ಹೊಸದಿಲ್ಲಿ : ಕಳೆದ ಜೂನ್ 3ರಂದು ಅಸ್ಸಾಂ ನ ಜೋರ್ಹಾಟ್ ವಾಯು ನೆಲೆಯಿಂದ ಟೇಕಾಫ್ ಆದ ಅರ್ಧ ತಾಸೊಳಗೆ ನಾಪತ್ತೆಯಾಗಿ ಅರುಣಾಚಲ ಪ್ರದೇಶದ ಲಿಪೋ ಸಮೀಪದ ಅತ್ಯಂತ ಎತ್ತರದ, ಕಡಿದಾದ ಪರ್ವತಕ್ಕೆ ಢಿಕ್ಕಿ ಯಾಗಿ ಪತನಗೊಂಡ ಹತ್ತು ದಿನಗಳ ಬಳಿಕ ಭಾರತೀಯ ವಾಯು ಪಡೆಯ ಎಎನ್-32 ವಿಮಾನದಲ್ಲಿದ್ದ ಎಲ್ಲ 13 ಮಂದಿಯ ಶವ, ಫ್ಲೈಟ್ ಡಾಟಾ ರೆಕಾರ್ಡರ್ (ಬ್ಲಾಕ್ ಬಾಕ್ಸ್) ಮತ್ತು ಕಾಕ್ ಪಿಟ್ ವಾಯ್‌ಸ್ ರೆಕಾರ್ಡರ್ ಪತನ ತಾಣದಲ್ಲಿ ಪತ್ತೆಯಾಗಿದ್ದು ಅವೆಲ್ಲವನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಐಎಎಫ್ ಮೂಲಗಳು ತಿಳಿಸಿವೆ.
ಐಎಎಫ್ ಮೂಲಗಳ ಪ್ರಕಾರ ಅರುಣಾಚಲದಲ್ಲಿ ವಿಮಾನ ಪತನಗೊಂಡ ತಾಣದಿಂದ ಶವಗಳನ್ನು ಹೆಲಿಕಾಪ್ಟರ್ ಮೂಲಕ ರವಾನಿಸಲಾಗುವುದು.
ರಕ್ಷಣಾ ತಂಡದವರು ಹರಸಾಹಸಪಟ್ಟು ದಟ್ಟ ಹಾಗೂ ಕಡಿದಾದ ಅರಣ್ಯ ಪ್ರದೇಶದಲ್ಲಿ ವಿಮಾನ ಪತನಗೊಂಡ ತಾಣಕ್ಕೆ ಇಳಿದು, ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ ಎಂಬುದನ್ನು ಖಾತರಿಪಡಿಸಿಕೊಂಡರು ಎಂದು ಐಎಎಫ್ ಅಧಿಕಾರಿಗಳು ತಿಳಿಸಿದರು.