ಸಾಂಸ್ಕೃತಿಕ ಲೋಕದ ಶ್ರೀಮಂತ ಗ್ರಾಮ ಸಾಗರದ ಹೆಗ್ಗೊàಡು ಹೆಸರು ಚಿರಪರಿಚಿತ. ಆಗುಂಬೆ ದಾಟಿ ತೀರ್ಥಹಳ್ಳಿಯಲ್ಲಿ ನಿಂತು ಹೆಗ್ಗೊàಡು ಎಂಬ ಸ್ಥಳ ದಾರಿ ಕೇಳಿದರೆ ಥಟ್ಟನೇ ತೀರ್ಥಹಳ್ಳಿಯ ಹೆಗ್ಗೊàಡಿಗೆ ದಾರಿ ಹೇಳುವುದುಂಟು. ನೀನಾಂಸನ ಹೆಗ್ಗೋಡು ಅಂತಾ ನಾವು ಹೇಳಿದ ಮೇಲೆ ಅದು ಸಾಗರ ಕಡೆ ಅನ್ನುತ್ತಾ ಬೆರಳು ತೋರಿಸುವವರು ಹೆಚ್ಚು. ಗೂಗುಲ್ ಮ್ಯಾಪ್ ಕೂಡ ನೀನಾಸಂ ದಾರಿಯನ್ನು ನಿಖರವಾಗಿ ತೋರಿಸಬಲ್ಲುದು.
ರಂಗಭೂಮಿ, ಚಲನಚಿತ್ರಗಳು ಮತ್ತು ಪ್ರಕಾಶನ ಕ್ಷೇತ್ರಗಳಲ್ಲಿ ಕೊಡುಗೆಗಳನ್ನು ನೀಡುವ ಸಾಂಸ್ಕೃತಿಕ ಸಂಸ್ಥೆ ಇದು. ನೀನಾಸಂ ಎಂದರೆ ಶ್ರೀ ನೀಲಕಂಠೇಶ್ವರ ನಾಟ್ಯಸೇವಾ ಸಂಘ. 1949ರಲ್ಲಿ ಕನ್ನಡದ ಖ್ಯಾತ ನಾಟಕಕಾರ ಮತ್ತು ಬರಹಗಾರ ಕುಂಟಗೋಡು ವಿಭೂತಿ ಸುಬ್ಬಣ್ಣ ಸ್ಥಾಪಿಸಿದರು. ಪ್ರಸ್ತುತ ನೀನಾಸಂ ಅನ್ನು ಕೆ.ವಿ. ಸುಬ್ಬಣ್ಣ ಅವರ ಪುತ್ರ ಕೆ.ವಿ. ಅಕ್ಷರ ಅವರು ಮುನ್ನಡೆಸುತ್ತಿದ್ದಾರೆ.
ಪುಟ್ಟ ಹುಲ್ಲಿನ ಗುಡಿಸಲಿನಿಂದ ಆರಂಭವಾದ ನೀನಾಸಂ ಈಗ ಹೆಮ್ಮರವಾಗಿ ಬೆಳೆದು ನಿಂತಿದೆ. ಥಿಯೇಟರ್ ಇನ್ಸ್ಟಿಟ್ಯೂಟ್, ತಿರುಗಾಟ, ಫೌಂಡೇಶನ್ ಮೊದಲಾದವುಗಳ ಮೂಲಕ ರಂಗಭೂಮಿ ಮತ್ತು ಇತರೆ ಕಲೆಗಳ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ. ಸಂಸ್ಥೆಯು ಡಿಪ್ಲೊಮಾ ಮತ್ತು ಬೇಸಗೆ ಕಾರ್ಯಾಗಾರಗಳ ಮೂಲಕ ಕಲೆಯ ಬಗ್ಗೆ ಶಿಕ್ಷಣ ಮತ್ತು ತರಬೇತಿಯನ್ನು ನೀಡುತ್ತದೆ. ಶಿವರಾಮ ಕಾರಂತರ ಹೆಸರಿನ ಸುಸಜ್ಜಿತ ಸಭಾಂಗಣ ಇಲ್ಲಿದೆ.
ಅಕ್ಷರ ಪ್ರಕಾಶನವು 1957ರಲ್ಲಿ ಕೆ.ವಿ. ಸುಬ್ಬಣ್ಣ ಅವರು ಸ್ಥಾಪಿಸಿದ ಪ್ರಕಾಶನ ಸಂಸ್ಥೆ. ಸಾಹಿತ್ಯ, ರಂಗಭೂಮಿ, ಚಲನಚಿತ್ರಗಳು, ತತ್ವಶಾಸ್ತ್ರ ಮತ್ತು ಮಾನವಿಕ ವಿಷಯಗಳಂತಹ ವಿವಿಧ ವಿಷಯಗಳಿಗೆ ಸೇರಿದ ನೂರಾರು ಪುಸ್ತಕಗಳನ್ನು ಪ್ರಕಟಿಸಿದೆ. ಇಲ್ಲಿನ ಗ್ರಂಥಾಲಯದಲ್ಲಿ ಅತ್ಯುನ್ನತ ಪುಸ್ತಕಗಳ ಸಂಗ್ರಹವೇ ಇದೆ.
ಅಂದ ಹಾಗೆ, ಸಾಂಸ್ಕೃತಿಕ ಸಾಕ್ಷರತೆಯನ್ನು ಬೆಳೆಸುವಲ್ಲಿ ನೀನಾಸಂ ಬಹು ದೊಡ್ಡ ಪಾತ್ರವನ್ನು ವಹಿಸಿದೆ. ಕಲೆ ಮತ್ತು ಸಂಸ್ಕೃತಿಯ ಕುರಿತು ತನ್ನದೇ ಆದ ಕೊಡುಗೆ ನೀಡುತ್ತಿರುವ ಹೆಗ್ಗೊàಡಿಗೆ ಭೇಟಿ ನೀಡುವುದು ಅರ್ಥಪೂರ್ಣ. ಶಿವಮೊಗ್ಗ ಕಡೆ ಹೋಗುವ ಯೋಚನೆಗಳಿದ್ದರೆ ಒಮ್ಮೆ ಹೆಗ್ಗೊàಡಿಗೂ ಹೋಗಿ ಬನ್ನಿ.
-ನಿಸರ್ಗ
ಪುತ್ತೂರು