Advertisement
ತೂಫಾನ್ ಆದರೂ ಮೀನಿಲ್ಲಸಾಮಾನ್ಯವಾಗಿ ಸಮುದ್ರದಲ್ಲಿ ತೂಫಾನ್ ಎದ್ದರೆ ಮಾತ್ರ ನಾಡದೋಣಿ ಮೀನುಗಾರರಿಗೆ ಮೀನು ಬೇಟೆಗೆ ಪೂರಕವಾಗಿರುತ್ತದೆ. ಆದರೆ ಈ ಬಾರಿ ತಡವಾಗಿ ತೂಫಾನ್ ಆಗಿದ್ದರೂ ಕಡಲಿಗಿಳಿದ ಮೀನುಗಾರರು ಸಮುದ್ರ ಜಾಲಾಡಿದರೂ ಮೀನು ಸಿಗುವ ಲಕ್ಷಣ ಕಂಡು ಬರುತ್ತಿಲ್ಲ.
ಈ ಬಾರಿ ಮಳೆಗಾಲದ ನಾಡದೋಣಿ ಮೀನುಗಾರಿಕೆ ಹಿನ್ನಡೆಯಾದ್ದರಿಂದ ಮೀನುಗಾರಿಕೆ ಉದ್ಯಮಕ್ಕೆ ಕೋಟ್ಯಂ ತರ ರೂಪಾಯಿ ನಷ್ಟವಾಗಿದೆ. ಕಳೆದ ಬಾರಿ ಇಷ್ಟೊತ್ತಿಗೆ ನಾಡದೋಣಿ ಮೀನುಗಾರರು ಲಕ್ಷಾಂತರ ರೂಪಾಯಿ ಆದಾಯವನ್ನು ಗಳಿಸಿದ್ದರು. ಮಳೆಗಾಲದಲ್ಲಿ ಸಿಗುವ ಸಿಗಡಿ ಮೀನಿಗೆ ಉತ್ತಮ ಬೆಲೆ ಇರುತ್ತದೆ. ಆದರೆ ಈ ಬಾರಿ ನಾಡದೋಣಿ ಮೀನುಗಾರರು ಇನ್ನೂ ಮೀನು ದೊರಕದಿರುವುದು ಪ್ರತಿಯೊಂದು ದೋಣಿಗಳಿಗೆ ಕನಿಷ್ಟ 1.5ರಿಂದ 2 ಲಕ್ಷ ರೂಪಾಯಿ ನಷ್ಟವನ್ನು ಅನುಭವಿಸಬೇಕಾಗಿದೆ.
Related Articles
ನಾಡದೋಣಿಗಳು ಕಡಲಿಗೆ ಇಳಿಯದ ಕಾರಣ ಮೀನು ಮಾರುಕಟ್ಟೆಯಲ್ಲಿ ತಾಜಾ ಮೀನುಗಳ ಕೊರತೆ ಉಂಟಾಗಿದೆ. ಮಂಗಳೂರು ಉಡುಪಿ ಮಾರುಕಟ್ಟೆಗೆ ದೂರದ ತಮಿಳುನಾಡು, ಮಹಾರಾಷ್ಟ್ರದ ರತ್ನಾಗಿರಿ ಯಿಂದ ಮೀನು ಸಂಸ್ಕರಣಾ ಘಟಕಗಳಿಂದ ಮೀನುಗಳನ್ನು ಆಮದು ಮಾಡಿ ಮಾರಾಟ ಮಾಡಲಾಗುತ್ತದೆ.
Advertisement
ಮೀನಿನ ಛಾಯೆಯೇ ಇಲ್ಲ
ಈ ಸಲ ಇದುವರೆಗೂ ಗಾಳಿ ನೀರು ಮೀನುಗಾರಿಕೆಗೆ ಪೂರಕವಾಗಿ ಇರಲಿಲ್ಲ. ವಾರದ ಹಿಂದೆ ಕಡಲಲ್ಲಿ ಮೀನಿನ ಲಕ್ಷಣ ಕಂಡು ಬಂದಿದ್ದರೂ, ಅದನ್ನು ಹಿಡಿಯುವ ವೇಳೆ ಒಮ್ಮೆಲೆ ತೂಫಾನ್ ಆಗಿರುವ ಕಾರಣ ಆ ಮೀನು ವಲಸೆ ಹೋಗಿದೆ. ಇದೀಗ ಎಲ್ಲಿಯೂ ಮೀನಿನ ಛಾಯೆಯೇ ಕಾಣುತ್ತಿಲ್ಲ
– ಕೃಷ್ಣ ಎಸ್. ಸುವರ್ಣ, ಪಡುತೋನ್ಸೆ ಸಂಪಾದನೆ ಇಲ್ಲ
ಜು. 31ರಂದು ಯಾಂತ್ರಿಕೃತ ಮೀನುಗಾರಿಕೆಯ ರಜೆ ಮುಗಿಯಲಿದೆ. ಸಾಂಪ್ರಾಯಿಕ ಮೀನುಗಾರರು ವರ್ಷದ ಎರಡು ತಿಂಗಳು ಒಂದಷ್ಟು ಅಧಿಕ ಸಂಪಾದನೆ ಗಳಿಸಲು ಅವಕಾಶವಿರುವ ಈ ಅವಧಿಯಲ್ಲಿ ಕೆಲವರು ಕಡಲಿಗೆ ಇಳಿದಿದ್ದರೂ ಸಂಪಾದನೆ ಆಗಿಲ್ಲ. ಹೆಚ್ಚಿನವರು ಕಡಲಿಗೆ ಇಳಿದೇ ಇಲ್ಲ.
-ರಮೇಶ್ ಕಾಂಚನ್, ವಾಸು ಕುಂದರ್,
ನಾಡದೋಣಿ ಮೀನುಗಾರರು -ನಟರಾಜ್ ಮಲ್ಪೆ