ಚನ್ನಪಟ್ಟಣ: ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಪುಟ್ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿ, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಯೋಜನಾ ನಿರ್ದೇಶಕ ಸೂರಜ್ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಪರಿಶೀಲನೆ ನಡೆಸಿ ಮಾತನಾಡಿ, ಹಸಿರು ನ್ಯಾಯಾಧಿಕರಣದ ಆದೇಶ ಹಾಗೂ ಸರ್ಕಾರ ಆದೇಶದನ್ವಯ ತೆರವು ಮಾಡಲಾಗಿದೆ. ಸಾರ್ವಜನಿಕರಿಗೆ ತೊಂದ ರೆಯಾ ಗುವ ಪುಟ್ಪಾತ್ ವ್ಯಾಪಾರವನ್ನು ತೆರವುಗೊಳಿಸಿ, ಪುಟ್ಪಾತ್ ವ್ಯಾಪಾರಿಗಳ ಜೀವನೋಪಾಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆದೇಶ ನೀಡಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪಟ್ಟಣದ ಮಹಾತ್ಮಗಾಂಧಿ ರಸ್ತೆ, ಜೆ.ಸಿ.ರಸ್ತೆ, ಅಂಚೆ ಕಚೇರಿ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಹಳೆಯ ಕೋರ್ಟ್ ರಸ್ತೆ ಹಾಗೂ ರಸ್ತೆಗಳಲ್ಲಿನ ಪುಟ್ಪಾತ್ ತೆರವು ಮಾಡಲಾಗಿದೆ. ರಾಜ್ಯದ ಮುಖ್ಯಮಂತ್ರಿ ಗಳು ಹಾಗೂ ರಾಮನಗರ ಜಿಲ್ಲಾಧಿಕಾರಿಗಳ ಆದೇಶದಂತೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಆದರೆ ಪುಟ್ಪಾತ್ ವ್ಯಾಪಾರಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದರು.
ಖಾಲಿ ಇರುವ ಮಳಿಗೆಗಳ ವ್ಯವಸ್ಥೆ: ಪಟ್ಟಣದ ಕರಬಲ ಮೈದಾನದಲ್ಲಿ ಖಾಲಿ ಇರುವ ಮಳಿಗೆಗಳನ್ನು ಪುಟ್ಪಾತ್ ವ್ಯಾಪಾರಿ ಗಳಿಗೆ ವ್ಯಾಪಾರ ಮಾಡಲು ನೀಡಲಾಗುವುದು. ಇದರ ಸದ್ಬಳಕೆ ಮಾಡಿಕೊಂಡು ನಗರಸಭೆ ಆಡಳಿತದ ಸ್ವಚ್ಛತಾ ಆಂದೋಲನ ಹಾಗೂ ಪ್ರಗತಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಕರಬಲ ಮೈದಾನದಲ್ಲಿ ವ್ಯಾಪಾರ ಮಾಡುವ ಹಾಗೂ ಗ್ರಾಹಕರಿಗೂ ಅವಶ್ಯಕತೆಯಾಗಿರುವ ಶೌಚಾಲಯ, ಕುಡಿಯುವ ನೀರು ಸೇರಿ ಮೂಲ ಸೌಕರ್ಯಗಳನ್ನು ಒದಗಿಸ ಲಾಗಿದೆ. ಒಂದೇ ಸೂರಿನಡಿ ಎಲ್ಲಾ ವಿಧವಾದ ವ್ಯಾಪಾರ ಮಾಡಿ ಕೊಳ್ಳಲು ಸೂಕ್ತವಾದ ಸ್ಥಳವಾಗಿ ರುವುದರಿಂದ ಕರಬಲ ಮೈದಾನದ ಮಳಿಗೆಗಳ ಪ್ರಯೋಜನ ವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪುಟ್ಪಾತ್ ವ್ಯಾಪಾರಿಗಳು ಮಾತನಾಡಿ, ಕೆಲವು ರಸ್ತೆಗಳಲ್ಲಿ ಪುಟ್ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿ ಕೆಲವು ರಸ್ತೆಗಳಲ್ಲಿ ಬಿಟ್ಟಿದ್ದಾರೆ ಎಂದು ದೂರಿದರು. ಪ್ರತಿಕ್ರಿ ಯಿಸಿದ ಸೂರಜ್, ಪ್ರತಿಯೊಂದು ರಸ್ತೆಯಲ್ಲಿಯೂ ಇರುವ ಪುಟ್ಪಾತ್ ವ್ಯಾಪಾರಿಗಳನ್ನು ತೆರವು ಗೊಳಿಸಲಾಗುತ್ತಿದೆ. ಇದರ ಬಗ್ಗೆ ಅನುಮಾನ ಬೇಡ ಎಂದರು. ಸ್ಥಳದಲ್ಲೇ ಇದ್ದ ಪೌರಾಯುಕ್ತ ಪುಟ್ಟಸ್ವಾಮಿ ಅವರಿಗೆ ರಸ್ತೆಯಲ್ಲಿ ವ್ಯಾಪಾರ ಮಾಡುವ ಪುಟ್ಪಾತ್ ವ್ಯಾಪಾರಿಗಳನ್ನ ತೆರವುಗೊಳಿಸುವಂತೆ ಆದೇಶ ನೀಡಿದರು.