Advertisement

ದುಬಾರಿ ಚಿಕಿತ್ಸೆ ಪ್ರಶಿಸಿದ್ನ ರೈತ ಮುಖಂಡ ಮೇಲೆ ಹಲ್ಲೆ

04:58 PM Sep 12, 2021 | Team Udayavani |

ಕನಕಪುರ: ಚಿಕಿತ್ಸೆಗೆ ದುಬಾರಿ ಹಣ ಪಡೆದಿರುವುದನ್ನು ಪಶ್ನೆ ಮಾಡುತ್ತಿದ್ದ ರೈತ ಮುಖಂಡನ ಮೇಲೆ ಹಾರೋಹಳ್ಳಿ ಪೊಲೀಸರು ಏಕಾಏಕಿ ಹಲ್ಲೆ ಮಾಡಿರುವ ಘಟನೆ ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಬನ್ನಿಕುಪ್ಪೆ ವೃತ್ತದಲ್ಲಿ ನಡೆದಿದೆ.

Advertisement

ತಾಲೂಕಿನ ಹಾರೋಹಳ್ಳಿಯ ಕೈಗಾರಿಕಾ ಪ್ರದೇಶದ ಬನ್ನಿ ಕುಪ್ಪೆ ವೃತ್ತದಲ್ಲಿರುವ ಅಥರ್ವ ಖಾಸಗಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ.

ಈ ಸಂಬಂಧ ಹಲ್ಲೆಗೊಳಗಾದ ರೈತಮುಖಂಡ ಪ್ರಕಾಶ್‌ ಮಾತನಾಡಿ, ಅನಾರೋಗ್ಯ ಹಿನ್ನೆಲೆ ನಮ್ಮ ಮಗನಿಗೆ ಚಿಕಿತ್ಸೆ ಕೊಡಿಸಲು ಬಂದಾಗ
ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆಗಿಂತಲೂ ಹೆಚ್ಚುವರಿ ಹಣ ಪಡೆದಿದ್ದರು. ಇದನ್ನು ಪ್ರಶ್ನೆ ಮಾಡಿದಾಗ ಅಲ್ಲಿನ ವೈದ್ಯರು ತಪ್ಪನ್ನು ಒಪ್ಪಿಕೊಂಡರು. ಈ ವಿಚಾರದಲ್ಲಿ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ ಸಿವಿಲ್‌ ವಸ್ತ್ರದಲ್ಲಿ ಹಾರೋಹಳ್ಳಿ ಠಾಣಾ ಸಿಬ್ಬಂದಿಗಳಾದ ಮಾಳಗಯ್ಯ, ಮಧು ಇಬ್ಬರು ಘಟನೆ ಪೂರ್ವಪರ ತಿಳಿಯದೆ ಏಕಾಏಕಿ ನನ್ನ ಹಾಗೂ ನನ್ನ ಸ್ನೇಹಿತರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಇದನ್ನೂ ಓದಿ:ಹುಣಸೋಡು ಕ್ವಾರಿ ದುರಂತದಲ್ಲಿ ಮೃತಪಟ್ಟ 6ನೇ ವ್ಯಕ್ತಿಯ ಗುರುತು ಪತ್ತೆ; ಯಾರು ಆ ವ್ಯಕ್ತಿ?

ಪರಿಸ್ಥಿತಿ ತಿಳಿಗೊಳಿಸಿದ ಮೇಲಾಧಿಕಾರಿಗಳು: ಈ ವೇಳೆ ಸ್ಥಳೀಯರು ಘಟನೆಯನ್ನು ಚಿತ್ರೀಕರಣ ಮಾಡದಂತೆ ತಡೆದ ಪೊಲೀಸರು ಪ್ರಕರಣ ದಾಖಲು ಮಾಡಿ ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ವಿಷಯ ತಿಳಿದ
ಹಾರೋಹಳ್ಳಿ ಠಾಣಾ ಮೇಲಾಧಿಕಾರಿಗಳು ಮಧ್ಯಪ್ರವೇಶಿಸಿ ತಮ್ಮ ಸಿಬ್ಬಂದಿ ವರ್ತನೆ ಸಮರ್ಥನೆ ಮಾಡಿಕೊಂಡು ವಾತಾವರಣ ತಿಳಿಗೊಳಿಸಿದ್ದಾರೆ.

Advertisement

ಪೊಲೀಸರಿಗೂ ಪಾಲಿದೆ: ಆಸ್ಪತ್ರೆಯಲ್ಲಿ ರೋಗಿಗಳಿಂದ ದುಬಾರಿ ಹಣಪಡೆಯುತ್ತಿದ್ದಾರೆ ಇದರಲ್ಲಿ ಪೊಲೀಸರಿಗೂ ಪಾಲಿದೆ. ಆಸ್ಪತ್ರೆಯ
ಮಾಲಿಕರಕುಮ್ಮಕ್ಕಿನಿಂದಲ್ಲೇ ಪೊಲೀಸರು ನಮ್ಮ ಮೇಲೆ ಈ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ. ಘಟನೆ ಸಂಬಂಧ ಹಲ್ಲೆ ಗೊಳಗಾದ ರೈತ ಮುಖಂಡ ಪ್ರಕಾಶ್‌, ಹಾರೋಹಳ್ಳಿ ರಾಣಿಗೆ ದೂರು ನೀಡಲು ಹೋದಾಗ ಪ್ರಕರಣ ದಾಖಲಿಸಿಕೊಂಡು ಕ್ರಮ ವಹಿಸಬೇಕಾದ ಹಾರೋಹಳ್ಳಿ ಪೊಲೀಸರು ರಾಜಿ ಸಂಧಾನ ಮಾಡುವ ಯತ್ನ ಮಾಡುತ್ತಿದ್ದಾರೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next