ಜಮಖಂಡಿ: ನಗರದ ಮಿನಿ ವಿಧಾನಸೌಧ ಕಚೇರಿಯಲ್ಲಿ ತಾಲೂಕು ವಡ್ಡರ ಸಮುದಾಯದರು ಮೀಸಲಾತಿಗೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ಡಾ. ಸಿದ್ದು ಹುಲ್ಲೊಳ್ಳಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವಡ್ಡರ ಸಮುದಾಯದ ಪ್ರಮುಖರು, ಮೀಸಲಾತಿ ಭಿಕ್ಷೆಯಲ್ಲ ಡಾ| ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನಹಕ್ಕು. ಆದರೆ ಕೆಲವರು ಭೋವಿ (ವಡ್ಡರ), ಬಂಜಾರಾ (ಲಂಬಾಣಿ), ಕೊರಮ (ಭಜಂತ್ರಿ), ಕೊರಚ (ಅಲೆಮಾರಿ ಜನಾಂಗ) ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ವಿಚಾರವಾಗಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದ ಪ್ರಾಧಿಕಾರದ ಮುಂದೆ ಹಾಜರಾಗಲು ಸೂಚನೆ ನೀಡುವ ಮೂಲಕ ಸವೋತ್ಛ ನ್ಯಾಯಾಲಯ ಫೆ.14ರಂದು ಅರ್ಜಿ ವಿಲೇವಾರಿ ಮಾಡಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ನವದೆಹಲಿ ಅರ್ಜಿ ಸ್ವೀಕರಿಸಿದ ಕರ್ನಾಟಕ ರಾಜ್ಯದ ಭೋವಿ, ಬಂಜಾರಾ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ತಿಳಿಸಿರುವುದಿಲ್ಲ. ಜಾತಿಗಳನ್ನು ಕೈಬಿಡುವ ಬಗ್ಗೆ ರಾಜ್ಯ ಸರ್ಕಾರ ಅಭಿಪ್ರಾಯ ಅಥವಾ ವಿವರಣೆ ಕೇಳಿದೆ ಹೊರತು ಕೈ ಬಿಟ್ಟಿಲ್ಲ. ಸವೋಚ್ಚ ನ್ಯಾಯಾಲಯ ಭೋವಿ, ಬಂಜಾರಾ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಮುಂದುವರಿಸುವುದಾಗಿ ಸ್ಪಷ್ಟ ವಿವರಣೆ ಹಾಗೂ ಅಭಿಪ್ರಾಯ ರವಾನಿಸಬೇಕಾಗಿದೆ. ಈ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯಬೇಕೆಂದು ಕೆಲವರು ನಡೆಸುತ್ತಿರುವ ಸಂಚಿಗೆ ನಮ್ಮ ವಿರೋಧವಿದ್ದು, ಇದಕ್ಕೆ ತಾವು ಮನ್ನಣೆ ನೀಡಬಾರದೆಂದು ಮನವಿ ಮಾಡಲಾಗಿದೆ. ಸ್ವಾಸ್ಥ್ಯ ಸಮಾಜದಲ್ಲಿ ಸಂಘರ್ಷ ಏರ್ಪಡಿಸಲು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಬಿತ್ತುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಈ ವೇಳೆ ಲವಾ ಪೂಜಾರಿ, ಶಂಕರ ಗಾಡಿವಡ್ಡತ, ಲೋಕೇಶ ಪೂಜಾರಿ, ಮಲ್ಲೇಶ ಗಾಡಿವಡ್ಡರ, ತಿಮ್ಮಣ್ಣಾ ಗಾಡಿವಡ್ಡರ, ಸಂತುಮ ಗಾಡಿವಡ್ಡರ, ವಿನೋದ ಪವಾರ, ಶಂಕರ ಗಾಡಿವಡ್ಡರ, ಹಣಮಂತ ಭಜಂತ್ರಿ, ಶ್ರೀಕಾಂತ ಗಾಡಿವಡ್ಡರ, ಯಮನಪ್ಪ ಗಾಡಿವಡ್ಡರ, ರಮೇಶ ಬಂಡಿವಡ್ಡರ, ರಾಮ ಗಾಡಿವಡ್ಡರ, ರವಿ ಗಾಡಿವಡ್ಡರ ಇದ್ದರು.