Advertisement

ವಿಶ್ವಕರ್ಮ ಸಂಘದಿಂದ ಮನವಿ

01:28 PM May 03, 2020 | Suhan S |

ಹುನಗುಂದ: ಕೋವಿಡ್ 19  ವೈರಸ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಆದ ಹಿನ್ನೆಲೆಯಲ್ಲಿ ಬಡಿಗತನವನ್ನೇ ನಂಬಿಕೊಂಡು ಅನೇಕ ಕುಟುಂಬಗಳು ಕೆಲಸವಿಲ್ಲದೇ ಕುಟುಂಬ ನಿರ್ವಹಣೆಗಾಗಿ ಪರದಾಡುತ್ತಿವೆ. ಸರ್ಕಾರ ಆರ್ಥಿಕ ನೆರವು ಇಲ್ಲವೆ ಆಹಾರ ಧಾನ್ಯ ವಿತರಿಸಿಬೇಕು ಎಂದು ವಿಶ್ವಕರ್ಮ ಕಾರ್‌ ಪೆಂಟರ್‌ ಸಂಘದ ಪದಾಧಿಕಾರಿಗಳು ತಹಶೀಲ್ದಾರ್‌ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಿದರು.

Advertisement

ಸಂಘದ ಸದಸ್ಯ ಮೌನೇಶ ತಿಪ್ಪಣ್ಣ ಬಡಿಗೇರ ಮಾತನಾಡಿ, ಮರದ ಕೆಲಸವನ್ನೇ ನಂಬಿ ತಮ್ಮ ಕುಟುಂಬ ನಡೆಸುತ್ತಿದ್ದ ಕಾರಪೆಂಟರ್‌ ಗಳಿಗೆ ಕೆಲಸವಿಲ್ಲದೆ ಆಹಾರ ಧಾನ್ಯ ಖರೀದಿಸಲು ತೊಂದರೆಯಾಗಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಗಮನಿಸಿ ಕುಟುಂಬಗಳಿಗೆ ಆರ್ಥಿಕ ಸಹಾಯ ಸಹಕಾರ ಇಲ್ಲವೆ ಆಹಾರ ಧಾನ್ಯ ವಿತರಿಸಬೇಕು ಎಂದರು.

ಮೌನೇಶ ಕಮ್ಮಾರ, ಶೇಖಪ್ಪ ಬಡಿಗೇರ, ರವಿ ಬಡಿಗೇರ, ಪ್ರಹ್ಲಾದ ಬಡಿಗೇರ, ಕಾಳಪ್ಪ ಬಡಿಗೇರ, ಮುತ್ತಪ್ಪ ಬಡಿಗೇರ, ಯಮನಪ್ಪ ಬಡಿಗೇರ, ಮಹಾಬಳೇಶ ಬಡಿಗೇರ, ಕುಮಾರ ಕಮ್ಮಾರ, ವಿಶ್ವನಾಥ ಕಮ್ಮಾರ, ಈರಣ್ಣ ಬಡಿಗೇರ, ಗಂಗಾಧರ ಬಡಿಗೇರ, ವಿಶ್ವ ಕಡಿವಾಲ, ಈರಣ್ಣ ಕಮ್ಮಾರ, ಮೌನೇಶ ಸೋನಾರ, ಪ್ರಭು ಬಡಿಗೇರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next