Advertisement

ವೈಫ‌ಲ್ಯವನ್ನು ನಿಭಾಯಿಸಲು ಸುಲಭ ಸೂತ್ರ

12:27 PM Jun 03, 2020 | sudhir |

ವೈಫ‌ಲ್ಯವು ನಿಮಗೆ ಯಶಸ್ಸಿನ ಬಗ್ಗೆ ಸರಿಯಾದ ದೃಷ್ಟಿಕೋನವನ್ನು ನೀಡುವುದಲ್ಲದೆ, ನಾವೇನು ಕೆಲಸ ಮಾಡಬೇಕು ಮತ್ತು ಮಾಡಬಾರದು ಎಂಬುವುದನ್ನು ಕಲಿಸುವ ಪಾಠಗಳಾಗಿವೆ.ಜೀವನದಲ್ಲಿ ಎಲ್ಲ ನಕಾರಾತ್ಮಕ ವಿಷಯಗಳಂತೆ ವೈಫ‌ಲ್ಯವೂ ಕೂಡ ಶಾಶ್ವತವಲ್ಲ. ಇಲ್ಲಿದೆ ನಿಮ್ಮ ವೈಫ‌ಲ್ಯತೆಯನ್ನು ದೂರಗೊಳಿಸುವ ಮಾರ್ಗಗಳು:

Advertisement

ನೀವು ಏನು ಭಾವಿಸುತ್ತೀರಿ ಎಂಬುವುದನ್ನು ಮೊದಲಿಗೆ ಅರ್ಥಮಾಡಿಕೊಳ್ಳಿ,
ನಾವು ಏನಾದರು ಎದುರು ನೋಡುತ್ತಿರುವಾಗ ಮತ್ತು ಅದು ಸಂಭವಿಸದಿದ್ದಾಗ ಆ ವಿಷಯ ನಮ್ಮನ್ನು ಅಸಮಾಧಾನಗೊಳಿಸುತ್ತದೆ. ಆದ್ದರಿಂದ ನಾವು ಮಾಡಬೇಕಾದದ್ದನ್ನು ಅರ್ಥಮಾಡಿಕೊಳ್ಳುವುದು ಉತ್ತಮ. ಆತಂಕ ಕೋಪ, ಭಯ ಇದೀಗ ನೀವು ಅನುಭವಿಸುತ್ತಿರುವ ಆಲೋಚನೆಗಳನ್ನು ಗಮನಿಸಿ ಬರೆದಿಟ್ಟುಕೊಳ್ಳಿ ಇದರಿಂದ ನೀವು ಸಕಾರಾತ್ಮಕ ರೀತಿಯಲ್ಲಿ ವ್ಯವಹರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.

ನಿಮ್ಮ ಆಲೋಚನೆಗಳನ್ನು ಮತ್ತೇ ಯೋಚಿಸಿ, ರಚನಾತ್ಮಕವಾಗಿರಿ
ನಾವು ನಕಾರಾತ್ಮಕ ಭಾವನೆಗಳನ್ನು ಅನುಭವಿಸುತ್ತಿರುವಾಗ ನಮ್ಮನ್ನು ಕಠಿಣ ಬೆಳಕಿನಲ್ಲಿ ನೋಡುತ್ತೇವೆ. ಆದರೆ ಒಮ್ಮೆ ನಾವು ಶಾಂತ ಮತ್ತು ವಿಶ್ರಾಂತಿ ಪಡೆದರೆ ಬಂದೊದಗಿರುವ ಸಂದಿಗ್ಧ ಪರಿಸ್ಥಿತಿಯನ್ನು ವಸ್ತುನಿಷ್ಟವಾಗಿ ಪ್ರವೇಶಿಸಬಹುದು.

ನಿಮ್ಮ ವೈಫ‌ಲ್ಯದೊಂದಿಗೆ ಸಕ್ರಿಯರಾಗಿ
ನಿವು ಮಾಡಬೇಕೆಂದಿದ್ದ ಕಾರ್ಯ ಕೈಗೂಡದೇ ಇದ್ದ ಸಮಯದಲ್ಲಿ ನಿಮ್ಮನ್ನು ನೀವು ದೂಷಿಷದೆ ಅಥವಾ ನಿರಾಶೆಗೊಳ್ಳದೆ. ನಿಮ್ಮ ವೈಫ‌ಲ್ಯಕ್ಕೆ ಕಾರಣವೇನು ಎಂಬುದನ್ನು ಅವಲೋಕಿಸಿ, ಅರ್ಥಮಾಡಿಕೊಂಡ ಬಳಿಕ ಏನು ಮಾಡಬೇಕೆಂದು ತಿಳಿದುಕೊಳ್ಳಿ. ನಿಮ್ಮ ಸಹೋದ್ಯೋಗಿ ಮಿತ್ರರು, ಸ್ನೇಹಿತರಿಂದ ಮುಂದಿನ ಮಾರ್ಗವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಮತ್ತು ಸಹಾಯ ಪಡೆಯಿರಿ.

ಸಕಾರಾತ್ಮಕ ಜನರೊಂದಿಗೆ ಬೆರೆತುಕೊಳ್ಳಿ
ನೀವು ನಕಾರಾತ್ಮಕ ಭಾವನೆಯನ್ನು ಹೊಂದುವಾಗ ಸಕಾರಾತ್ಮಕ ಪ್ರತಿಕ್ರಿಯೆ ನೀಡುವವರು ಜತೆಯಲ್ಲಿದ್ದರೆ ಉತ್ತಮ. ಇದರಿಂದ ನಿಮ್ಮ ತೊಂದರೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

Advertisement

ಧನಾತ್ಮಕ ಪ್ರಚೋದನೆ
ವೈಫ‌ಲ್ಯದಿಂದ ನಾವು ಕಲಿಯಬೇಕಾದ ವಿಷಯವೆಂದರೆ ಅದನ್ನು ನಾವು ಹೇಗೆ ಎದುರಿಸುವುದೆಂದು, ಮುಂಬರುವ ಎಲ್ಲ ಸಂಕಷ್ಟಗಳನ್ನು ಎದುರಿಸಲು ನಾನು ಸಿದ್ದರಾಗಿದ್ದೇವೆ ಎಂದು ಖಚಿತಪಡಿಸಿಕೊಳ್ಳಬೇಕು. ಉತ್ತಮ ಪುಸ್ತಕ ದೈಹಿಕ ಚಟುವಟಿಕೆಯಿಂದ ನಿಮ್ಮ ಮನಸ್ಸು ಬೇರೆಡೆಗೆ ತಿರುಗುತ್ತದೆ ಮತ್ತು ನಿಮ್ಮ ಯೋಚನೆಯಲ್ಲಿ ಸಕಾರಾತ್ಮಕ ಭಾವನೆಯೂ ಮೂಡಬಹುದು. ಇದರಿಂದ ನಿಮ್ಮ ಕಾರ್ಯ ಸಾಧನೆಗೆ ಸಹಾಯವಾಗಬಹುದು.

ಆಲೋಚನೆಗಳು ಎಂದಿಗೂ ಹಾದಿ ತಪ್ಪಿಸುವಂತಿರಬಾರದು ಬದಲಿಗೆ ತಪ್ಪಿದ ಹಾದಿಯ ಸರಿ ದಾರಿ ಹಿಡಿಸಿ ಕಾರ್ಯಸಾಧನೆಯಲ್ಲಿ ಮುನ್ನುಗ್ಗಿ ಯಶಸ್ಸು ಕಾಣುವಂತಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next