Advertisement

ಹುಟ್ಟಿನಿಂದ ಸಾಯುವ ತನಕ ಹೆಣ್ಣಿನ ಮಹತ್ವ ಮರೆಯುವುದುಂಟೆ

11:53 PM Mar 07, 2021 | Team Udayavani |

ಜಾಗತಿಕ ಜಗತ್ತಿನಲ್ಲಿ ಸ್ತ್ರೀ ಮೇಲೆ ನಡೆಯುತ್ತಿರುವ ಹತ್ತಾರು ರೀತಿಯ ಶೋಷಣೆಗಳ ನಡುವೆ ಈ ಒಂದು ದಿನ ಮಹಿಳಾ ದಿನಾಚರಣೆ ಪ್ರಸ್ತುತವೂ ತಿಳಿಯುತಿಲ್ಲ.

Advertisement

“ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ’, ಅಂದ್ರೆ ಮಹಿಳೆಯರನ್ನು ಎಲ್ಲಿ ನಾವು ಆರಾಧಿಸುತ್ತೇವೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಸ್ತ್ರೀಯರನ್ನು ಶಕ್ತಿ ಸ್ವರೂಪಿಣಿಯಾಗಿ ಆರಾಧಿಸಿದ ದೇಶ ನಮ್ಮದು.

ಸ್ತ್ರೀಯನ್ನು ಮೂರು ದೃಷ್ಟಿಯಿಂದ ನೋಡುತ್ತೇವೆ. ಕತೃಥ್ವ, ನೇತೃಥ್ವ, ತಾಯತ್ವವಾಗಿರುತ್ತಾಳೆ. ಇವೆಲ್ಲವೂ ಒಂದು ಹೆಣ್ಣಿನಲ್ಲಿ ಇದ್ದಾಗ ಸಮಾಜದಲ್ಲಿ ಶಾಂತಿ-ನೆಮ್ಮದಿಯ ನೆಲೆಯಾಗುತ್ತದೆ. ಹಾಗೆಯೇ ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ.

ಖ್ಯಾತ ವಾಕ್ಯವೊಂದಿದೆ. ನಾನು ಹುಟ್ಟಿದಾಗ ಒಬ್ಬ ಹೆಂಗಸು ನನ್ನ ಕೈ ಹಿಡಿದುಕೊಂಡಳು, ಅವಳೇ ತಾಯಿ. ನಾನು ಮಗುವಾಗಿ ಆಟವಾಡುತಿದ್ದಾಗ ಒಬ್ಬ ಹೆಂಗಸು ನನ್ನ ಜೋಪಾನ ಮಾಡಿ ನನ್ನ ಜತೆ ಆಟವಾಡುತಿದ್ದಳು, ಅವಳೇ ಆಕ್ಕ. ನಾನು ಶಾಲೆಗೆ ಹೋಗುವಾಗ ಒಬ್ಬ ಹೆಂಗಸು ನನಗೆ ಪಾಠ ಹೇಳಿ ಕೊಡುತ್ತಿದ್ದಳು ಅವಳೇ ಶಿಕ್ಷಕಿ. ಸದಾ ಸಹಾಯ ಮಾಡುತ್ತಾ ಗಂಡನ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾ, ಪ್ರೀತಿ ಮಾಡುತ್ತಾ, ಬಂದವಳು ಅವಳೇ ಹೆಂಡತಿ. ಅಪ್ಪನಿಗೆ ಕಷ್ಟ ಬಂದಾಗ ಕಣ್ಣೀರು ಹಾಕಿದವಳು ಅವಳೇ ಮಗಳು. ನಾವು ಸತ್ತಗಾ ಒಬ್ಬಳು ಜಾಗ ಕೊಟ್ಟಳು ಅವಳೇ ಭೂ ತಾಯಿ.

ಹೀಗೆ ಪ್ರತಿಯೊಂದು ಜೇವನದ ಹಂತದಲ್ಲಿ ತನ್ನ ಪರಿಪೂರ್ಣ ಕರ್ತವ್ಯವನ್ನು ಮಾಡುವವಳು ಹೆಣ್ಣು. ಹೆತ್ತು ಹೊತ್ತು ಸಾಕಿ ಸಲಹುವವಳು ಹೆಣ್ಣು. ಅಕ್ಕ, ತಂಗಿ, ಪುತ್ರಿ, ಪತ್ನಿಯಾಗಿ ಜೀವನ ತುಂಬುವವಳು ಹೆಣ್ಣು. ಇಂಥ ಮಹಿಳೆಗೆ ಜಗತ್ತಿನಲ್ಲಿ ಅಪೂರ್ವ ಸ್ಥಾನ ಇದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ದಿನವೇ ಮಹಿಳಾ ದಿನಾಚರಣೆ.

Advertisement

ಈ ದಿನ ಕೆಲವರು ವಿಶ್ವ ಮಹಿಳಾ ದಿನಾಚರಣೆಯನ್ನು ಮನೆಯಲ್ಲಿ ನೆನಪಿಸಿಕೊಂಡು ಶುಭಾಶಯ ಹೇಳುವ ಜನರಿದ್ದಾರೆ. ಆಫೀಸ್‌ ಅಲ್ಲಿ ಒಂದು ಹೂ ಗುಚ್ಛ ಕೊಟ್ಟು ಸಿಹಿ ಹಂಚಿ ಊಟಕ್ಕೆ ಕರೆದೊಯ್ಯುವ ಜನರಿದ್ದಾರೆ.

ಏನೂ ಅಪೇಕ್ಷೆ ಮಾಡದೇ ಕೆಲಸ ಮಾಡುವ ಅಮ್ಮ. ಎಲ್ಲರಿಗೂ ವಾರಕ್ಕೆ ಒಮ್ಮೆ ರಜೆ ಇರುತ್ತದೆ. ಆದರೆ ಮನೆಯಲ್ಲಿ ಕೆಲಸ ಮಾಡುವ ತಾಯಿ ಯಾವಾಗಲೂ ಕೂಡ ಸದಾ ಸೈನಿಕರು ಹೋರಾಡಲು ಹೇಗೆ ಸಿದ್ಧರಾಗಿ ಇರುತ್ತಾರೆಯೋ ಕೆಲಸ ಮಾಡಲು ತಾಯಿಯೂ ಸಿದ್ಧರಾಗಿರುತ್ತಾರೆ. ಅಂತಹ ತಾಯಂದಿರಿಗೆ ಒಂದು ಸಲಾಂ.

ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಮಹಿಳೆಯರೆಂದರೆ ಕೀಳಾಗಿ ನೋಡುವ ಪ್ರವೃತಿ ಇಂದಿಗೂ ಕಡಿಮೆಯಾಗುತ್ತಿಲ್ಲ. ಮಹಿಳೆಯರಿಗೆ ರಾಜಕೀಯ, ಶಿಕ್ಷಣ, ಜನಾಂಗೀಯ, ಉದ್ಯೋಗ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಕಲ್ಪಿಸಿ ಅವರಿಗೂ ಗೌರವದ ಬದುಕು ನಡೆಸುವ ಅವಕಾಶ ಪಡೆದುಕೊಂಡರೂ ಶೋಷಣೆಗಳು ಮಾತ್ರ ಇನ್ನೂ ನಿಂತಿಲ್ಲ.

1909 ಫೆಬ್ರವರಿ 28ರಂದು ಮೊದಲು ಅಮೆರಿಕದ ನ್ಯೂಯಾರ್ಕ್ ನಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಿದರು. ಅನಂತರ 1977ರಲ್ಲಿ ವಿಶ್ವ ಸಂಸ್ಥೆ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸುವಂತೆ ಘೋಷಿಸಿತು. ಅದರೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮೊದಲೇ ನಮ್ಮ ದೇಶದಲ್ಲಿ ಫೆಬ್ರವರಿ 13 ಅನ್ನು ರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತದ ಪ್ರಥಮ ಮಹಿಳಾ ರಾಜ್ಯಪಾಲೆ ಸರೋಜಿನಿ ನಾಯ್ಡು ಜನ್ಮದಿನ ವಾಗಿರುವ ಫೆಬ್ರವರಿ 13 ಅನ್ನು ದೇಶದಲ್ಲಿ ಮಹಿಳೆಯರ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆಗಳನ್ನು ಪರಿಗಣಿಸಿ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತಿದೆ.

