Advertisement

ಪುರಾತನ ನಾಣ್ಯ, ನೋಟು, ಸಾಧನಗಳ ಅನಾವರಣ

06:23 AM Feb 23, 2019 | |

ಬೆಂಗಳೂರು: ದೊರೆಗಳ ಆಳ್ವಿಕೆ ಸಮಯದಲ್ಲಿ ಚಾಲ್ತಿಗೆ ತಂದ ನಾಣ್ಯಗಳು, ನಂತರ ಚಲಾವಣೆಗೆ ಬಂದ ನೋಟುಗಳು, ಇತಿಹಾಸ ಸೇರಿದ ಸಾಧನಗಳು ನಗರದ ಶಿಕ್ಷಕರ ಸದನದಲ್ಲಿ ಅನಾವರಣಗೊಂಡಿವೆ.

Advertisement

ಜರ್ಮನಿಯಲ್ಲಿ 1954ರಲ್ಲಿ ಆವಿಷ್ಕರಿಸಿದ ಕ್ಯಾಮೆರಾ, ರಾತ್ರಿ ವೇಳೆ ಸೈಕಲ್‌ ಓಡಿಸಲು ಬಳಸಲುತ್ತಿದ್ದ 50 ವರ್ಷಗಳ ಹಿಂದಿನ ದೀಪ, ನಕಲಿ ಅಂಚೆ ಚೀಟಿಗಳನ್ನು ಪತ್ತೆ ಹಚ್ಚಲು ಇಂಗ್ಲೆಂಡ್‌ ಆವಿಷ್ಕರಿಸಿದ್ದ ಸಾಧನ ಹಾಗೂ ಮೊದಲ ಗಣತಂತ್ರ ದಿನದ ಅಂಗವಾಗಿ ಆರ್‌ಬಿಐ ಬಿಡುಗಡೆ ಮಾಡಿದ್ದ ನೋಟು ಮತ್ತು ನಾಣ್ಯಗಳೆಲ್ಲವೂ ಅಲ್ಲಿವೆ.

ಮರುಧರ್‌ ಸಂಸ್ಥೆ ವತಿಯಿಂದ ಹಮ್ಮಿಕೊಂಡಿರುವ ಮೂರು ದಿನಗಳ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ದೊರೆತಿದೆ. 1854ರಲ್ಲಿ ವಿಶ್ವದಲ್ಲೇ ಪ್ರಥಮ ಬಾರಿ ಜಾರಿಗೊಳಿಸಿದ ಅಂಚೆ ಚೀಟಿ “ಬ್ಲಾಕ್‌ ಪೆನ್ನಿ’, ಸ್ವಾತಂತ್ರಾé ನಂತರ ಭಾರತೀಯ ಅಂಚೆ ಇಲಾಖೆ ಹೊರ ತಂದ ಮೊದಲ ಅಂಚೆ ಚೀಟಿ ತ್ರಿವರ್ಣ ಧ್ವಜದ ಜೈಹಿಂದ್‌ ಪ್ರಮುಖ ಆಕರ್ಷಣೆಯಾಗಿವೆ.

ಪ್ರದರ್ಶನದಲ್ಲಿ ಜರ್ಮನಿ ಕ್ಯಾಮೆರಾ ನೋಡುಗರಲ್ಲಿ ಕುತೂಹಲ ಹುಟ್ಟಿಸುತ್ತಿದೆ. ಈ ಕ್ಯಾಮೆರಾದ ಮುಂಭಾಗ ಜಿಗ್‌ಜಾಗ್‌ ಮಾಡಿದಂತಿದ್ದು ಇದರಲ್ಲಿ ಒಂದೇ ಲೆನ್ಸ್‌ ಬಳಸಲು ಸಾಧ್ಯ. ಅದನ್ನು ಛಾಯಗ್ರಾಹಕರು ತಮಗೆ ಬೇಕಾದಂತೆ ಹೊಂದಿಸಿಕೊಳ್ಳಲು ಮುಂಭಾಗದಲ್ಲಿ ವೃತ್ತಾಕಾರದ ಗೋಲದೊಳಗೆ ಸೂಜಿ ಇದೆ.

