Advertisement
ವೆನ್ಲಾಕ್‌ನಲ್ಲಿ ಸದ್ಯ 48 ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು, 38 ವೆಂಟಿಲೇಟರ್‌ಗಳ ಅಳವಡಿಕೆ ಬಾಕಿ ಯಿದ್ದು ಅವುಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ. ಜತೆಗೆ ಹೆಚ್ಚುವರಿಯಾಗಿ 15 ವೆಂಟಿಲೇಟರ್‌ಗಳನ್ನು ಅಳವಡಿಸಲು ಸರಕಾರ ಕ್ರಮ ಕೈಗೊಂಡಿದ್ದು, ಈ ಮೂಲಕ ವೆನ್ಲಾಕ್‌ನಲ್ಲಿ ವೆಂಟಿಲೇಟರ್‌ಗಳ ಸಂಖ್ಯೆ 101ಕ್ಕೆ ಏರಿಕೆಯಾಗಲಿದೆ.
Related Articles
Advertisement
4,720 ಹಾಸಿಗೆಜಿಲ್ಲೆಯ ಎಂಟು ಖಾಸಗಿ ವೈದ್ಯಕೀಯ ಕಾಲೇಜುಗಳು ಅವುಗಳ ಸಾಮರ್ಥ್ಯದ ಶೇ. 50ರಷ್ಟು ಹಾಸಿಗೆಗಳನ್ನು ಮೀಸಲಿಟ್ಟಿವೆ. ಹೀಗಾಗಿ 8 ಕಾಲೇಜುಗಳಲ್ಲಿ ಒಟ್ಟು 4,000 ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆ ಮೀಸಲಿಡಲಾಗಿದೆ. ಜತೆಗೆ, ಜಿಲ್ಲೆಯ ಕೋವಿಡ್ ಆಸ್ಪತ್ರೆಯಾಗಿರುವ ವೆನ್ಲಾಕ್‌ನಲ್ಲಿ 270 ಹಾಸಿಗೆಗಳು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಲಭ್ಯವಿವೆ. ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 450 ಹಾಸಿಗೆಗಳು ಲಭ್ಯವಿವೆ. ವೆಂಟಿಲೇಟರ್ ಅಳವಡಿಕೆ ಶೀಘ್ರ ಪೂರ್ಣ
ವೆನ್ಲಾಕ್‌ನಲ್ಲಿ 48 ವೆಂಟಿಲೇಟರ್‌ಗಳು ಸದ್ಯ ಕಾರ್ಯನಿರ್ವಹಿಸುತ್ತಿದ್ದು, 38 ವೆಂಟಿಲೇಟರ್‌ಗಳ ಅಳವಡಿಕೆ ಶೀಘ್ರದಲ್ಲಿ ಪೂರ್ಣವಾಗಲಿದೆ. ಹಾಗೂ ಇನ್ನೂ ಹೆಚ್ಚುವರಿಯಾಗಿ 15 ವೆಂಟಿಲೇಟರ್ ಅಳವಡಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಲೇಡಿಗೋಷನ್‌ಗೆ 5 ವೆಂಟಿಲೇಟರ್‌ಗಳನ್ನು ಹೊಸದಾಗಿ ಅಳವಡಿಸಲಾಗುವುದು.
- ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು