ದೊಡ್ಡಬಳ್ಳಾಪುರ: ಕೋವಿಡ್‌ನಿಂದಾಗಿ ನೇಯ್ಗೆಉದ್ಯಮ ಸಂಕಷ್ಟದಲ್ಲಿದ್ದು, ನೇಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನೇಕಾರರ ಹಿತರಕ್ಷಣಾಸಮಿತಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರವು ಘೋಷಿಸಿರುವ ಆರ್ಥಿಕಪ್ಯಾಕೇಜ್ ಆರ್ಥಿಕ ನೆರವು ಇನ್ನು ಯಾವುದೇ ನೇಕಾರನಖಾತೆಗಳಿಗೆ ನೆರವಿನಹಣಜಮೆಆಗಿಲ್ಲ, ನೇಕಾರಕೂಲಿ ಕಾರ್ಮಿಕರಿಗೆ ಸಾವಿರ ಪರಿಹಾರ ಮೊತ್ತಘೋಷಣೆ ಮಾಡಲಾಗಿದೆ.
ಇದನ್ನು 10 ಸಾವಿರ ರೂ.ಗೆ ಏರಿಸಬೇಕು ಮತ್ತು ಶೀಘ್ರ ವಿತರಿಸ ಬೇಕು. ತೆಲಂಗಾಣ ಸರ್ಕಾರ ಜಾರಿಗೆ ತಂದಿರುವಂತೆ ನೇಕಾರರಿಗೆಉಚಿತವಾಗಿ 5 ಲಕ್ಷ ರೂ. ಬಿಮಾ ಯೋಜನೆಯನ್ನುರಾಜ್ಯದಲ್ಲೂ ಜಾರಿಗೊಳಿಸಬೇಕು.
ಆಂಧ್ರ ಪ್ರದೇಶದಂತೆ ನೇಕಾರರಿಗೆ ಒಂದು ವರ್ಷಕ್ಕೆ 24 ಸಾವಿರವರ್ಗಾವಣೆ ಮಾಡಬೇಕು. ಕೇರಳ ಸರ್ಕಾರದಂತೆನೇಕಾರರ ಕಲ್ಯಾಣ ಮಂಡಳಿ ರಚಿಸಿ 19 ರೀತಿಯಸೌಲಭ್ಯ ನೀಡಬೇಕು.
ಸ್ವಯಂ ಉದ್ಯೋಗಿಗಳ ಕೈಗಾರಿಕೆಯಾದ ನೇಕಾರರಿಗೆ ಜಿಎಸ್‌ಟಿ ವಿನಾಯಿತಿ ನೀಡಬೇಕು. ನೂಲು ಮತ್ತು ಬಟ್ಟೆ ಬ್ಯಾಂಕ್ ಸ್ಥಾಪಿಸಬೇಕು.ನೇಕಾರಿಕೆಕ್ಷೇತ್ರದ ಸಮಗ್ರಸಮಸ್ಯೆಗುರುತಿಸಿಅವುಗಳನಿವಾರಣೆಯ ಸಮರ್ಪಕ ಕ್ರಮ ಕೈಗೊಳ್ಳಲು ತಜ್ಞರಅಧ್ಯಯನ ಸಮಿತಿ ನೇಮಿಸಿ6ತಿಂಗಳಲ್ಲಿ ವರದಿಪಡೆದು ನೆರವು ನೀಡಬೇಕು ಎನ್ನುವ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿಸಲ್ಲಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್,ಕಾರ್ಯದರ್ಶಿ ಅಶೋಕ್ ತಿಳಿಸಿದ್ದಾರೆ.