ಫೋಟೊ ತೆಗೆಯಲು ಹಿಂಬದಿಯಲ್ಲಿರುವ ಬಟನ್‌ ಅನ್ನು ಒಮ್ಮೆ ಒಂದೇ ಬಾರಿ ಕ್ಲಿಕ್ಕಿಸಿಸಬೇಕು. ಕ್ಲಿಕ್ಕಿಸಿದ ಕೆಲ ಕ್ಷಣದಲ್ಲೇ ಕ್ಯಾಮೆರಾದಿಂದ ನೆಗೆಟಿವ್‌ ಹೊರ ಬರುತ್ತದೆ. ಅದು ಬಂದ ನಂತರ ಮತ್ತೂಂದು ಫೋಟೊ ತೆಗೆಯಬಹುದು. ಕ್ಯಾಮೆರಾದಲ್ಲಿ ಯಾವುದೇ ಫ್ಲಾಷ್‌ ಲೈಟ್‌ ಇಲ್ಲದಿರುವುದರಿಂದ ಸೂರ್ಯನ ಬೆಳಕಿನಲ್ಲಿ ಮಾತ್ರ ಫೋಟೊ ಕ್ಲಿಕ್ಕಿಸಲಾಗುತ್ತಿತ್ತು.

Advertisement

ಸೈಕಲ್‌ ದೀಪ: ಮನೆಯಲ್ಲಿ ಬಳಸುವ ಬುಡ್ಡಿ ದೀಪವನ್ನು (ಚಿಮಣಿ) 60-70 ವರ್ಷಗಳ ಹಿಂದೆ ಜರ್ಮನಿಯಲ್ಲಿ ಸೈಕಲ್‌ನಲ್ಲಿ ಬಳಸಲಾಗುತ್ತಿತ್ತು. ಮೂರ್‍ನಾಲ್ಕು ಮುಚ್ಚುಳಗಳನ್ನು ತೆರೆದು ಅದರೊಳಗೆ ಇರುವ ಬತ್ತಿಕಡ್ಡಿಗೆ ಬಟ್ಟೆಯಿಂದ ಮಾಡಿದ ಬತ್ತಿಯನ್ನು ಹಾಕಬೇಕು. ನಂತರ ಕೆಳಗಿನ ಸೀಸೆಯೊಳಗೆ ಸೀಮೆಎಣ್ಣೆ ಹಾಕಬೇಕು.

ಬಟ್ಟೆಯಿಂದ ಮಾಡಿದ ಬತ್ತಿ ಎಣ್ಣೆಯಲ್ಲಿರಬೇಕು. ನಂತರ ಮೂರ್‍ನಾಲ್ಕು ಮುಚ್ಚಳಗಳನ್ನು ಹಾಕಿ ಸೈಕಲ್‌ ಮುಂಭಾಗದಲ್ಲಿ ಇಟ್ಟು ಓಡಿಸಿದರೆ ಆಯಿತು. ರಾತ್ರಿ ವೇಳೆ ಈ ರೀತಿ ದೀಪಗಳಿಲ್ಲದೆ ಓಡಾಡುವ ಸೈಕಲ್‌ ಸವಾರರಿಗೆ ಅಂದಿನ ಜರ್ಮನಿ ಸರ್ಕಾರ ದಂಡ ವಿಧಿಸುತ್ತಿತ್ತು ಎಂದು ಹೆಳಲಾಗಿದೆ.

ಹೂವಿನ ದಳದ ಆಕಾರದ ನಾಣ್ಯ?: ಆಫ್ರಿಕಾ ಖಂಡದಲ್ಲಿರುವ ಕಟಿಂಗ್‌ ಕ್ರಾಸ್‌ ದೇಶದ ಅರಸನೊಬ್ಬ 40ನೇ ಶತಮಾನದಲ್ಲಿ ಜಾರಿಗೊಳಿಸಿದ ನಾಣ್ಯ ಹೂವಿನ ದಳದ ಆಕಾರದಲ್ಲಿದೆ. ನಾಣ್ಯದಲ್ಲಿನ ಪ್ರಾಣಿಯ ಆಕೃತಿ ಕುದುರೆ ಅಥವಾ ಜಿಂಕೆಯನ್ನು ಹೋಲುತ್ತದೆ.

1773ರಲ್ಲಿ ಫ್ರೆಂಚ್‌ ಅಧೀನದಲ್ಲಿದ್ದ ವಿಂಡ್‌ವಾಡ್‌ ಐಸ್‌ಲ್ಯಾಂಡ್‌ ದೇಶ ಚಲಾವಣೆಗೆ ತಂದ 12 ಸೊಲ್‌ (ಮೌಲ್ಯ) ರೋಚೆಲ್‌ ಮಿಂಟ್‌ (ಕರೆನ್ಸಿ ಹೆಸರು) ಪ್ರದರ್ಶನಲ್ಲಿ ಬಹು ಅಪರೂಪದ ನಾಣ್ಯವಾಗಿತ್ತು. ಒಂದು ಬದಿ ಮೀನು, ಇನ್ನೊಂದು ಬದಿ ಎಲೆಗಳೊಳಗೆ ಅವಿತುಕೊಂಡ ಕೀಟದ ಚಿತ್ರವಿದ್ದ  ನಾಣ್ಯದ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next