Advertisement

ಎಎನ್‌-32 ಐಎಎಫ್ ವಿಮಾನ ಪತನ : ವಿಮಾನ ಮೂಲಕ ಆರು ಶವ ಅಸ್ಸಾಮಿಗೆ

12:00 PM Jun 21, 2019 | Team Udayavani |

ಇಟಾನಗರ : ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್‌ ಜಿಲ್ಲೆಯ ಆಲೋ ಪರ್ವತ ಶ್ರೇಣಿಯಲ್ಲಿ ಈಚೆಗೆ ಪತನಗೊಂಡಿದ್ದ ಎಎನ್‌-32 ವಿಮಾನ ದುರಂತದಲ್ಲಿ ಮೃತಪಟ್ಟಿದ್ದವರ ಪೈಕಿ ಆರು  ಐಎಎಫ್ ಸಿಬಂದಿಗಳ ಶವವನ್ನು ಮೇಲೆತ್ತಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Advertisement

ಪತನಗೊಂಡ ವಿಮಾನದ ಅವಶೇಷಗಳ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ರಕ್ಷಣಾ ತಂಡವರಿಗೆ ಎಎನ್‌32 ವಿಮಾನದಲ್ಲಿದ್ದು ಮೃತಪಟ್ಟಿದ್ದ ಇತರ ಏಳು ಮಂದಿಯ ದೇಹದ ಅವಶೇಷಗಳು ಕೂಡ ಸಿಕ್ಕಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಿಯಾಂಗ್‌ ಡಿಸಿ ರಾಜೀವ್‌ ತಕೂಕ್‌ ತಿಳಿಸಿರುವ ಪ್ರಕಾರ ಮೃತ ದೇಹಗಳನ್ನು ವಿಮಾನದ ಮೂಲಕ ಬುಧವಾರ ಸಂಜೆ ಆಲೋಗೆ ತರಲಾಗಿದ್ದು ಅವನ್ನು ಅಸ್ಸಾಂ ಗೆ ಒಯ್ಯಲಾಗುತ್ತದೆ  ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next