ಕಲ್ಲುಗುಡ್ಡೆ: ಒಂದೂವರೆ ತಿಂಗಳ ಬಳಿಕ ಕರಾವಳಿಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ನದಿ, ತೋಡು, ಕೆರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಕೃಷಿಕರು ತಮ್ಮ ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದು, ತಿಂಗಳ ಬಳಿಕ ಗದ್ದೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ಬಾರಿ ಎರಡನೇ ಕೊಯ್ಲು ಮಾಡುವ ಬಗ್ಗೆ ರೈತರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮಳೆ ಕೊರತೆ
ಈ ಬಾರಿ ಇನ್ನೂ ಕೂಡ ಉತ್ತಮ ಮಳೆಯಾಗಿಲ್ಲ. ಜೂನ್‌ನಲ್ಲಿ ಮಳೆಯಾಗುತ್ತದೆಂದು ಕಾದಿದ್ದ ರೈತರು, ಕೃಷಿ ಚಟುವಟಿಕೆ ಪ್ರಾರಂಭಿಸಿದ ಬಳಿಕವಾದರೂ ಮಳೆ ಬರಬಹುದೆಂದು ಕೆಲವರು ತಮ್ಮ ಗದ್ದೆಗಳಿಗೆ ಪಂಪ್ ಮೂಲಕ ನೀರು ಹಾಯಿಸಿ ಉಳುಮೆ ಮಾಡಿದರೂ ಮಳೆ ಸುರಿಯದ ಕಾರಣ ಗದ್ದೆಯಲ್ಲಿ ನೀರಿಲ್ಲ ಎನ್ನುತ್ತಾರೆ ಕೃಷಿಕರು.
Advertisement
ಜೂನ್ ತಿಂಗಳಿನಿಂದ ಪ್ರಾರಂಭವಾಗಬೇಕಾದ ಮಳೆ ಈ ಬಾರಿ ಜುಲೈನಲ್ಲಿ ಸಾಧಾರಣ ಪ್ರಮಾಣದಲ್ಲಿ ಸುರಿಯುತ್ತಿದೆ. ಪ್ರಸಕ್ತ ತಿಂಗಳು ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿಕರು ಇದೀಗ ಗದ್ದೆಯನ್ನು ಉಳುಮೆ ಮಾಡಿ, ನೇಜಿ ನಾಟಿ ಮಾಡಲು ಅಣಿಯಾಗಿದ್ದಾರೆ. ತಡವಾಗಿ ಮಳೆಯಾಗಿರುವುದರಿಂದ ಹೆಚ್ಚಿನೆಲ್ಲ ಕಡೆಗಳಲ್ಲಿ ಒಮ್ಮೆಲೆ ಕೃಷಿಕರು ಗದ್ದೆಗೆ ಇಳಿದಿರುವುದಿಂದ ಕಾರ್ಮಿಕರ ಜತೆಗೆ ಉಳುಮೆಗೆ ಟಿಲ್ಲರ್‌ನ ಕೊರತೆಯನ್ನು ಕೃಷಿಕರು ಎದುರಿಸುತ್ತಿದ್ದಾರೆ.
ಕೃಷಿ ಕಾರ್ಯಕ್ಕೆ ತೊಂದರೆಯಾಗಿದೆ
ಈ ಬಾರಿ ಮುಂಗಾರು ಮಳೆಯ ಅಭಾವದಿಂದ ಕೃಷಿ ಕಾರ್ಯ ಚಟುವಟಿಕೆಗಳು 50 ದಿನ ತಡವಾಗಿ ಪ್ರಾರಂಭಗೊಂಡಿದೆ. ಇದೀಗ ಸಾಧಾರಣವಾಗಿ ಮಳೆಯಾಗುತ್ತಿರುವುದರಿಂದ ಎಲ್ಲ ಕಡೆಗಳಲ್ಲಿ ಒಂದೇ ಬಾರಿಗೆ ಗದ್ದೆ ಕೃಷಿಯಲ್ಲಿ ರೈತರೊಂದಿಗೆ ಕೃಷಿ ಕಾರ್ಮಿಕ ಜನರು ತೊಡಗಿಕೊಂಡಿದ್ದಾರೆ. ಇದರಿಂದಾಗಿ ಕಾರ್ಮಿಕರ ಜತೆಗೆ, ಉಳುಮೆ ಮಾಡಲು ಟಿಲ್ಲರ್‌ನ ಕೊರತೆಯನ್ನು ಎದುರಿಸಬೇಕಾಗಿದೆ. ಇದೇ ರೀತಿ ಮುಂದುವರೆದರೆ ಈ ಬಾರಿ ಸುಗ್ಗಿ ಕೊಯ್ಲು ಮಾಡುವುದು ಕಷ್ಟಸಾಧ್ಯ.
– ರವಿಪ್ರಸಾದ್ ಕರೆಂಬಿಲ ನೂಜಿಬಾಳ್ತಿಲ, ಕೃಷಿಕರು
Related Articles
Advertisement