Advertisement
ಕಿರು ನಗುವನ್ನು ಚೆಲ್ಲಿದ ನನ್ನಮ್ಮ, “ನಾನೊಂದು ಘಟನೆ ಹೇಳುವೆ. ಅಂದಿನಿಂದ ನಾನೂ ಸಹ ಹೆಚ್ಚಾಗಿ ದೇವರನ್ನು ನಂಬಿದೆ. ಅದು ಬೇರೆಯವರ ಜೀವನದಲ್ಲಿ ನಡೆದದ್ದು ಅಲ್ಲ, ನಮ್ಮ ಜೀವನದ್ದೇ; ನಿನಗೂ ನೆನಪಿರಬಹುದು’ ಎಂದರು.ಮುಂದುವರಿಸಿ, “ಒಂದನೇ ತರಗತಿಯಲ್ಲಿ ಸಣ್ಣ ಘಟನೆ ನಡೆಯಿತು. ಘಟನೆ ಎಂದು ಹೇಳುವುದಕ್ಕಿಂತ “ಅನುಭವ’ ಎಂದರೆ ಅದಕ್ಕೆ ಮತ್ತಷ್ಟು ಪ್ರಾಶಸ್ತ್ಯ ಸಿಗಬಹುದೇನೋ. ಧೀರಜ್(ನೈಜ ಹೆಸರನ್ನು ಬಳಸಲಿಲ್ಲ) ನಿನ್ನನ್ನು ತಳ್ಳಿ ಬೀಳಿಸಿದಾಗ ಏನಾಯಿತು ನೆನಪಿದೆಯೇ?’ ಎಂದು ಕೇಳಿದರು.
Related Articles
Advertisement
“ನಾನು ಜಗಲಿಯಲ್ಲಿ ಕುಳಿತಿರುವಾಗ ಧೀರಜ್ ಕೆಳಗೆ ದೂಡಿದ’ ಎಂದೆ. “ಧೀರಜ್ ನಿಲ್ಲು…ಅವನಿಗೇ…’ ಎಂದು ಹೇಳಿ ಧೀರಜ್‌ನನ್ನು ಕರೆದು ಬೆತ್ತ ಹಿಡಿದು ಬಂದರು. ಅಷ್ಟರವರೆಗೆ ನಗುತ್ತಿದ್ದ ಧೀರಜ್‌ನ ಮುಖ ಬಾಡಿತು. “ಏಕೆ ತಳ್ಳಿದೆ?’ ಎಂದು ಬೈದ ಎಚ್.ಎಂ. ಅವನಿಗೆ ನಾಗರಬೆತ್ತದಿಂದ ಹೊಡೆದರು. ಇನ್ನು ಹೀಗೆ ಮಾಡಬಾರದು ಎಂದು ಗದರಿಸಿ ಹೇಳುವಷ್ಟರಲ್ಲಿ ಶಾಲೆಯ ಲಾಂಗ್ ಬೆಲ್ ಬಾರಿಸಿಯಾಗಿತ್ತು. ಮನೆಗೆ ಓಡುವವರು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಅವರನ್ನು ಕಳುಹಿಸಿ, ಕಾಲಿಗೆ ಮುಲಾಮು ಹಚ್ಚಿ ಎಚ್.ಎಂ. ನಮ್ಮನ್ನೂ ಕಳುಹಿಸಿದರು.
ಸ್ವಲ್ಪ ಮಟ್ಟಿಗೆ ನೆಮ್ಮದಿಯ ಭಾವ. ಆದರೂ ಮನೆಯಲ್ಲಿ ಹೇಳದೆ ದುಃಖ ಹೋಗದು. ಅಳುವ ಮೊಗದೊಂದಿಗೆ ಮನೆಯತ್ತ ತೆರಳಿದೆ. ತಾಯಿಯ ಬಳಿ ಶಾಲೆಯಲ್ಲಿ ನಡೆದ ಸಂಗತಿಯನ್ನೆಲ್ಲ ಹೇಳಿದೆ. ಕ್ಷಣಕಾಲ ದಂಗಾದ ತಾಯಿ ಸಮಾಧಾನ ಪಡಿಸುತ್ತ, “ನೋಡು ಕಂದಾ, ನೀನು ಅವನಿಗೆ ಏನೂ ಉಪಟಳ ಮಾಡಲಿಲ್ಲ ಅಲ್ವಾ. ಹಾಗಾಗಿ ನಾಳೆ ದೇವರು ಅವನನ್ನು ತಳ್ಳಿ ಹಾಕುತ್ತಾನೆ’ ಎಂದರು.
ಒಂದೆರಡು ದಿನಗಳ ಬಳಿಕ, ಮನೆಗೆ ಹಿಂದಿರುಗುವಾಗ ನನ್ನ ಮೊಗದಲ್ಲಿದ್ದ ಸಂತಸವನ್ನು ಕಂಡ ತಾಯಿ, ಏನಾಯಿತು?ಬಹಳ ಖುಷಿಯಲ್ಲಿ ಇದ್ದಿ’ ಎಂದು ಪ್ರಶ್ನಿಸಿದರು. “ಏನಿಲ್ಲ ಅಮ್ಮಾ, ಇಂದು ದೇವರು ಬಂದು ಧೀರಜ್‌ನನ್ನು ತಳ್ಳಿ ಹಾಕಿದರು’ ಎಂದು ಖುಷಿಯಿಂದ ಹೇಳಿದೆ. ಕ್ಷಣ ಕಾಲ ಮೌನ ವಹಿಸಿದ ತಾಯಿ ಹೇಳಿದರು, “ನೋಡು, ಅಂದು ನಾನು ಕೇವಲ ನಿನ್ನ ಸಂತೋಷಕ್ಕಾಗಿ ದೇವರು ತಳ್ಳಿಹಾಕುತ್ತಾನೆ ಎಂದು ಹೇಳಿದೆನಷ್ಟೇ. ಅವನ ಮೊಣಕಾಲಿಗೆ ಏಟಾಗಿ, ಚಿಕಿತ್ಸೆ ಪಡೆದು ಬರುವಂತಾಯಿತು. ನಾನು ಹೇಳಿದ್ದರ ಹಿಂದೆ ಯಾವ ದುರುದ್ದೇಶವೂ ಇರಲಿಲ್ಲ. ಆದರೆ ಪ್ರಾಮಾಣಿಕದ ಪಥದಲ್ಲಿ ನಡೆದವರಿಗೆ ಯಾರಾದರೂ ಕೇಡನ್ನು ಬಯಸಿದರೆ, ಭಗವಂತ ತಿರುಗೇಟನ್ನು ನೀಡುತ್ತಾನೆ ಎಂಬುದು ಆ ಸಣ್ಣ ಘಟನೆಯಿಂದ ತಿಳಿಯುತ್ತದೆ’ ಎಂದು ವಿವರಿಸಿದರು.
ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾರೇ ಕೇಡು ಬಯಸಿದರೆ ಒಂದಲ್ಲ ಒಂದು ದಿನ ಅದರ ಪರಿಣಾಮ ಅನುಭವಿಸುತ್ತಾರೆ ಎನ್ನುವುದು ನನ್ನ ಅನುಭವಕ್ಕೆ ಬಂದ ಸಂಗತಿ.
ಸಮ್ಯಕ್ ಜೈನ್, ನೂಜಿಬಾಳ್ತಿಲ, ಸಾಫಿಯೆನ್ಶಿಯಾ ಬೆಥನಿ ಕಾಲೇಜು, ನೆಲ್ಯಾಡಿ