ಹಲ್ಲೆಗೆ ಕೊನೆ ಎಂದು
ಹೆಣ್ಣಿಗೆ ರಕ್ಷಣೆ ಎಂಬುದು ಇಲ್ಲದಂತಾಗಿದೆ. ಎಲ್ಲಿ ನೋಡಿದರೂ ದೌರ್ಜನ್ಯ, ಶೋಷಣೆ. ಪ್ರತೀ ದಿನ ಬೆಳಗ್ಗೆ ಎದ್ದು ನ್ಯೂಸ್ ನೋಡಿದರೆ ಸಾಕು. ಮಹಿಳೆಯ ಮೇಲೆ ಹಲ್ಲೆ, ಮಾನಭಂಗ ಹೀಗೆ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಾ ಇದೆ. ನಾವು ಬ್ರಿಟಿಷ್ ಆಡಳಿತದಿಂದ ಮಾತ್ರ ಬಿಡುಗಡೆ ಹೊಂದಿದ್ದೇವೆ. ಆದರೆ ನಮ್ಮ ದೇಶದಲ್ಲಿ ಇರುವ ಕಾಮುಕರಿಂದ, ನರ ಭಕ್ಷಕರಿಂದ ಬಿಡುಗಡೆ ಪಡೆದಿಲ್ಲ. ಇತ್ತೀಚಿನ ದಿನಗಳಲ್ಲಿ ರಕ್ತ ಸಂಬಂಧಗಳಿಗೆ ಬೆಲೆ ಇಲ್ಲ. ತಂದೆ ಮಗಳ ಮೇಲೆ, ಅಣ್ಣ ತಂಗಿ ಮೇಲೆ ಶೋಷಣೆ ನಡೆಯುತ್ತಾ ಇದೆ.

ಹೆಣ್ಣು ಮೃದುವಾಗಿರಬೇಕು ಶಾಂತವಾಗಿರಬೇಕು. ತ್ಯಾಗ ಮಾಡಬೇಕು ತಲೆ ತಗ್ಗಿಸಿ ನಡೆಯಬೇಕು ಜೋರಾಗಿ ಮಾತನಾಡಬಾರದು ಎಂಬ ಹುಚ್ಚು ಕಟ್ಟುಪಾಡುಗಳನ್ನು ಇನ್ನಾದರೂ ಮುರಿಯಬೇಕಾಗಿದೆ. ಗಂಡು ಜೋರಾಗಿ ಇರಬೇಕು, ಹೆಣ್ಣು ಶಾಂತವಾಗಿರಬೇಕು ಎಂಬ ವಿಚಿತ್ರ ಮಾತುಗಳು ಕೇಳಿಬರುತ್ತಿವೆ. ಆದರೆ ಈಗ ಕಾಲ ಬದಲಾಗಿದೆ ತನ್ನ ಕೆಲಸ ಕಾರ್ಯ ತನ್ನ ಗೌರವವನ್ನು ಕಾಪಾಡಿಕೊಳ್ಳಲು ಹೆಣ್ಣು ಯಾವಾಗಲೂ ಮುಂದಾಗಬೇಕು. ಹೆಣ್ಣು ಎಂದು ಗೌರವ ಕೊಡುವುದಕ್ಕಿಂತ ಆಕೆಯೂ ಮನುಷ್ಯಳು ಎಂದು ಗೌರವಿಸುವ ಪದ್ಧತಿ ಶುರುವಾಗಬೇಕು.

ನಾವಿಂದು 21ನೇ ಶತಮಾನದಲ್ಲಿದ್ದೇವೆ ಆದರೂ ಮೂಡನಂಬಿಕೆ ಶೋಷಣೆಗಳು ಇನ್ನೂ ನಿಂತಿಲ್ಲ. ಸಮಾನತೆ ಸಮಾನತೆ ಎಂಬ ಕೂಗು ಕೇವಲ ಬಾಯಿಮಾತಿನಲ್ಲೇ ಉಳಿದುಬಿಟ್ಟಿದೆ. ಅವಕಾಶಗಳನ್ನು ಬಳಸಿಕೊಂಡು ಕೆಲವು ಮಹಿಳೆಯರು ತಮ್ಮ ತಮ್ಮ ಕ್ಷೇತ್ರದಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಆದರೆ ಅದೆಷ್ಟೋ ಮಹಿಳೆಯರು ಇನ್ನೂ ಅದೇ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದಾರೆ. ಮಹಿಳೆಯರಿಗೆ ರಕ್ಷಣೆ ಇಲ್ಲದ ಮೇಲೆ ಮಹಿಳಾ ದಿನಾಚರಣೆಯ ಅಗತ್ಯ ಇಲ್ಲ. ಸರಕಾರಗಳು ಮಹಿಳೆಯರ ರಕ್ಷಣೆಗೆ ಕ್ರಮಕೈಗೊಂಡರೂ ಯಾವುದೇ ಪ್ರಯೋಜನವಿಲ್ಲ. ಮಹಿಳೆಯರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುಬೇಕು. ಧೈರ್ಯದಿಂದ ಎಲ್ಲವನ್ನೂ ಎದುರಿಸುವ ಶಕ್ತಿ ಪ್ರತಿಯೊಬ್ಬ ಮಹಿಳೆಗೂ ಬರಲಿ.


ಸೌಮ್ಯಾ ಎನ್., ಎಲಿಮಲೆ

Advertisement

Udayavani is now on Telegram. Click here to join our channel and stay updated with the latest news.

Next