Advertisement
ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ಆತಿಶಾ ಅವರು ಏರ್ ಇಂಡಿಯಾದಿಂದ ಉದ್ಯೋಗದ ಪ್ರಸ್ತಾಪವನ್ನು ಪಡೆದರಾದರೂ, ಅದನ್ನು ಬಿಟ್ಟು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಆದ್ಯತೆ ನೀಡಿದರು.
Related Articles
Advertisement
ಸೋಮವಾರ ತುಮಕೂರಿನ ಪೋಚಕಟ್ಟೆಯಿಂದ ಆರಂಭವಾದ ಪಾದಯಾತ್ರೆ ಚಿತ್ರದುರ್ಗದ ಹಿರಿಯೂರಿನ ಹರ್ತಿಕೋಟೆಯವರೆಗೆ ನಡೆಯಿತು. ರಾಹುಲ್ ಅವರು ಮಳೆಯನ್ನೂ ಲೆಕ್ಕಿಸದೆ ಭಾಗಿಯಾದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಧ್ವಜ ಹಿಡಿದು ರಾಹುಲ್ ಅವರೊಂದಿಗೆ ಓಡಿ ಗಮನ ಸೆಳೆದರು.
ರಾಹುಲ್ ಅವರನ್ನು ಲಂಬಾಣಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ಮಾದರಿಯಲ್ಲಿ ಸ್ವಾಗತಿಸಿದರು. ಹಿರಿಯೂರಿನಲ್ಲಿ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ದಕ್ಕಲಿಗರು, ಸುಡುಗಾಡು ಸಿದ್ದರು, ದೊಂಬಿದಾಸರು,ಕೊರಮರು, ಹಂದಿಜೋಗಿ ಮುಂತಾದ ಸಮುದಾಯಗಳ ಪ್ರಮುಖರೊಂದಿಗೆ ಸಂವಾದ ನಡೆಸಿದರು.
ಪಠ್ಯ ಪುಸ್ತಕ ಪರಿಷ್ಕರಣೆ ಎಂಬ ಅವಾಂತರದ ವಿರುದ್ಧ ಶಿಕ್ಷಣ ಸಚಿವರ ಮನೆ ಎದುರು ಪ್ರತಿಭಟಿಸಿ ಬಂಧನಕ್ಕೊಳಗಾಗಿದ್ದ ಏನ್ ಯಸ್ ಯುಐ ಕಾರ್ಯಕರ್ತರ ತಂಡ ಭೇಟಿ ಮಾಡಿ ಮಾತುಕತೆ ನಡೆಸಿದರು.ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ಭೇಟಿಯಾಗಿ ಆರೋಗ್ಯ ಕ್ಷೇತ್ರ ಹಾಗೂ ಹೆಚ್ಚಿನ ಫಲಾನುಭವಿಗಳಿಗೆ ಅನುಕೂಲವಾಗುವ ಸಾರ್ವಜನಿಕ ಯೋಜನೆಗಳ ಕುರಿತು ಚರ್ಚೆ ನಡೆಸಿದರು.