ್ ತಾಲೂಕಿನ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 50 ವಯಲ್ ಕೋವಿಶೀಲ್ಡ್ ವ್ಯಾಕ್ಸಿನ್ ಕೇವಲ ಏಳು ನಿಮಿಷಕ್ಕೆ ಆಗಸದಲ್ಲಿ ಕೊಂಡೊ ಮೂಲಕ ಹೊಸ ಪ್ರಯೋಗಕ್ಕೆ ಯಶಸ್ಸು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ತುರ್ತು ಸಮಯದಲ್ಲಿ ಡ್ರೋನ್ ಮೂಲಕ ಔಷಧಗಳನ್ನು ಸಾಗಿಸಬಹುದಾಗಿದೆ. ಬೆಳಗ್ಗೆ 9.15 ನಿಮಿಷಕ್ಕೆ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 5.4 ಕೆ.ಜಿ. ತೂಕವಿರುವ ವ್ಯಾಕ್ಸಿನ್ ಬಾಕ್ಸ್‌ನ್ನು ಹಾರಗದ್ದೆ ಪ್ರಾಥಮಿಕ ಆರೋಗ್ಯಕ್ಕೆ ಕೊಂಡೊಯ್ದಿದೆ.
Related Articles
Advertisement
ಚರ್ಚಿಸಿ ಕ್ರಮ ಕೈಗೊಳ್ಳಲಿದ್ದಾರೆ: ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಪ್ರಾಯೋಗಿಕವಾಗಿ ಡ್ರೋನ್ ಮೂಲಕ ವ್ಯಾಕ್ಸಿನ್ ಸರಬರಾಜು ಮಾಡುವ ಮೂಲಕ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ ಅಧಿಕಾರಿಗಳು ಉತ್ತಮವಾದ ಕಾರ್ಯ ಮಾಡಿದ್ದಾರೆ. ಇದು ಯಾವುದೇ ಹೆಚ್ಚುವರಿ ಖರ್ಚು ಇಲ್ಲದೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಇದು ಪ್ರಾಯೋಗಿಕವಾಗಿ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಚರ್ಚಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಆನೇಕಲ್ ತಾಲೂಕು ಆರೋಗ್ಯ ಅಧಿಕಾರಿ ವಿನಯ್, ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ ನೀತು ಮತ್ತಿತರರು ಇದ್ದರು.
15 ಕೆ.ಜಿ. ಭಾರ ಹೊರುವ ಸಾಮರ್ಥ್ಯ
ಇದು ಪ್ರಾಯೋಗಿಕವಾಗಿ ನಡೆಸಿರುವ ಹಾರಾಟ. 15 ಕೆ.ಜಿ. ಭಾರ ಹೊರುವ ಸಾಮರ್ಥ್ಯ ಇರುವ ಡ್ರೋನ್ ಇದಾಗಿದ್ದು, ಕೇವಲ ಏಳು ನಿಮಿಷದಲ್ಲಿ ಚಂದಾಪುರದಿಂದ ಹಾರಗದ್ದೆವರೆಗೆ ಹಾರಾಟ ನಡೆಸಿದೆ. 14 ನಿಮಿಷಗಳಲ್ಲಿ ಚಂದಾಪುರದಿಂದ ಹಾರಗದ್ದೆಗೆ ಹೋಗಿ ಮತ್ತೆ ಬಂದಿರುವುದು ಸಂತಸ ತಂದಿದ್ದು, ಮುಂದಿನ ದಿನಗಳಲ್ಲಿ ಇದನ್ನು ಯಾವ ರೀತಿ ಬಳಸಬೇಕು ಎನ್ನುವ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ ಅಧಿಕಾರಿ ವೆಂಕಟೇಶ್ ಹೇಳಿದರು.